ಪರಿವರ್ತಕ ಬದಲಾವಣೆಗೆ ಕ್ರಮ

ಮಡಿಕೇರಿ, ಅ. ೨೯: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಕೊಡಗು ಜಿಲ್ಲೆಯಲ್ಲಿ ವಿಫಲಗೊಂಡ ಪರಿವರ್ತಕಗಳನ್ನು ೨೪ ಗಂಟೆಯೊಳಗೆ ಬದಲಾಯಿಸಲಾಗುತ್ತಿದ್ದು, ಪರಿವರ್ತಕಗಳನ್ನು ಬದಲಾಯಿಸಲು ಉಪವಿಭಾಗವಾರು ಪರಿವರ್ತಕಗಳ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ.

ವಳಗುಂದ ವಾರ್ಡ್ ಉಪ ಚುನಾವಣೆ ಶೇ ೮೦ ರಷ್ಟು ಮತದಾನ

ಸೋಮವಾರಪೇಟೆ, ಅ. ೨೯: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ವಳಗುಂದ ವಾರ್ಡ್ ಉಪಚುನಾವಣೆಯ ಮತದಾನ ಶುಕ್ರವಾರ ವಳಗುಂದ ಅಂಗನವಾಡಿಯಲ್ಲಿ ನಡೆಯಿತು. ೩೨೦ ಮತದಾರರ ಪೈಕಿ ೨೭೦ ಮಂದಿ ಮತಚಲಾಯಿಸಿದರು.

ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಗಿಡಮೂಲಿಕೆಗಳನ್ನು ಬೆಳೆಸಲು ಯೋಜನೆ ರೂಪಿಸಿ

ಮಡಿಕೇರಿ, ಅ. ೨೮: ಗಂಭೀರ ಕಾಯಿಲೆಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಪರಿಹಾರ ಇದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಗಿಡಮೂಲಿಕೆ ಗಳನ್ನು ಅಭಿವೃದ್ಧಿಗೊಳಿಸಬೇಕು. ಈ ಹಿನ್ನೆಲೆ ಪ್ರಾಯೋಗಿಕವಾಗಿ