ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಕೊರತೆಗೆ ವಿಷಾದ

ಕುಶಾಲನಗರ, ಫೆ. 10: ಅಭಿವೃದ್ಧಿಯ ನಾಗಾಲೋಟದ ನಡುವೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಉಂಟಾಗಿರುವ ಬಗ್ಗೆ ಮಡಿಕೇರಿ ಸರಸ್ವತಿ ಡಿಇಡಿ ಕಾಲೇಜು ಪ್ರಾಂಶುಪಾಲ ಕುಮಾರ್ ವಿಷಾದ ವ್ಯಕ್ತಪಡಿಸಿದರು. ಕುಶಾಲನಗರ ಸರಕಾರಿ

ಪೊನ್ನಂಪೇಟೆ, ಫೆ. 10: ಕನ್ನಡ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಪಸರಿಸುವಲ್ಲಿ ನುಡಿಸೇವಾ ನಿರತ ಆಳ್ವಾಸ್ ನುಡಿಸಿರಿಯ ಕೊಡಗು ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ತಾ. 24 ರಂದು ಸಂಜೆ 6 ಗಂಟೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನೂತನ ಘಟಕ ವಿಧ್ಯುಕ್ತವಾಗಿ ಉದ್ಘಾಟನೆಯಾಗಲಿದೆ. ಇದರ ಅಂಗವಾಗಿ ಅಂದು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ವಿವಿಧ ರಾಜ್ಯ ಮತ್ತು ವಿವಿಧ ರಾಷ್ಟ್ರಗಳ ಸಂಸ್ಕøತಿ ಯನ್ನು ಬಿಂಬಿಸುವ ಅಂತಾರ್ರಾಷ್ಟ್ರೀಯ ಆಳ್ವಾಸ್ ಸಾಂಸ್ಕøತಿಕ ವೈಭವ ಜರುಗಲಿದೆ ಎಂದು ಕಾರ್ಯಕ್ರಮದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ವಿಶಿಷ್ಟ ಸಾಂಸ್ಕøತಿಕ ಪರಂಪರೆಯನ್ನು ತನ್ನದೇ ಆದ ರೀತಿಯಲ್ಲಿ ಬೆಳೆಸುತ್ತಾ ಜನಮಾನಸದಲ್ಲಿ ವಿಶೇಷವಾದ ಸ್ಥಾನ ಪಡೆದಿರುವ ಆಳ್ವಾಸ್ ನುಡಿಸಿರಿಯನ್ನು ವೈವಿಧ್ಯಮಯ ಸಂಸ್ಕøತಿಯ ಹಿನ್ನೆಲೆ ಹೊಂದಿರುವ ಕೊಡಗಿನಲ್ಲಿ ಪಸರಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ನುಡಿಸಿರಿ ಘಟಕವನ್ನು ಸ್ಥಾಪಿಸಲು ಮುಂದಾಗಿರುವದಾಗಿ ಹೇಳಿದ್ದಾರೆ. ಆಳ್ವಾಸ್ ನುಡಿಸಿರಿಯ ಕೊಡಗು ಘಟಕವನ್ನು ಆರಂಭಿಸುವ ಬಗ್ಗೆ ಈಗಾಗಲೇ ಗೋಣಿಕೊಪ್ಪಲಿನಲ್ಲಿ 4 ಪೂರ್ವಭಾವಿ ಸಭೆಗಳನ್ನು ನಡೆಸ ಲಾಗಿದೆ. ಈ ಸಭೆಗಳಲ್ಲಿ ಸಮಗ್ರವಾಗಿ ಚರ್ಚಿಸಿ ಅತ್ಯುನ್ನತ ಶ್ರೇಣಿಯ ವೈಶಿಷ್ಟ್ಯ ಪೂರ್ಣವಾದ ಅಂತಾ ರ್ರಾಷ್ಟ್ರೀಯ ಆಳ್ವಾಸ್ ಸಾಂಸ್ಕøತಿಕ ವೈಭವವನ್ನು ಗೋಣಿಕೊಪ್ಪಲಿನಲ್ಲಿ ಅಯೋಜಿಸುವ ಬಗ್ಗೆ ನಿರ್ಧಾರವನ್ನು ತೆಗೆದು ಕೊಳ್ಳಲಾಗಿದೆ. ಆಳ್ವಾಸ್ ನುಡಿಸಿರಿಯ ಕೊಡಗು ಘಟಕವನ್ನು ಕೊಡಗಿನಲ್ಲಿ ಪರಿಣಾಮಕಾರಿಯಾಗಿ ಸಂಘಟಿಸಿ ನಾಡುನುಡಿಯ ಸೇವೆಗೈಯಲು ತೀರ್ಮಾನಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಸಲಹೆಯಂತೆ ಆಳ್ವಾಸ್ ನುಡಿಸಿರಿಯ ಕೊಡಗು ಘಟಕದ ನೂತನ ಅಧ್ಯಕ್ಷರಾಗಿ ಕಾಡ್ಯಮಾಡ ಬಿ.ಗಿರೀಶ್ ಗಣಪತಿ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ. ಹಿರಿಯ ವೈದ್ಯ ಡಾ. ಕಾಳಿಮಾಡ ಕೆ. ಶಿವಪ್ಪ ಅವರು ನೂತನ ಘಟಕದ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಒಪ್ಪಿ ಕೊಂಡಿದ್ದಾರೆ. ಕೆ.ಆರ್. ಬಾಲಕೃಷ್ಣ ರೈ ಅವರನ್ನು ಘಟಕದ ಪ್ರಧಾನ ಸಂಚಾಲಕರಾಗಿ, ಎಂ.ಪಿ. ಕೇಶವ ಕಾಮತ್ ಕಾರ್ಯಾಧ್ಯಕ್ಷರಾಗಿ, ಕುಶಾಲ ನಗರದ ಬಿ.ಎನ್. ಲೋಕೇಶ್ ಸಾಗರ್ ಘಟಕದ ಉಪಾಧ್ಯಕ್ಷರಾಗಿ, ಮೂರ್ನಾಡಿನ ಡಾ. ಸುಭಾಷ್ ನಾಣಯ್ಯ ಪ್ರಧಾನ ಕಾರ್ಯದರ್ಶಿ ಯಾಗಿ, ಬಿ.ಎನ್. ಪ್ರಕಾಶ್ ಮತ್ತು ಕುಲ್ಲಚಂಡ ಎಸ್. ಪ್ರಮೋದ್ ಗಣಪತಿ ಅವರನ್ನು ಕಾರ್ಯ ದರ್ಶಿಗಳಾಗಿ ಆಯ್ಕೆಮಾಡಲಾಗಿದೆ ವಿವಿಧ ಕ್ಷೇತ್ರಗಳಲ್ಲಿನ ತಜ್ಞರಾದ ನಿವೃತ್ತ ಪ್ರಾಂಶುಪಾಲರಾದ ಇಟ್ಟೀರ ಕೆ. ಬಿದ್ದಪ್ಪ, ಎಂ.ಡಿ. ನಂಜುಂಡ, ಡಾ. ಸಿ.ಜಿ. ಕುಶಾಲಪ್ಪ, ಸಿ.ಎಸ್. ಅರುಣ್ ಮಾಚಯ್ಯ, ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ಮತ್ತು ನಾಪಂಡ ಮುತ್ತಪ್ಪ ಅವರನ್ನು ಆಳ್ವಾಸ್ ನುಡಿಸಿರಿ ಕೊಡಗು ಘಟಕದ ಗೌರವ ಸಲಹೆ ಗಾರರಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಕೊಡಗಿನ ವಿವಿಧೆಡೆಯ 32 ಮಂದಿಯನ್ನು ಘಟಕದ ನಿರ್ದೇಶಕರಾಗಿ ಆಯ್ಕೆ ಮಾಡಿ ಕೊಳ್ಳಲಾಗಿದೆ. ಈ ಪೈಕಿ 10 ಮಂದಿ ಮಹಿಳೆಯರಿದ್ದಾರೆ ಎಂದು ತಿಳಿಸಿದ್ದಾರೆ. ಅಂದು ಗೋಣಿಕೊಪ್ಪಲಿ ನಲ್ಲಿ ನಡೆಯಲಿರುವ ಅಂತಾ ರ್ರಾಷ್ಟ್ರೀಯ ಆಳ್ವಾಸ್ ಸಾಂಸ್ಕøತಿಕ ವೈಭವದ ಯಶಸ್ವಿಗಾಗಿ ಈಗಾಗಲೇ 6 ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕೆ.ಬಿ. ಗಿರೀಶ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಶರೀನ್ ಸುಬ್ಬಯ್ಯ ಅವರ ಸಂಚಾಲಕತ್ವದಲ್ಲಿ ಸ್ವಾಗತ ಸಮಿತಿ, ಡಾ. ಸುಭಾಶ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಮತ್ತು ವೀರಾಜಪೇಟೆಯ ಮನೆಯಪಂಡ ಕೆ. ದೇಚಮ್ಮ ಅವರ ಸಂಚಾಲಕತ್ವದಲ್ಲಿ ಹಣಕಾಸು ಸಮಿತಿ, ಕುಲ್ಲಚಂಡ ಎಸ್. ಪ್ರಮೋದ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಕೋಳೆರ ಝರು ಗಣಪತಿ ಅವರ ಸಂಚಾಲಕತ್ವದಲ್ಲಿ ವಸತಿ ಸಮಿತಿ, ಕುಲ್ಲಚಂಡ ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಡೇಮಾಡ ಸುನೀಲ್ ಮಾದಪ್ಪ ಅವರ ಸಂಚಾಲಕತ್ವದಲ್ಲಿ ಆಹಾರ ಸಮಿತಿ, ಕೆ.ಆರ್. ಬಾಲಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಮತ್ತು ಕೋಳೆರ ದಯಾ ಚಂಗಪ್ಪ ಅವರ ಸಂಚಾಲಕತ್ವದಲ್ಲಿ ವೇದಿಕೆ ಸಮಿತಿ ಹಾಗೂ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಫೀಕ್ ತೂಚಮಕೇರಿ ಅವರ ಸಂಚಾಲ ಕತ್ವದಲ್ಲಿ ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವದಾಗಿ ಕೇಶವ ಕಾಮತ್ ತಿಳಿಸಿದ್ದಾರೆ.

ಪೊನ್ನಂಪೇಟೆ, ಫೆ. 10: ಕನ್ನಡ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಪಸರಿಸುವಲ್ಲಿ ನುಡಿಸೇವಾ ನಿರತ ಆಳ್ವಾಸ್ ನುಡಿಸಿರಿಯ ಕೊಡಗು ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ತಾ. 24 ರಂದು ಸಂಜೆ