ಪುಟಾಣಿ ರೈಲಿಗೆ ರೂ. 2 ಕೋಟಿಯ ಕಾಯಕಲ್ಪ ಮಡಿಕೇರಿ, ಜ. 7: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ರಾಜಾಸೀಟ್‍ಗೆ ಹೊಂದಿಕೊಂಡಿರುವ ‘ಕಾವೇರಿ ಎಕ್ಸ್‍ಪ್ರೆಸ್’ ಪುಟಾಣಿ ರೈಲಿಗೆ ಕಾಯಕಲ್ಪ ನೀಡಲು ರೂ. 2 ಕೋಟಿ ವೆಚ್ಚದ ಯೋಜನೆ ರೂಪಿಸುವದರೊಂದಿಗೆ, ಕೊಡಗಿನಲ್ಲಿ ಪ್ರವಾಸಿಗರ ಸಹಿತ ಮಕ್ಕಳ ಆಕರ್ಷಣೀಯ ತಾಣಕ್ಕೆ ತುರ್ತು ಕಾಯಕಲ್ಪ ನೀಡಬೇಕೆಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸೂಚಿಸಿದ್ದಾರೆ. ಇಂದು ಪುಟಾಣಿ ರೈಲಿನ ಸ್ಥಿತಿಗತಿ ಬಗ್ಗೆ ಖುದ್ದಾಗಿ ಪರಿಶೀಲಿಸಿದ ಅವರು, ಕೆಟ್ಟು ನಿಂತಿರುವ ಪುಟಾಣಿ ರೈಲು ಬಗ್ಗೆ ನಗರಸಭೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು ಆಯುಕ್ತ ರಮೇಶ್ ಅವರಿಂದ ಮಾಹಿತಿ ಪಡೆದರು. ಪ್ರಸಕ್ತ ಇರುವ ರೈಲು ಸಂಚರಿಸಲು ಯೋಗ್ಯವಿಲ್ಲವೆಂದು ಮೈಸೂರು ನೈಋತ್ಯ ವಲಯ ರೈಲ್ವೇ ಅಧಿಕಾರಿಗಳು ಈಗಾಗಲೇ ಖಾತರಿ ಪಡಿಸಿದ್ದಾರೆ ಎಂದು ಆಯುಕ್ತರು ಗಮನ ಸೆಳೆದರು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ರೈಲು ಓಡಿಸಲು ಸೂಕ್ತವಲ್ಲವೆಂದು ರೈಲ್ವೇ ಅಧಿಕಾರಿಗಳು ಖಾತರಿ ಪಡಿಸಿರುವ ಮೇರೆಗೆ, ಬದಲಿ ರೈಲು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದು ವಿವರಿಸಿದರು. ಆ ದಿಸೆಯಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಪರ್ಯಾಯ ವ್ಯವಸ್ಥೆಗೆ ಅಗತ್ಯ ಗಮನ ಹರಿಸಲಾಗುವದು ಎಂದರು. 1991ರಲ್ಲಿ ಚಾಲನೆಗೊಂಡಿದ್ದ ಪುಟಾಣಿ ರೈಲನ್ನು ಬೆಂಗಳೂರಿನ ಸಾನ್ ಇಂಜಿನಿಯರಿಂಗ್ ಲೋಕೋಮೋಟೀವ್‍ನಿಂದ ರೂಪಿಸಿದ್ದು, ಪ್ರಸಕ್ತ ರೈಲ್ವೇ ಇಲಾಖೆಯಿಂದ ಈ ಕೆಲಸ ಅಸಾಧ್ಯವೆಂದು ತಿಳಿಸಿರುವ ಮೇರೆಗೆ; ಅದೇ ಖಾಸಗಿ ಸಂಸ್ಥೆಯನ್ನು ಸಂಪರ್ಕಿಸಲಾಗಿ ರೂ. 1.12 ಕೋಟಿ ವೆಚ್ಚದ ಅಂದಾಜುಪಟ್ಟಿ ಸಲ್ಲಿಸಿರುವದಾಗಿ ಆಯುಕ್ತರು ಮಾಹಿತಿ ನೀಡಿದರು. ಅಲ್ಲದೆ ಬಾಗಲಕೋಟೆಯ ಕಾರ್ತಿಕ್ ಎಂಟರ್ ಪ್ರೈಸಸ್‍ನಿಂದ ಪುಟಾಣಿ ರೈಲು ನಿರ್ಮಾಣಕ್ಕೆ ರೂ. 99.71 ಲಕ್ಷ ಅಂದಾಜು ಪಟ್ಟಿ ಕಲ್ಪಿಸಿದ್ದಾಗಿ ವಿವರಿಸಿದರು. ಅಷ್ಟು ಮಾತ್ರವಲ್ಲದೆ ರೈಲ್ವೇ ಅಧಿಕಾರಿಗಳ ಸಲಹೆಯಂತೆ ಪುಟಾಣಿ ರೈಲು ಸಂಚರಿಸುವ ಬೋಗಿ ಕಂಬಿಗಳಿಗೆ ಅಳವಡಿಸಿರುವ ಮರದ ಹಲಗೆಗಳು ಶಿಥಿಲಗೊಂಡಿವೆ. ಈ ಹಲಗೆಗಳನ್ನು ಮಾರ್ಪಾಡುಗೊಳಿಸಿ ಸಿಮೆಂಟ್‍ನಿಂದ ಕಂಬಿಗಳ ಜೋಡಣೆಯಾಗಲಿದ್ದು, ಆ ದಿಸೆಯಲ್ಲಿ ಕ್ರಮ ವಹಿಸಲಾಗುವದು ಎಂದರು. ಇನ್ನು ರೈಲ್ವೇ ಕೇಂದ್ರಕ್ಕೆ ಸುಸಜ್ಜಿತ ತಡೆಗೋಡೆ, ಸುರಂಗ ಮಾರ್ಗ ಹಾಗೂ ಇತರೆಡೆ ಭೂಕುಸಿತ ತಡೆಯಲು ನೂತನ ಯೋಜನೆಯಡಿ, ಕೆಲಸ ಕೈಗೊಳ್ಳುವದು ಸೇರಿದಂತೆ ಒಟ್ಟಾರೆ ರೂ. 2 ಕೋಟಿ ವೆಚ್ಚದ ಅಂದಾಜು ಯೋಜನೆ ಕೈಗೊಂಡಿದ್ದು, ಪ್ರವಾಸೋದ್ಯಮ ಹಾಗೂ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವದು ಎಂದರು. ಈ ಬಗ್ಗೆ ತುರ್ತು ಕ್ರಿಯಾ ಯೋಜನೆಯೊಂದಿಗೆ, ನಕಾಶೆ ಹಾಗೂ ಅಂದಾಜುಪಟ್ಟಿ ಸಿದ್ಧಗೊಳಿಸಿ ಅದರ ಪ್ರತಿಯನ್ನು ನೀಡುವಂತೆ ಸೂಚಿಸಿದ ಸುನಿಲ್ ಸುಬ್ರಮಣಿ, ತಾವು ಸರಕಾರದ ಹಂತದಲ್ಲಿ ವ್ಯವಹರಿಸುವದಾಗಿ ಭರವಸೆ ನೀಡಿದರು. ಆದಷ್ಟು ಬೇಗನೆ ಎಲ್ಲವನ್ನು ಸಿದ್ಧಗೊಳಿಸುವ ಇಂಗಿತವನ್ನು ಆಯುಕ್ತ ರಮೇಶ್ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಪುಟಾಣಿ ರೈಲು ನಿಲುಗಡೆಗೆ ಮಡಿಕೇರಿ ಹವಾಮಾನಕ್ಕೆ ಪೂರಕವಾಗಿ ಶೆಡ್ ಕೂಡ ನಿರ್ಮಿಸಲಾಗುವದು ಎಂದು ಇದೇ ವೇಳೆ ಆಯುಕ್ತರು ‘ಶಕ್ತಿ’ಯೊಂದಿಗೆ ವಿವರಣೆ ನೀಡಿದರು. ಅಲ್ಲದೆ ಸಕ್ಷಮ ಪ್ರಾಧಿಕಾರ, ಜಿಲ್ಲಾಧಿಕಾರಿಗಳಿಂದ ಯೋಜನೆಗೆ ಪೂರಕ ಅನುಮತಿಯೊಂದಿಗೆ ಮುಂದಿನ ಮೂರು ತಿಂಗಳಿನಲ್ಲಿ ನೂತನ ಪುಟಾಣಿ ರೈಲು ಕಲ್ಪಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

x ಮಡಿಕೇರಿ, ಜ. 7: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ರಾಜಾಸೀಟ್‍ಗೆ ಹೊಂದಿಕೊಂಡಿರುವ ‘ಕಾವೇರಿ ಎಕ್ಸ್‍ಪ್ರೆಸ್’ ಪುಟಾಣಿ ರೈಲಿಗೆ ಕಾಯಕಲ್ಪ ನೀಡಲು ರೂ. 2 ಕೋಟಿ ವೆಚ್ಚದ ಯೋಜನೆ

ಪಂಚಾಯಿತಿ ಆಸ್ತಿಗಳ ದಾಖಲಾತಿಗೆ ಕ್ರಮ

ಸಿದ್ದಾಪುರ, ಜ.7: ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಯಾವದೇ ಜಾಗಗಳಿಗೆ ಸಮರ್ಪಕವಾದ ದಾಖಲೆಗಳು ಇಲ್ಲದ ಹಿನೆÀ್ನಲೆಯಲ್ಲಿ ಇದೀಗ ಎಚ್ಚೆತ್ತುಕೊಂಡ ಪಂಚಾಯಿತಿ ಕೊನೆಗೂ ದಾಖಲೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಮ್ಮತ್ತಿ

ರಾಜ್ಯ ಸರ್ಕಾರದಿಂದ ಜನವಿರೋಧಿ ಆಡಳಿತ

ಸೋಮವಾರಪೇಟೆ, ಜ.7 : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಜನಸಾಮಾನ್ಯರ ಮೇಲೆ ಅನಗತ್ಯ ತೆರಿಗೆ ವಿಧಿಸುತ್ತಿದೆ. ಇದರೊಂದಿಗೆ

ಕೊಡವ ಓಪನ್ ಬ್ಯಾಡ್‍ಮಿಂಟನ್ ಪಂದ್ಯಾವಳಿ

ಸಿದ್ದಾಪುರ, ಜ.7: ಸಿದ್ದಾಪುರದ ಕೊಡವ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಕೊಡವ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್-2019 ಪಂದ್ಯಾಟವು 2 ದಿನಗಳ ಕಾಲ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಮೇಜರ್ ಜನರಲ್