ರಾಹುಲ್ ಗಾಂಧಿ ಸಂಸತ್ ಸ್ಥಾನದಿಂದ ವಜಾಗೊಳಿಸಲು ಆಗ್ರಹ

ಮಡಿಕೇರಿ,ಸೆ.೧೩: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಮೇರಿಕಾದ ಜಾರ್ಜ್ ಟೌನ್ ವಿಶ್ವ ವಿದ್ಯಾನಿಲಯದಲ್ಲಿ ಭಾರತ ದೇಶದಲ್ಲಿ ಮೀಸಲಾತಿಯನ್ನು ರದ್ದುಪಡಿಸುವುದಾಗಿ ಹೇಳಿರುವುದನ್ನು ಖಂಡಿಸಿ ಕೊಡಗು ಜಿಲ್ಲಾ

vಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಯೋಧರಿಗೆ ಸನ್ಮಾನ

ಗೋಣಿಕೊಪ್ಪಲು, ಸೆ. ೧೩ : ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೇನೆಯಲ್ಲಿ

ಉನ್ನತಿಗೆ ಚಿನ್ನ ಬೋಪಣ್ಣಗೆ ಕಂಚು

ಮಡಿಕೇರಿ, ಸೆ. ೧೩: ಚೆನ್ನೆöÊಯಲ್ಲಿ ಜರುಗುತ್ತಿರುವ ನಾಲ್ಕನೇಯ ಆವೃತ್ತಿಯ ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಕ್ರೀಡಾಪುಟಗಳಾದ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಹಾಗೂ

ವಿವಿಧೆಡೆ ಗಣೇಶ ವಿಸರ್ಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಿಗೆ ಡೈರಿ ಕೂಡಿಗೆ ಕೂಡಿಗೆ ಡೈರಿ ಅಧಿಕಾರಿಗಳ ವರ್ಗ ಕಾರ್ಮಿಕ ವೃಂದ ಸೇರಿ ಕೂಡಿಗೆ ಡೈರಿ ಸಭಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜನೆ ನೆರವೇರಿಸಲಾಯಿತು ವಿಸರ್ಜನೆ ಅಂಗವಾಗಿ ಶ್ರೀ ಗಣಪತಿಯ ವಿಗ್ರಹವನ್ನು ಅಲಂಕೃತವಾದ ಭವ್ಯ ವಿದ್ಯುತ್ ಮಂಟಪದಲ್ಲಿ ಕುಳ್ಳಿರಿಸಿ ವಿವಿಧ ಪೂಜೆ ಸಲ್ಲಿಸಿ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಂತರ ಹಾರಂಗಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು ಈ ಸಂದರ್ಭ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆಕೆ ಹೇಮಂತ್ ಕುಮಾರ್ ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಪ್ರಧಾನ ವ್ಯವಸ್ಥಾಪಕಿ ಮಾನಸ ಪಾಟೀಲ್ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮಲ್ಲೇಶ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿ ವರ್ಗದವರು ಕಾರ್ಮಿಕ ವೃಂದದವರು ಹಾಜರಿದ್ದರು ಈ ಸಂದರ್ಭ ಡೈರಿ ವತಿಯಿಂದ ಶಾಲಾ ಕಾಲೇಜು ಸ್ಥಳೀಯ ವಿವಿಧ ಸಂಸ್ಥೆಯ ಅಧಿಕಾರಿ ವರ್ಗದವರು ಹಾಜರಿದ್ದರು ಅಶೋಕಪುರದಲ್ಲಿ ಕಾರ್ಯಕ್ರಮ ಮಡಿಕೇರಿ ನಗರದ ಅಶೋಕಪುರ ಗಣೇಶ ಉತ್ಸವ ಸಮಿತಿಯ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ೫೦ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ತಾ ೧೫ ರಂದು ಬೆಳಿಗ್ಗೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅಶೋಕಪುರದ ನಿವಾಸಿಗಳಿಗೆ ಆಟೋಟ ಸ್ಪರ್ಧೆ ಅಂಬೇಡ್ಕರ್ ಭವನದಲ್ಲಿ ತಾ ೧೬ ರಂದು ನಾಗರಹೊಳೆಯ ನಾಣಚ್ಚಿ ಹಾಡಿ ಕಲಾತಂಡದಿAದ ನೃತ್ಯ ಕಾರ್ಯಕ್ರಮ ತಾ ೧೭ರಂದು ಸಭಾ ಕಾರ್ಯಕ್ರಮ ಹಾಗೂ ಅಶೋಕಪುರದ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂಜಿ ಸುನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮಮಂದಿರದಲ್ಲಿ ನಡೆಯುತ್ತಿರುವ ೬೦ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಬುಧವಾರ ರಾತ್ರಿ ಕುಂದನ್ ನೃತ್ಯಾಲಯ ತಂಡ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ ತಂಡದಿAದ ಮೂಡಿಬಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಎಲ್ಲರನ್ನು ಮನಸೂರೆಗೊಳಿಸಿತು ಗಣೇಶ ಸ್ತೋತ್ರದ ನಾಟ್ಯದೊಂದಿಗೆ ಆರಂಭಗೊAಡ ನೃತ್ಯ ಕಲಾ ವೈಭವ ಅತ್ಯಾಕರ್ಷಣೀಯವಾಗಿ ಮೂಡಿಬಂದಿತು ಪುಟಾಣಿ ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು ಕರ್ನಾಟಕದ ಇತಿಹಾಸದಲ್ಲಿ ಮೂಷಿಕ ವಾಹನ ಬ್ರಹ್ಮ ಮುಖಟ ಕಾಂತಾರ ಸೇರಿದಂತೆ ಹತ್ತಾರು ಸುಂದರ ವೈವಿಧ್ಯಮಯ ಹಾಡುಗಳಿಗೆ ಭರತನಾಟ್ಯದ ಮೂಲಕ ಎಲ್ಲರನ್ನು ಮನರಂಜಿಸಿದರು ಕೊನೆಯಲ್ಲಿ ಕಥಕ್ಕಳಿ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು ಕುಂದನ್ ನೃತ್ಯಾಲಯದ ವಿನುತಾ ಹೇಮಂತ್ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ನ ರಶ್ಮಿ ಶಿವಕುಮಾರ್ ಅವರ ನೇತೃತ್ವದ ತಂಡ ಮನಮೋಹಕ ಭರತನಾಟ್ಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು ನಂತರಮಾಹಾಪೂಜೆ ವಿಶೇಷ ಪೂಜೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತುನಾಪೋಕ್ಲು ಗೌರಿಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅತ್ಯಂತ ವಿಜೃಂಭಣೆಯಿAದ ಬುಧವಾರ ನಡೆಯಿತು ಇಲ್ಲಿನ ಕಕ್ಕುಂದ ಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ವತಿಯಿಂದ ೧೯ನೇ ವರ್ಷದ ಅದ್ದೂರಿ ಗೌರಿ ಗಣೇಶ ಉತ್ಸವ ಅಂಗವಾಗಿ ಮದ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು ಗದಗದ ಮಹಿಳಾ ತಂಡದಿAದ ಡೊಳ್ಳುಕುಣಿತ ಉಡುಪಿಯ ಕೀಲು ಗೊಂಬೆಗಳು ಸೇರಿದಂತೆ ಇತರ ಕಲಾತಂಡದೊAದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪದೊAದಿಗೆ ನಡೆಯಿತು ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ನಡೆದ ೧೯ನೇ ವರ್ಷದ ಗೌರಿ ಗಣೇಶ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ ರವಿ ಬಳಗದಿಂದ ಸಂಗೀತ ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು ಸಂಜೆ ಅತ್ಯಾಕರ್ಷಕವಾದ ಕೊಯ್ಕೋಡ್ನ ಲೈಟಿಂಗ್ಸ್ ವೇಷಭೂಷಣ ತೊಟ್ಟ ದೇವಕನ್ಯೆಯರಿಂದ ನೃತ್ಯ ಶಬರಿಮಲೆ ಅಯ್ಯಪ್ಪನ ಬೃಹತ್ ಆಕಾರದ ಪ್ರತಿರೂಪದೊಂದಿಗೆ ಆಕರ್ಷಕ ಮಂಟಪ ಹಾಗೂ ಪಟಾಕಿ ಚಿತ್ತಾರ ವಿಶೇಷವಾಗಿತ್ತು ಹಳೆತಾಲೂಕು ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ ೧೫ನೇ ವರ್ಷದ ಗೌರಿ ಗಣೇಶ ಉತ್ಸವದಲ್ಲಿ ಮಡಿಕೇರಿಯ ಇವೆಂಟ್ಸ್ ತಂಡದವರಿAದ ಚಲಿಸುವ ಬೃಹತ್ ಗಾತ್ರದ ದೇವತೆಗಳ ರಾಕ್ಷಸರ ಪ್ರತಿರೂಪ ದೊಂದಿಗೆ ಗಣೇಶನ ಕಥಾವಸ್ತು ಹಾಗೂ ಬೆಂಗಳೂರಿನ ಪಿಎಸ್ಎಲ್ ಅವರಿಂದ ಆಕರ್ಷಕ ಲೈಟಿಂಗ್ ಸೌಂಡ್ಸ್ ಪ್ರದರ್ಶನದೊಂದಿಗೆ ಸಿಡಿಮದ್ದು ಪ್ರದರ್ಶನ ಸಾರ್ವಜನಿಕರನ್ನು ರೋಮಾಂಚನಗೊಳಿಸಿತು ನಾಪೋಕ್ಲುನಾಡು ಗೌರಿಗಣೇಶ ಸಮಿತಿ ವತಿಯಿಂದ ಹಳೆತಾಲೂಕಿನ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶನ ಮಂಟಪ ಹಾಗೂ ಶ್ರೀ ರಾಮ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿದ್ದ ಗಣೇಶಮೂರ್ತಿಯ ಮಂಟಪಗಳೂ ವಿಶೇಷ ಆಕರ್ಷಣೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದವು ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನಸಾಗರಕ್ಕೆ ಪೊಲೀಸ್ ಇಲಾಖೆ ವತಿಯಿಂದ ಡಿವೈಎಸ್ಪಿ ಮಹೇಶ್ ಕುಮಾರ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿಗಳಿAದ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿತ್ತುಮುಳ್ಳೂರು ಸಮೀಪದ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ೧೪ನೇ ವರ್ಷದ ಗೌರಿ ಗಣೇಶ ಸೇವಾ ಸಮಿತಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಬುಧವಾರ ರಾತ್ರಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಭ ಆಲೂರು ಸಿದ್ದಾಪುರ ಗ್ರಾಪಂ ಸದಸ್ಯ ಪಿಎನ್ ಗಂಗಾಧರ್ ಮಾತನಾಡಿ ಗ್ರಾಮದಲ್ಲಿ ಒಗ್ಗಟ್ಟು ಇದ್ದಲ್ಲಿ ಗ್ರಾಮ ಅಭಿವೃದ್ದಿಯಾಗುತ್ತದೆ ಈ ನಿಟ್ಟಿನಲ್ಲಿ ಕಣಿವೆ ಬಸವನಹಳ್ಳಿ ಗ್ರಾಮಸ್ಥರು ಒಗ್ಗಟ್ಟಾಗಿ ಕಳೆದ ೧೪ ವರ್ಷಗಳಿಂದ ಗೌರಿ ಗಣೇಶ ಸೇವಾ ಸಮಿತಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಸಾಧಕರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಈ ಮೂಲಕ ಗ್ರಾಮವು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್ಜೆ ಪ್ರಸನ್ನಕುಮಾರ್ ಮಾಲಂಬಿ ಗ್ರಾಮ ಸಮಿತಿ ಅಧ್ಯಕ್ಷ ಎಂಇ ವೆಂಕಟೇಶ್ ಮಾಲಂಬಿ ಕನ್ನಂಬಾಡಿ ಅಮ್ಮನವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಂಡಿ ಸುರೇಶ್ ಮಾತನಾಡಿದರು ಗೌರಿ ಗಣೇಶ ಸೇವಾ ಸಮಿತಿ ಅಧ್ಯಕ್ಷ ಸೂರಜ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ಸುಶೀಮ್ ಗೌಡ ಕುಶಾಲಪ್ಪ ಸಿಂಧು ಕುಮಾರ್ ಲಕ್ಷಿö್ಮ ಶಂಕರ್ ಅರ್ಚಕ ಲಿಂಗರಾಜು ಮುಂತಾದವರಿದ್ದರು ಈ ಸಂದರ್ಭ ತೊರೆನೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಗ್ರಾಮದ ಪ್ರಮುಖರಾದ ಕೆಆರ್ ಅನಿಲ್ ಅವರನ್ನು ಸೇವಾ ಸಮಿತಿ ವತಿಯಿಂದ ಸನ್ಮಾನಿಸಿದರು ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತುಚೆಟ್ಟಳ್ಳಿ ಕಾಫಿಬೋರ್ಡ್ ಶ್ರೀ ಶಕ್ತಿಗಣಪತಿ ದೇವಾಲಯ ಸಮಿತಿ ವತಿಯಿಂದ ೩೭ ನೇ ವರ್ಷದ ಗೌರಿಗಣೇಶೋತ್ಸವ ನೆರವೇರಿತು ತಾ೭ ರಂದು ಗೌರಿಗಣೇಶ ಉತ್ಸವ ಮೂರ್ತಿಯನ್ನು ಪ್ರತಿಪ್ಠಾಪಿಸಲಾಗಿ ಪೂಜಾ ಕೈಂಕರ್ಯ ನಡೆಯಿತು ತಾ೧೧ರಂದು ಸಂಜೆ ಉತ್ಸವಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಮೆರವಣಿಗೆಯೊಂದಿಗೆ ಚೆಟ್ಟಳ್ಳಿ ಪಟ್ಟಣದವರೆಗೆ ತೆರಳಿ ನಂತರ ಕಾಫಿಬೋರ್ಡಿನ ಗೌರಿಕೆರೆಯಲ್ಲಿ ವಿಸರ್ಜಿಸಲಾಯಿತು ವೀರಾಜಪೇಟೆ ಕದನೂರು ಶ್ರೀ ಸಿದ್ದಿ ವಿನಾಯಕ ಉತ್ಸವ ಸಮಿತಿ ವತಿಯಿಂದ ೯ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು ಐದು ದಿನಗಳ ಕಾಲ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಕದನೂರು ವೇಬ್ರಿಡ್ಜ್ ಜಂಕ್ಷನ್ವರೆಗೆ ಮೆರವಣಿಗೆಯಲ್ಲಿ ತೆರಳಿ ಹಿಂದಿರುಗಿ ಅರಮೇರಿ ಮಠದ ರಸ್ತೆಯವರೆಗೆ ಉತ್ಸವಮೂರ್ತಿ ರಥ ತೆರಳಿತು ಬಳಿಕ ಕದನೂರು ಹೊಳೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸಮಿತಿಯ ಅಧ್ಯಕ್ಷ ಪುನೀತ್ ಉಪಾಧ್ಯಕ್ಷ ನಿತೀನ್ ಕಾರ್ಯದರ್ಶಿ ಮನು ಬೋಪಣ್ಣ ಮತ್ತು ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರುವೀರಾಜಪೇಟೆ ವೀರಾಜಪೇಟೆ ಹೊರವಲಯದ ಕೋಟೆಕೊಪ್ಪದ ಶ್ರೀ ವೆಂಕಟೇಶ್ವರ ವಿನಾಯಕ ಸೇವಾ ಸಮಿತಿ ವತಿಯಿಂದ ವಿಘ್ನೇಶ್ವರ ಮತ್ತು ಗೌರಿಯ ಪ್ರತಿಷ್ಠಾಪಿತ ಮೂರ್ತಿಗಳ ವಿಸರ್ಜನೆ ನಡೆಯಿತು ಸುಮಾರು ಮೂರು ದಶಮಾನಗಳಿಂದ ಈ ಗ್ರಾಮದಲ್ಲಿ ನಿರಂತರವಾಗಿ ಉತ್ಸವಮೂರ್ತಿಯನ್ನು ಪ್ರತಿವರ್ಷ ಪ್ರತಿಷ್ಠಾಪಿಸಲಾಗುತ್ತಿದೆ ಸುಮಾರು ಐದು ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ ಪಿ ಡಾಲು ಮಾತನಾಡಿ ಸಾರ್ವಜನಿಕ ಚಂದಾ ವಸೂಲಿ ಮಾಡದೆ ಸಂಘದ ಸದಸ್ಯರು ಹಾಗೂ ಊರಿನ ನಾಗರಿಕರು ಮಾತ್ರ ತಮ್ಮ ಸ್ವಂತ ಹಣವನ್ನು ಕ್ರೋಢೀಕರಿಸಿ ಈ ಉತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿರುವುದರಿಂದ ಯಶಸ್ವಿಯಾಗಿ ಉತ್ಸವ ನಡೆಯುತ್ತಿದೆ ಎಂದರು ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅವರಣದಲ್ಲಿರುವ ಶ್ರೀ ಗಣಪತಿ ದೇವಸ್ಥಾನದ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಸಂಭ್ರಮದಿAದ ನಡೆಯಿತು ೪೨ ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಏಳು ದಿನಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಅನ್ನದಾನ ಸೇವೆಗಳು ಜರುಗಿದವು ವಿಸರ್ಜನೋತ್ಸವದಂದು ಬೆಳಿಗ್ಗೆ ಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆದು ಮದ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಸೇವೆಗಳು ನಡೆದವು ಧಾರ್ಮಿಕ ಕಾರ್ಯಕ್ರಮದ ಬಳಿಕ ಗೌರಿ ಗಣೇಶ ಮೂರ್ತಿಯನ್ನು ಹೂವಿನ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶೋಭಯಾತ್ರೆಯ ಮೂಲಕ ತೆರಳಿ ಸಮೀಪದ ಮೂಲೆ ಅಂಗಡಿ ಹೊಳೆಯಲ್ಲಿ ವಿಸರ್ಜನಾ ಕಾರ್ಯವನ್ನು ನಡೆಸಲಾಯಿತು ಶೋಭಯಾತ್ರೆಯ ಸಂದರ್ಭದಲ್ಲಿ ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ದಕ್ಷಿಣ ಕನ್ನಡ ಮತ್ತು ಸ್ಥಳೀಯ ಕಲಾವಿದರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಗ್ರಾಮಸ್ಥರು ಉಪಸ್ಥಿತರಿದ್ದರು ಸೋಮವಾರಪೇಟೆ ಪಟ್ಟಣದ ಕುರುಹಿನಶೆಟ್ಟ ಸಮಾಜದಿಂದ ರಾಮಮಂದಿರದಲ್ಲಿ ಹಾಗೂ ಬ್ರಾಹ್ಮಣ ಸಮಾಜದಿಂದ ಸೋಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣಪತಿ ಉತ್ಸವ ಮೂರ್ತಿಗಳ ವಿಸರ್ಜನಾ ಮಹೋತ್ಸವ ಪಟ್ಟಣದಲ್ಲಿ ನಡೆಯಿತು ವಿದ್ಯುತ್ ದೀಪಾಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಆನೆಕೆರೆಯಲ್ಲಿ ವಿಸರ್ಜಿಸಲಾಯಿತುಮಡಿಕೇರಿ ಸಂಪಾಜೆಯ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ ೩೧ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಆಚರಣೆಯನ್ನು ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು ತಾ ೬ ಭವ್ಯವಾದ ಮಂಟಪದಲ್ಲಿ ಗೌರಿ ಗಣೇಶರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು ಆಚರಣೆ ಅಂಗವಾಗಿ ಕೀಲಾರು ರಾಜಾರಾಮ ಮತ್ತು ಕೋಡಿ ಲಕ್ಷö್ಮಣರವರ ಗದ್ದೆಯಲ್ಲಿ ಪುರುಷರ ಮತ್ತು ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು ಪುರುಷರ ವಿಭಾಗದಲ್ಲಿ ಶ್ರೀ ವಿಷ್ಣು ಅಡ್ಕ ಎ ತಂಡ ಪ್ರಥಮ ಬಿ ತಂಡ ದ್ವಿತೀಯ ಮಹಿಳೆಯರ ವಿಭಾಗದಲ್ಲಿ ನಾಗಶ್ರೀ ಸುಳ್ಯ ತಂಡ ಪ್ರಥಮ ಹಾಗೂ ಆದರ್ಶ ಫ್ರೆಂಡ್ಸ್ ಮಹಿಳಾ ತಂಡ ಚಡಾವು ದ್ವಿತೀಯ ಸ್ಥಾನ ಪಡೆದುಕೊಂಡಿತು ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಿತು ಭಜನಾ ಮಂಡಳಿಯವರಿAದ ಭಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ತಾ ೭ ರಂದು ಧಾರ್ಮಿಕ ಕಾರ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ತಾ ೮ ರಂದು ಶೋಭಾಯಾತ್ರೆಯು ಉತ್ಸವ ಸ್ಥಳದಿಂದ ಪುಷ್ಪಾಲಂಕೃತವಾದ ರಥದಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಿತು ಚೌಕಿಯ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು ಸಂಪಾಜೆ ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆಯು ತಾ ೭ರಂದು ಜರುಗಿತು ಶ್ರೀ ದೇವಳದ ಸಭಾಭವನದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠೆ ನಡೆಯಿತು ಹಾಗೆಯೇ ಶ್ರೀ ಪಂಚಲಿAಗೇಶ್ವರ ದೇವರಿಗೆ ಪೂಜಾ ವಿಧಿ ವಿಧಾನಗಳು ನಡೆದವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಈ ಸಂದರ್ಭ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಹನಿಯಡ್ಕ ಕಾರ್ಯದರ್ಶಿ ಪುರುಷೋತ್ತಮ ನೂಜೇಲು ಕೋಶಾಧಿಕಾರಿ ಶಭರೀಶ್ ಕುದ್ಕುಳಿ ಸಂಚಾಲಕ ಲೋಹಿತ್ ಹೊದ್ದೆಟ್ಟಿ ಉದ್ಯಮಿ ಲೋಕೇಶ್ ಹೊದ್ದೆಟ್ಟಿ ಹಾಗೂ ಇತರರು ಇದ್ದರು ವಿವಿಧ ಸ್ಪರ್ಧೆ ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮಮಂದಿರದಲ್ಲಿ ನಡೆಯುತ್ತಿರುವ ೬೦ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಇಲ್ಲಿನ ಮಂಜನಾಥಯ್ಯ ಮಿನಾಕ್ಷಮ ಕಲ್ಯಾಣ ಮಂಟಪದಲ್ಲಿ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರು ಯುವತಿಯರು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು ರಂಗೋಲಿ ಸ್ಪರ್ಧೆಯಲ್ಲಿ ಸ್ವಾತಿ ಪ್ರ ಲಿಖಿತ ದ್ವಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಮೌಲ್ಯ ಪ್ರ ಮಹಿಳೆಯರ ವಿಭಾಗದಲ್ಲಿ ಲೀಲಾವತಿಪ್ರ ಸ್ಪೂನ್ನಲ್ಲಿ ನಿಂಬೆಹಣ್ಣು ಸ್ಪರ್ಧಿಯ ಪ್ರಾಥಮಿಕ ವಿಭಾಗದಲ್ಲಿ ತನ್ವಿಕಪ್ರ ಮೌಲ್ಯ ದ್ವಿ ವಂಶಿನಿತೃ ಪ್ರೌಢಶಾಲಾ ವಿಭಾಗದಲ್ಲಿ ಲಿಖಿತಪ್ರ ಡ್ಯಾನಿಲ್ದ್ವಿ ಮಹಿಳೆಯರ ವಿಭಾಗದಲ್ಲಿ ಜಯಶ್ರೀಪ್ರ ಶೀಲಾದ್ವಿ ಅಶ್ವಿನಿತೃ ಬಹುಮಾನವನ್ನು ಪಡೆದುಕೊಂಡರು ವೀರಾಜಪೇಟೆ ಇತಿಹಾಸ ಪ್ರಸಿದ್ದ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ವಿದ್ಯಾರ್ಥಿಗಳ ಭಜನಾ ನೃತ್ಯ ಸಂಕೀರ್ತನೆಗಳು ಜನಮನ್ನಣೆಗಳಿಸಿಕೊಂಡಿತು ಗಣಪತಿ ದೇವಾಲಯದ ಆವರಣದಲ್ಲಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ವೇಳೆ ಭಜನ ನೃತ್ಯ ಪ್ರದರ್ಶನ ನಡೆದು ಬಳಿಕ ಮೆರವಣಿಗೆ ಮುಖಾಂತರ ದೇವಾಲಯಕ್ಕೆ ತರಲಾಯಿತು ಈ ವೇಳೆ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು

x ಕೂಡಿಗೆ: ಕೂಡಿಗೆ ಡೈರಿ ಅಧಿಕಾರಿಗಳ ವರ್ಗ, ಕಾರ್ಮಿಕ ವೃಂದ ಸೇರಿ ಕೂಡಿಗೆ ಡೈರಿ ಸಭಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜನೆ ನೆರವೇರಿಸಲಾಯಿತು. ವಿಸರ್ಜನೆ ಅಂಗವಾಗಿ ಶ್ರೀ

ಬಿಜೆಪಿ ಬೆಂಬಲಿತ ಪದಾಧಿಕಾರಿಗಳಿಗೆ ಸನ್ಮಾನ

*ಗೋಣಿಕೊಪ್ಪ, ಸೆ. ೧೩: ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಹುದಿಕೇರಿ ಪ್ಯಾಕ್ಸ್