ಅಂತರ್ರಾಜ್ಯ ಕಳ್ಳರ ಸೆರೆ : ಎರಡು ಬೈಕ್ ಸೇರಿದಂತೆ ಮೂರು ಲಕ್ಷ ಚಿನ್ನಾಭರಣ ವಶ

ಗೋಣಿಕೊಪ್ಪಲು, ಫೆ.21: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ಅಂತರರಾಜ್ಯ ಖದೀಮರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆಯುವದರೊಂದಿಗೆ; ಎರಡು ಬೈಕ್ ಹಾಗೂ ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.