*ಗೋಣಿಕೊಪ್ಪಲು, ಮೇ 25: ಕೊಡಗು ಜಿಲ್ಲಾ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ವತಿಯಿಂದ ತಾ. 26 ರಂದು (ಇಂದು) 7ನೇ ಬಹುಭಾಷಾ ಮನೆ ಮನೆ ಕವಿಗೋಷ್ಠಿ ನಡೆಯಲಿದೆ.
ಕುಟ್ಟಂದಿ ಗ್ರಾಮದ ಮುಲ್ಲಂಗಡ ಮದೋಶ್ ಪೂವಯ್ಯ ಮನೆಯಂಗಳದಲ್ಲಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಕಾವ್ಯ ವಾಚನದೊಂದಿಗೆ ಗೀತಾಗಾಯನ, ಕುಂಚಗಾಯನ ಜೊತೆಗೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರ ‘ಇಳೆ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ.