ವಿವಿಧೆಡೆ ಶೈಕ್ಷಣಿಕ ಚಟುವಟಿಕೆಗಳು

ಮಡಿಕೇರಿ, ಮಾ. 27: ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾದ ಶೈಕ್ಷಣಿಕ ಚಟುವಟಿಕೆಗಳ ವಿವರಗಳು ಇಂತಿವೆ.ಶಾಲೆಗೆ ಕೊಡುಗೆ ನಾಪೋಕ್ಲು: ಸಮೀಪದ ಚೆರಿಯಪರಂಬು ಸರಕಾರಿ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿ

ಕಸ್ತೂರಿ ರಂಗನ್ ವರದಿಗೆ ಬೆಳೆಗಾರರ ವಿರೋಧ ಗೋಣಿಕೊಪ್ಪ ವರದಿ, ಮಾ. 27: ಜಿಲ್ಲೆಯ ಜನತೆಯ ಭವಿಷ್ಯಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಂತೆ ಕೆಲವು ಡೋಂಗಿ ಪರಿಸರವಾದಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಕುತ್ತ್‍ನಾಡು ಬೇರಳಿನಾಡು ಬೆಳೆಗಾರರ ಸಂಘದ ಅಧ್ಯಕ್ಷ ಲಾಲಾ ಭೀಮಯ್ಯ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಿರುವ ಗ್ರಾಮ ಪಂಚಾಯಿತಿ ಗಳು ವರದಿ ಅನುಷ್ಠಾನಗೊಳಿಸದಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿವೆ. ಆದರೆ ಜನತೆಯ ಕೂಗಿಗೆ ವಿರುದ್ಧವಾಗಿ ಪರಿಸರವಾದಿಗಳು ವರ್ತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸರವಾದಿಗಳ ವಿರುದ್ಧ ಹೋರಾಟ ನಡೆಸಲಾಗುವದು ಎಂದು ಹೇಳಿದರು. ಕುತ್ತ್‍ನಾಡು ಈಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಮೇರ ದಾದ ಮಾತನಾಡಿ, ಬೆಳೆಗಾರರು ಅರಣ್ಯ ಒತ್ತುವರಿ ಮಾಡಿಲ್ಲ. ಅನವಶ್ಯಕವಾಗಿ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ. ಅರಣ್ಯ ಪ್ರದೇಶಕ್ಕೆ ವರದಿ ಜಾರಿಯಾದರೆ ವಿರೋಧವಿಲ್ಲ. ಆದರೆ ಗ್ರಾಮಗಳನ್ನು ಅರಣ್ಯ ವ್ಯಾಪ್ತಿಯೆಂದು ಬಿಂಬಿಸಿರುವದು ತಪ್ಪು. ಪರಿಸರ ವಾದಿಗಳಿಂದ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ವರದಿಯಲ್ಲಿ ಉಲ್ಲೇಖಿಸಲಾಗಿರುವ ಗ್ರಾಮಗಳ ವಾಸ್ತವಾಂಶವನ್ನು ಅರಿಯದೆ ವರದಿಯನ್ನು ಜಾರಿಗೊಳಿಸುವದಕ್ಕೆ ವಿರೋಧವಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ವಿ. ಬಾಡಗ ಈಶ್ವರ ದವಸ ಭಂಡಾರದ ಅಧ್ಯಕ್ಷ ಕೆ. ಸುಬ್ರಮಣಿ, ಬಿಟ್ಟಂಗಾಲ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಕೆ. ಮನು ಪೂವಯ್ಯ, ವಿ. ಬಾಡಗ ಚಾಮುಂಡಿ ಅಭಿವೃದ್ಧಿ ಫಂಡ್ ಅಧ್ಯಕ್ಷ ಕಾಶಿ ಭೀಮಯ್ಯ ಇದ್ದರು.

ಗೋಣಿಕೊಪ್ಪ ವರದಿ, ಮಾ. 27: ಜಿಲ್ಲೆಯ ಜನತೆಯ ಭವಿಷ್ಯಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಂತೆ ಕೆಲವು ಡೋಂಗಿ ಪರಿಸರವಾದಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಕುತ್ತ್‍ನಾಡು