ವೀರಾಜಪೇಟೆ, ಮೇ 25: ಕಲಿಕೆ ಎಂಬದು ನಿರಂತರ, ಎಂದಿಗೂ ಪೂರ್ಣವಾಗುವದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಕೆ ಮಹತ್ವದಾಗಿರುತ್ತದೆ ಎಂದು ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ಹಾಗೂ ದೇವಾಲಯದ ಧರ್ಮಗುರು ಮದಲೈಮುತ್ತು ಹೇಳಿದರು,
ಮೈಸೂರು ಡಯಾಸೀಸ್ ಎಜುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಮೂರು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ಐಸಾಕ್ ರತ್ನಾಕರ ಮಾತನಾಡಿ, ಶಿಕ್ಷಕರಿಗಾಗಿ ಆಯೋಜಿಸಿರುವ ಕಾರ್ಯಾಗಾರ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದರು. ವೇದಿಕೆಯಲ್ಲಿ ತರಬೇತುದಾರ ಅರವಿಂದ್, ದೇಚಮ್ಮ, ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆ, ಪೊನ್ನಂಪೇಟೆ ಸೈಂಟ್ ಆ್ಯಂಟೋನಿ ವಿದ್ಯಾಸಂಸ್ಥೆ, ಕೆದಮುಳ್ಳೂರು ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಗಳ ಉಪನ್ಯಾಸಕರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಉಪನ್ಯಾಸಕಿ ಬೀನಾ ರೋಸಿ, ಸ್ವಾಗತಿಸಿದರು, ನಿರ್ಮಲ ನಿರೂಪಿಸಿದರು ಉಪನ್ಯಾಸಕಿ ಹೇಮಾ ವಂದಿಸಿದರು.