ರ್ಯಾಲಿಗೆ ಬ್ಯಾಡಗೊಟ್ಟ , ಬಸವನಹಳ್ಳಿ ನಿವಾಸಿಗಳ ಬಳಕೆಗೆ ಆಕ್ಷೇಪ ಮಡಿಕೇರಿ, ಸೆ.30 : ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ದಿಡ್ಡಳ್ಳಿಯ ನಿರಾಶ್ರಿತ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವದರೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇಲ್ಲಿನ ಗಿರಿಜನರನ್ನು ಬಳಸಿಕೊಂಡು ಮತ್ತೆ ನಿವೇಶನದ ಬೇಡಿಕೆಯನ್ನು ಮುಂದಿರಿಸಿ ಹೋರಾಟಕ್ಕಿಳಿಯುವ ಪ್ರಯತ್ನ ಮಾಡುತ್ತಿವೆ ಎಂದು ದಿಡ್ಡಳ್ಳಿ ಗಿರಿಜನ ಹೋರಾಟಗಾರ್ತಿ ಪಿ.ಎಸ್.ಮುತ್ತಮ್ಮ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ನೇ ಸಾಲಿನಲ್ಲಿ ಆದಿವಾಸಿ ಬುಡಕಟ್ಟು ಸಮೂಹಗಳಾದ ಜೇನುಕುರುಬ, ಮಡಿಕೇರಿ, ಸೆ.30 : ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ದಿಡ್ಡಳ್ಳಿಯ ನಿರಾಶ್ರಿತ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವದರೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇಲ್ಲಿನ ಗಿರಿಜನರನ್ನು ಬಳಸಿಕೊಂಡು ಮತ್ತೆ ನಿವೇಶನದ ಬೇಡಿಕೆಯನ್ನು ಮುಂದಿರಿಸಿ ಹೋರಾಟಕ್ಕಿಳಿಯುವ ಪ್ರಯತ್ನ ಮಾಡುತ್ತಿವೆ ಎಂದು ದಿಡ್ಡಳ್ಳಿ ಗಿರಿಜನ ಹೋರಾಟಗಾರ್ತಿ ಪಿ.ಎಸ್.ಮುತ್ತಮ್ಮ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ನೇ ಸಾಲಿನಲ್ಲಿ ಆದಿವಾಸಿ ಬುಡಕಟ್ಟು ಸಮೂಹಗಳಾದ ಜೇನುಕುರುಬ, ಇತರೆಡೆಗಳಲ್ಲಿ ಸಂಕಷ್ಟದಲ್ಲಿರುವ ಆದಿವಾಸಿಗಳು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು. ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯ ಆದಿವಾಸಿಗಳಿಗೆ ಈಗಾಗಲೆ ಹಕ್ಕುಪತ್ರ ನೀಡಲಾಗಿದ್ದು, ಆರ್‍ಟಿಸಿ ದೊರಕಬೇಕಾಗಿದೆಯಷ್ಟೇ ಎಂದು ಮುತ್ತಮ್ಮ ಸ್ಪಷ್ಟ ಪಡಿಸಿದರು. ಆದಿವಾಸಿ ನಾಯಕ ಬಸವನಹಳ್ಳಿಯ ಸ್ವಾಮಿಯಪ್ಪ ಮಾತನಾಡಿ, ಪ್ರಸ್ತುತ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯ ಗಿರಿಜನರ ಬದಲಾಗಿ, ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದಿಗೂ ಬಾಡಿಗೆ ಮನೆಗಳಲ್ಲಿ, ಲೈನ್ ಮನೆಗಳಲ್ಲಿರುವ ಗಿರಿಜನ ಸಮೂಹಕ್ಕೆ, ಬಡವರ್ಗಕ್ಕೆ ನೆಲೆಯೊದಗಿಸಿಕೊಡುವ ಅಗತ್ಯವಿದೆ ಎಂದರು. ಬ್ಯಾಡಗೊಟ್ಟದಲ್ಲಿ 354 ಮನೆಗಳು ಹಾಗೂ ಬಸವನಹಳ್ಳಿಯಲ್ಲಿ 174 ಮನೆಗಳನ್ನು ನಿರ್ಮಿಸಿ, ಅಗತ್ಯ ಸೌಲಭ್ಯಗಳನ್ನು ಆದಿವಾಸಿಗಳಿಗೆ ನೀಡಲಾಗಿದೆ. ಇಲ್ಲಿ ನೆಲೆಸಿರುವವರಿಗೆ ಅಗತ್ಯ ಕೃಷಿ ಭೂಮಿಯನ್ನು ಕೇಳಲು ಅವಕಾಶವಿದೆ. ಪ್ರಸ್ತುತ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸೌಲಭ್ಯ ಒದಗಿಸುವದು ಸೂಕ್ತವೆಂದರು. ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿರುವ ಆದಿವಾಸಿ ಕುಟುಂಬಗಳ ಬದುಕಿಗೆ ಪೂರಕವಾಗಿ ಅಗತ್ಯ ಕೆಲಸವನ್ನು ಒದಗಿಸಬೇಕೆಂದು ಈಗಾಗÀಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಅದಕ್ಕೂ ಸೂಕ್ತ ಸ್ಪಂದನ ದೊರಕಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪೊನ್ನಂಪೇಟೆಯ ಪಿ.ಎಸ್.ಮುತ್ತ, ಪ್ರಕಾಶ್ ಬ್ಯಾಡಗೊಟ್ಟ, ವೈ.ಬಿ.ಅಪ್ಪು ಹಾಗೂ ಮಾರ ಬಸವನಹಳ್ಳಿ ಉಪಸ್ಥಿತರಿದ್ದರು.

ಮಡಿಕೇರಿ, ಸೆ.30 : ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ದಿಡ್ಡಳ್ಳಿಯ ನಿರಾಶ್ರಿತ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವದರೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇಲ್ಲಿನ

ಸಾಹಿತಿ ಭಾರತಿಸುತ ಕೊಡುಗೆ ಅಪಾರ

*ಗೋಣಿಕೊಪ್ಪಲು, ಸೆ. 30: ಉತ್ತಮ ಸಾಹಿತ್ಯವನ್ನು ರಚಿಸುವ ಮೂಲಕ ಕೊಡಗಿನ ಸಾಹಿತ್ಯವನ್ನು ಮೇರು ಮಟ್ಟಕ್ಕೆ ಕೊಂಡೊಯ್ದ ಸಾಹಿತಿಗಳಲ್ಲಿ ಭಾರತಿಸುತ ಅವರ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ ಸರ್ವೋದಯ

ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ

ಮಡಿಕೇರಿ, ಸೆ. 30: ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಸರ್ವಾಂಗೀಣ ಪ್ರಗತಿಯ ಕಾರಣಕ್ಕಾಗಿ ಅಪೆಕ್ಸ್ ಬ್ಯಾಂಕ್ 2017-18ನೇ ಸಾಲಿನ ರಾಜ್ಯ