ಆರೋಗ್ಯವಂತ ಶಿಶು ಪ್ರದರ್ಶನ

ಚೆಟ್ಟಳ್ಳಿ, ಡಿ. 21: ಈರಳೆವಳಮುಡಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಸದಸ್ಯರುಗಳು, ಮಕ್ಕಳ ತಾಯಂದಿರು ಹಾಗೂ ಆರೋಗ್ಯ ಇಲಾಖೆಯವರು ಹಾಜರಿದ್ದರು.

ಕುಶಾಲನಗರದಲ್ಲಿ ಹನುಮ ಜಯಂತಿ

ಕುಶಾಲನಗರ, ಡಿ. 21: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ 33ನೇ ವರ್ಷದ ಹನುಮ ಜಯಂತಿ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ