ಪೆÇನ್ನಂಪೇಟೆ, ಡಿ. 6: ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪೆÇನ್ನಂಪೇಟೆಯ ಅಂಬೇಡ್ಕರ್ ಕಲಾ ಯುವತಿ ಮಂಡಳಿ ಹಾಗೂ ಜಾನಪದ ಕಲಾತಂಡ ಬೀದಿ ನಾಟಕ ಪ್ರದರ್ಶನವನ್ನು ನೀಡುತ್ತಿದ್ದು, ಕುಶಾಲನಗರದ ಗಣಪತಿ ದೇವಸ್ಥಾನದ ಸಮೀಪ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶುಕ್ರವಾರ ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯಾಧಿಕಾರಿ ಉದಯಕುಮಾರ್ ಹಾಗೂ ಸ್ಯಾನಿಟರಿ ಸೂಪರ್ ವೈಸರ್ ಮೋಹನ್ ಕುಮಾರ್ ನೆರವೇರಿಸಿದರು. ಹೆಚ್. ಇ. ಸದಾನಂದ, ರವೀಂದ್ರನಾಥ್ ಮುಂತಾದವರು ಹಾಜರಿದ್ದರು.

ಕಲಾ ತಂಡದ ಸದಸ್ಯರಾದ, ಜಿ.ನಿರ್ಮಲ, ಹೆಚ್. ಟಿ. ಗಿರೀಶ್, ಶರತ್ ಕುಮಾರ್, ಮಂಜುಳ, ಪುಷ್ಪ, ಅಭಿಷೇಕ್, ಶಿವು ಹಾಗೂ ಭರತ್ ನಾಟಕ ಪ್ರದರ್ಶನ ನೀಡಿದರು. ಕೂಡುಮಂಗಳೂರು, ಹೆಬ್ಬಾಲೆ, ಮೂರ್ನಾಡು, ತೊಂಬತ್ತುಮನೆ, ಮೇಕೇರಿ ಭಾಗಗಳಲ್ಲಿ ಬೀದಿ ನಾಟಕ ಪ್ರದರ್ಶನ ನೀಡಲಾಗಿದ್ದು, ಸೋಮವಾರ ಕುಟ್ಟ, ಶ್ರೀಮಂಗಲ ಹಾಗೂ ಬೆಳ್ಳೂರಿನಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಲಿದೆ.