ಕಾರು ಡಿಕ್ಕಿಯಾಗಿ ಅನಾಹುತ ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ ಬಳಿಕ ಕಾರಿನ ಸಂಖ್ಯೆ ಫಲಕ ಬಿಚ್ಚಿರುವ ಸುಳಿವು ಲಭಿಸಿದೆ. ಘಟನೆ ವೇಳೆ ಯಾವದೇ ಅಪಾಯ ಎದುರಾಗಿಲ್ಲ ಎನ್ನಲಾಗುತ್ತಿದ್ದು, ದೂರು ಕೂಡ ಬಂದಿಲ್ಲವೆಂದು ಸುಂಟಿಕೊಪ್ಪ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು, ವಾಹನ ಡಿಕ್ಕಿ ಪಡಿಸಿದ್ದಲ್ಲದೆ ನಷ್ಟ ಉಂಟು ಮಾಡಿರುವವರು, ದುರಸ್ಥಿ ಪಡಿಸಿದರೆ ತಪ್ಪಿಲ್ಲವೆಂದೂ, ವಂಚಿಸಲು ಯತ್ನಿಸಿದರೆ, ಕ್ರಮ ಜರುಗಿಸಲಾಗುವದು ಎಂದು ಸುಳಿವು ನೀಡಿದ್ದಾರೆ.ಮಡಿಕೇರಿ, ಜು. 23: ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಮಾರ್ಗ ಬದಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ, ಕಂಬಗಳು ತುಂಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಘಟನೆ
ಅರೆಭಾಷೆ ಕವನಕ್ಕೆ ಮಂಗಳೂರು ವಿ.ವಿ.ಗೌರವಮಡಿಕೇರಿ, ಜು. 23: ಪ್ರಾಧ್ಯಾಪಕ, ಕವಿ ಹಾಗೂ ಪ್ರಗತಿಪರ ಕೃಷಿಕ ಡಾ.ಕರುಣಾಕರ ನಿಡಿಂಜಿ ಅವರ ಅರೆಭಾಷಾ ಕವನವೊಂದನ್ನು ಕನ್ನಡ ಪಠ್ಯದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯವು ಸುಳ್ಯ
ಕೈಕೊಟ್ಟ ಬಿಎಸ್ಎನ್ಎಲ್ ನೆಟ್ವರ್ಕ್: ಗ್ರಾಮಸ್ಥರ ಆಕ್ರೋಶ ಮುತ್ತಿಗೆಸೋಮವಾರಪೇಟೆ, ಜು.23: ತಾಲೂಕಿನ ಹರಗ ಗ್ರಾಮದಲ್ಲಿ ಕಳೆದ 25 ದಿನಗಳಿಂದ ಬಿಎಸ್‍ಎನ್‍ಎಲ್ ಮೊಬೈಲ್ ನೆಟ್‍ವರ್ಕ್ ಸ್ಥಗಿತಗೊಂಡಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಲ್ಲಿನÀ ಬಿಎಸ್‍ಎನ್‍ಎಲ್ ಎಸ್‍ಡಿಓಟಿಗೆ ಮುತ್ತಿಗೆ
ತಾ. 25ರಂದು ಲಯನ್ಸ್ ಪದಗ್ರಹಣ ಸೋಮವಾರಪೇಟೆ, ಜು23: ಇಲ್ಲಿನ ಲಯನ್ಸ್ ಸಂಸ್ಥೆಯ ನೂತನ ಸಾಲಿನ ಪದಗ್ರಹಣ ಕಾರ್ಯಕ್ರಮ ತಾ. 25ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಚೌಟ ತಿಳಿಸಿದ್ದಾರೆ. ಇಲ್ಲಿನ ಒಕ್ಕಲಿಗರ ಸಮುದಾಯ
ಕೊನೆಗೂ ನೆಲಕಚ್ಚಿದ ಶಾಲಾ ಕಟ್ಟಡಮಡಿಕೇರಿ, ಜು. 23: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿನ್ನೆ ದಿನ ಕೊನೆಗೂ ನೆಲಕಚ್ಚಿದೆ.