ಗೋಣಿಕೊಪ್ಪಲು, ಸೆ. ೧೩ : ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೇನೆಯಲ್ಲಿ ನಿವೃತ್ತಿ ಹೊಂದಿದ ಮೇಜರ್ ಜನರಲ್ ಪಾರುವಂಗಡ ಕಾರ್ಯಪ್ಪ, ಕರ್ನಲ್ ಮಾಚಂಗಡ ಕರುಂಬಯ್ಯ, ಕರ್ನಲ್ ಬಿ.ಎಸ್.ಗೋಕುಲ, ಪ್ರಸ್ತುತ ಸೇವೆಯಲ್ಲಿರುವ ಬ್ರಿಗೇಡಿಯರ್ ಶಿಶಿರ್ ತಮ್ಮಯ್ಯ, ಬೈರಂಬಾಡ ಪ್ಯಾಕ್ಸ್ ಅಧ್ಯಕ್ಷ, ನಿವೃತ್ತ ಕರ್ನಲ್ ಕಂಡ್ರತAಡ ಸುಬ್ಬಯ್ಯ ಇವರ ಸೇವೆಯನ್ನು ಪರಿಗಣಿಸಿ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೇಜರ್ ಜನರಲ್ ಪಾರುವಂಗಡ ಕಾರ್ಯಪ್ಪ, ಬ್ರಿಗೇಡಿಯರ್ ಶಿಶಿರ್ ತಮ್ಮಯ್ಯನವರ ಪರವಾಗಿ ಅವರ ಮನೆಯವರು ಸನ್ಮಾನ ಸ್ವೀಕರಿಸಿದರು.

(ಮೊದಲ ಪುಟದಿಂದ) ಸನ್ಮಾನ ಸ್ವೀಕರಿಸಿ ಮಾತನಾಡಿದ ನಿ. ಕರ್ನಲ್ ಕೆ.ಸುಬ್ಬಯ್ಯ ಹಾಗೂ ನಿ. ಕರ್ನಲ್ ಬಿ.ಎಸ್.ಗೋಕುಲ್,ನಿವೃತ್ತ ಯೋಧರಿಗೆ ಗೌರವ ಸಿಗುತ್ತಿರುವುದು ಶ್ಲಾಘನೀಯ. ಮುಂದೆ ರೈತರಿಗೂ ಸೇರಿದಂತೆ ನಿವೃತ್ತ ಯೋಧರಿಗೆ ಗೌರವ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಬಾಳೆಲೆ ಪ್ಯಾಕ್ಸ್ ಆಡಳಿತ ಮಂಡಳಿ ಕೈಗೊಂಡ ಉತ್ತಮ ಕಾರ್ಯವನ್ನು ಶ್ಲಾಘಿಸಿದರು.

ಮಹಾಸಭೆ :ಬಾಳೆಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೫೨,೪೦,೯೪೩ ಲಕ್ಷ ಲಾಭಾಂಶದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಪ್ರಸ್ತುತ ಸಂಘದ ಸದಸ್ಯರಿಗೆ ಶೇ.೨೦ ಡಿವಿಡೆಂಡ್ ನೀಡಲು ಮಹಾಸಭೆಯು ನಿರ್ಧಾರ ಕೈಗೊಂಡಿದೆ ಅಲ್ಲದೆ ಇದೇ ಮೊದಲ ಬಾರಿಗೆ ನಿವೃತ್ತ ಯೋಧರನ್ನು ಸನ್ಮಾನಿಸುವ ಮೂಲಕ ಯೋಧರಿಗೆ ಗೌರವ ನೀಡಲಾಯಿತು. ಇಂತಹ ವಿನೂತನ ಪ್ರಯತ್ನವನ್ನು ಮೊದಲ ಬಾರಿಗೆ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಮುಂದಿನ ಸಾಲಿನಲ್ಲಿಯೂ ಯೋಧರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ ಹೇಳಿದರು.

ಬಾಳೆಲೆಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ೬೨ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಗ್ರಾಮೀಣ ಭಾಗದ ೧೭೩೬ ಸದಸ್ಯರಿದ್ದು, ಸದಸ್ಯರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ವಿತರಿಸಿದ್ದೇವೆ. ಸಂಘದ ಸದಸ್ಯರ ಹಿತ ಕಾಪಾಡುವುದು ಸಂಘದ ಮೂಲ ಉದ್ದೇಶವಾಗಿದೆ. ಈಗಾಗಲೇ ಪೊನ್ನಪ್ಪಸಂತೆಯಲ್ಲಿ ಪ್ರಾರಂಭಿಸಲಾಗಿರುವ ಶಾಖೆಯು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಸಿಬ್ಬಂದಿಗಳು ಪ್ರತಿನಿತ್ಯ ಮಧ್ಯಾಹ್ನದವರೆಗೂ ಸಂಘದ ಸದಸ್ಯರಿಗೆ ಸೇವೆ ನೀಡುತ್ತಿದ್ದಾರೆ.

ಸಂಘದ ಸದಸ್ಯರಿಗೆ ರಸಗೊಬ್ಬರ ವಿತರಣೆ ಹಾಗೂ ಸಂಘದ ಆರ್ಥಿಕ ಚಟುವಟಿಕೆಯನ್ನು ಸ್ಥಳೀಯ ಮಟ್ಟದಲ್ಲಿಯೇ ಸಿಗುವಂತೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಸಂಘದ ಸದಸ್ಯರ ಪೂರ್ಣ ಸಹಕಾರ ಲಭಿಸುತ್ತಿರುವುದು ಶ್ಲಾಘನೀಯ. ಸಂಘವು ಲಾಭಾಂಶದಲ್ಲಿ ಮುಂದುವರೆಯುತ್ತಿರುವುದರಿAದ ಸದಸ್ಯರಿಗೆ ಪ್ರಸ್ತುತ ಸಾಲಿನಲ್ಲಿ ಶೇ.೨೦ ಡಿವಿಡೆಂಟ್ ನೀಡಲು ಮಹಾಸಭೆ ಒಪ್ಪಿಗೆ ನೀಡಿರುವುದರಿಂದ ಡಿವಿಡೆಂಟ್ ನೀಡಲಾಗುತ್ತಿದೆ ಸಂಘದಲ್ಲಿ ಸದಸ್ಯರು ಹೆಚ್ಚಿನ ವಹಿವಾಟು ನಡೆಸುವಂತಾಗಬೇಕು. ಇದರಿಂದ ಸಂಘವು ಇನ್ನಷ್ಟು ಪ್ರಗತಿ ಸಾಧಿಸಲು ಅನುಕೂಲವಾಗಲಿದೆ ಎಂದ ನಿವೃತ್ತ ಯೋಧರಿಗೆ ಠೇವಣಿ ಇರುವ ಸಂದರ್ಭ ಹೆಚ್ಚಿನ ಬಡ್ಡಿ ನೀಡಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಮಹಾಸಭೆಯು ತೀರ್ಮಾನ ನೀಡಬೇಕೆಂದು ತಿಳಿಸಿದರು. ಮೊದಲ ಬಾರಿಗೆ ನಿವೃತ್ತ ಯೋಧರಿಗೆ ಹೆಚ್ಚಿನ ಬಡ್ಡಿ ನೀಡಲು ಮಹಾಸಭೆಯು ಒಪ್ಪಿಗೆ ನೀಡಿತು. ಠೇವಣಿಗೆ ಇರುವ ಇತರ ಬಡ್ಡಿಯಲ್ಲಿ ಯೋಧರಿಗೆ ಸೀಮಿತಗೊಳಿಸಿ ೦.೫ನ್ನು ಹೆಚ್ಚುವರಿ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಸ್ತುತ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನವನ್ನು ನೀಡಲಾಯಿತು. ಆಡಳಿತ ಮಂಡಳಿಯು ಪ್ರತಿ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಅಂತಿಮ ತೀರ್ಮಾನಗಳನ್ನು ಕೈಗೊಂಡು ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಸಂಘದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪ್ರಸ್ತುತ ಸಂಘವು ೫೨,೪೦,೯೪೩ ಲಕ್ಷ ಲಾಭ ಗಳಿಸಿದೆ. ರೈತರಿಗೆ ಇನ್ನಷ್ಟು ಪ್ರಯೋಜನಕಾರಿ ಕೆಲಸ ಮಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಸಂಘದ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.

ಸಂಘದ ಸದಸ್ಯರು ಕೇಳಿದ ಹಲವು ಪ್ರಶ್ನೆಗಳಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ.ಎ.ಸೀತಮ್ಮ ಉತ್ತರಿಸಿದರು.

ಸಂಘದ ಹಿರಿಯ ಸದಸ್ಯರಾದ ಆಳಮೇಂಗಡ ಬೋಸ್, ಆದೇಂಗಡ ವಿನು ಚಂಗಪ್ಪ ಆದೇಂಗಡ ಅಶೋಕ್, ಮಾಚಂಗಡ ಸುಜಾ ಪೂಣಚ್ಚ, ಮಚ್ಚಮಾಡ ಮಾಚಯ್ಯ,ಅಳಮೇಯಂಗಡ ರವಿ, ಚೆಕ್ಕೆರ ಮಾದಪ್ಪ, ಮಲ್ಚೀರ ನಾಣಯ್ಯ, ಪೋಡಮಾಡ ಸುಖೇಶ್ ಭೀಮಯ್ಯ, ಮುಕ್ಕಾಟಿರ ವಾಸು ಕಾವೇರಪ್ಪ ಸೇರಿದಂತೆ ಹಲವು ಸದಸ್ಯರು ಉಪಯುಕ್ತ ಸಲಹೆಗಳನ್ನು ಒದಗಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಚಂಗಡ ಆರ್.ಗಾಯತ್ರಿ, ನಿರ್ದೇಶಕರಾದ ಆದೇಂಗಡ ಕೆ.ಚಂದ್ರಶೇಖರ್, ಪೋಡಮಾಡ ಜ್ಯೋತಿ.ನಾಚಪ್ಪ, ಕಾಂಡೆರ ಎಂ.ತೇಜ, ಮಾಚಂಗಡ ಎಂ.ಮುತ್ತಣ್ಣ, ಕಳ್ಳಿಚಂಡ ಬಿ.ಚಿತ್ರ, ಅಡ್ಡೆಂಗಡ ಆರ್.ಗೀತ, ಟಿ.ಕೆ. ಚಂದ್ರ, ಕೆ.ಆರ್. ಗಜಾನನ, ಹೆಚ್.ಹೆಚ್. ಗಣೇಶ್, ಲಲಿತ, ಹೆಚ್.ಎಂ. ಬಸವರಾಜು, ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕರು ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.