ಮಕ್ಕಿ ದೇವಳ ರಸ್ತೆಯಲ್ಲಿ ಕುಡುಕರಿಂದ ಮೋಜು ಮಸ್ತಿ..!

ನಾಪೆÇೀಕ್ಲು, ಜೂ. 4: ಒಂದೆಡೆ ಕೊರೊನಾ, ಮತ್ತೊಂದೆಡೆ ಲಾಕ್‍ಡೌನ್. ಜನ ಮನೆಯಿಂದಲೇ ಹೊರಬರಲು ಹೆದರುವ ಪರಿಸ್ಥಿತಿ. ಆದರೆ ಕುಡುಕರಿಗಿಲ್ಲ ಭೀತಿ ಎನ್ನುವದಕ್ಕೆ ಇಲ್ಲಿದೆ ಸಾಕ್ಷಿ. ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದ

ಸರಿಯಾದ ಸಮಯಕ್ಕೆ ಕಂದಾಯ ಪಾವತಿಸಬೇಕು ಲಕ್ಷ್ಮೀ ನಾಪೆÇೀಕ್ಲು, ಜೂ. 4: ಗ್ರಾಮ ಪಂಚಾಯಿತಿ ನಿಗದಿಪಡಿಸಿದ ಅವಧಿಯೊಳಗೆ ಪ್ರತಿಯೊಬ್ಬರು ತಪ್ಪದೇ ಕಂದಾಯ ಪಾವತಿಸಬೇಕೆಂದು ಮಡಿಕೇರಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಲಕ್ಷ್ಮೀ ಸೂಚನೆ ನೀಡಿದರು. ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಂದಾಯ ವಸೂಲಿ ಸಭೆಯಲ್ಲಿ ಅವರು ಮಾತನಾಡಿದರು. ಅಂಗಡಿಗಳ ಮಾಲೀಕರು ಪ್ರತಿವರ್ಷ ಏಪ್ರಿಲ್‍ನಲ್ಲಿ ಅಂಗಡಿ ಕಂದಾಯ ಪಾವತಿಸಬೇಕು. ಪರವಾನಗಿ ಪಡೆಯದೆ ಅಂಗಡಿಗಳಲ್ಲಿ ಪೆಟ್ರೋಲ್, ಡೀಸೆಲ್, ಮಾತ್ರೆಗಳು, ಇತ್ಯಾದಿಗಳನ್ನು ಮಾರಾಟ ಮಾಡುವಂತಿಲ್ಲ. ಅಂತಹವರ ವಿರುದ್ದ ಕ್ರಮಕೈಗೊಳ್ಳಲಾಗುವದು ಎಂದರು. ಯಾವದಕ್ಕೆ ಅಂಗಡಿ ಪರವಾನಗಿ ಪಡೆಯಲಾಗಿದೆಯೋ ಅದನ್ನು ಮಾತ್ರ ಮಾರಾಟ ಮಾಡಬೇಕು. ಕೋಳಿಮಾಂಸ, ದಿನಸಿ, ಹಾಲು, ತರಕಾರಿ ಹೀಗೆ ಒಟ್ಟಾಗಿ ಮಾರಾಟ ಮಾಡುವದನ್ನು ನಿಷೇಧಿಸಲಾಗಿದೆ. ಪ್ರತಿ ಅಂಗಡಿ ಮಾಲೀಕರು ಅವರೇ ಖುದ್ದಾಗಿ ತೆರಳಿ ಕಂದಾಯ ಪಾವತಿಸಬೇಕು. ಕೋಳಿಮಾಂಸ, ಹಸಿಮೀನು ಮಾರಾಟದ ಪರವಾನಗಿಯನ್ನು ಪಂಚಾಯಿತಿಯು ಹರಾಜು ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಎಷ್ಟು ಪರವಾನಗಿ ಕೊಡಬಹುದು ಎಂಬ ಬಗ್ಗೆ ಪಂಚಾಯಿತಿಯ ನಿರ್ಧಾರ ಅಂತಿಮವಾಗಿರುತ್ತದೆ. ಹಲವು ಮಂದಿ ಅನಧಿಕೃತವಾಗಿ ಅಂಗಡಿ ನಡೆಸುತ್ತಿದ್ದಾರೆ. ಪರವಾನಗಿ ಪಡೆಯದಿದ್ದಲ್ಲಿ ಅಂತಹ ಅಂಗಡಿಗಳನ್ನು ಮುಟ್ಟುಗೋಲು ಹಾಕುವ ಅಧಿಕಾರ ಪಂಚಾಯಿತಿಗೆ ಇದೆ. ಪಂಚಾಯಿತಿ ವ್ಯಾಪ್ತಿಯ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಪಾನ್ ಮಸಾಲ ಇತ್ಯಾದಿ ಮಾದಕ ವಸ್ತುಗಳ ಮಾರಾಟ ಮಾಡದಂತೆ ಕಾನೂನು ಇದೆ ಎಂದರು. ಸಭೆಯಲ್ಲಿ ಅಂಗಡಿ, ಮನೆ ನೀರು ಕಂದಾಯ ಹಾಗೂ ಕೋಳಿ ಮತ್ತು ಮೀನು ಮಾರಾಟ ಪರವಾನಗಿ ಹರಾಜಿನ ಬಗ್ಗೆ ಚರ್ಚೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರೋಟ್ ಅಲಿ ವಹಿಸಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ಸತ್, ಹಂಸ ಅರೆಯಂಡ, ಮಾಹಿನೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ ಕುಮಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

x ನಾಪೆÇೀಕ್ಲು, ಜೂ. 4: ಗ್ರಾಮ ಪಂಚಾಯಿತಿ ನಿಗದಿಪಡಿಸಿದ ಅವಧಿಯೊಳಗೆ ಪ್ರತಿಯೊಬ್ಬರು ತಪ್ಪದೇ ಕಂದಾಯ ಪಾವತಿಸಬೇಕೆಂದು ಮಡಿಕೇರಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಲಕ್ಷ್ಮೀ ಸೂಚನೆ ನೀಡಿದರು. ಸಮೀಪದ ಎಮ್ಮೆಮಾಡು

ಮನೆ ಮನೆ ಪಾಠ ಮಾದರಿಯಾದ ಶ್ರೀಕೃಷ್ಣ ವಿದ್ಯಾಮಂದಿರ

ಸಿದ್ದಾಪುರ, ಜೂ. 4 : ಕೊರೊನಾ ಲಾಕ್‍ಡೌನ್ ನಡುವೆ ವಿದ್ಯಾರ್ಥಿ ಸಮೂಹ ತಮ್ಮ ಮುಂದಿನ ಶೈಕ್ಷಣಿಕ ಬದುಕಿನ ಬಗ್ಗೆ ಚಿಂತಿತರಾಗಿರುವ ನಡುವೆಯೇ ಸಿದ್ದಾಪುರದ ಶ್ರೀಕೃಷ್ಣ ವಿದ್ಯಾ ಮಂದಿರದ

ತುಳು ಭಾಷಿಕರಿಗೆ ಆನ್‍ಲೈನ್ ಮೂಲಕ ಲಿಪಿ ಪಾಠ

ಮಡಿಕೇರಿ, ಜೂ. 4: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುವೆರ ಜನಪದ ಕೂಟದ ಸಹಕಾರದೊಂದಿಗೆ ಕೊಡಗು ಜಿಲ್ಲೆಯಲ್ಲಿ ತುಳು ಲಿಪಿ ಕಲಿಸುವ ಆನ್‍ಲೈನ್ ಪಾಠವನ್ನು ಆರಂಭಿಸಲಾಗುವುದು