ಅಪಾಯ ಆಹ್ವಾನಿಸುತ್ತಿರುವ ಭಾಗಮಂಡಲ ಕರಿಕೆ ಹೆದ್ದಾರಿ ಕರಿಕೆ, ಜು. 23: ಕೆಲ ತಿಂಗಳುಗಳಿಂದ ಸದಾ ಸುದ್ದಿಯಲ್ಲಿರುವ ಭಾಗಮಂಡಲ ಕರಿಕೆ ಅಂತರರಾಜ್ಯ ಹೆದ್ದಾರಿ ಇದೀಗ ಗಾಳಿ ಮಳೆಯಿಂದಾಗಿ ರಸ್ತೆಗೆ ಬೃಹತ್ ಗಾತ್ರದ ಮರಗಳು ಉರುಳಿಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ಈ ಭಾಗದಲ್ಲಿ ಭಾಗಮಂಡಲದಿಂದ ಹನ್ನೊಂದು ಕಿ.ಮಿ.ನಿಂದ ಹತ್ತೊಂಬತ್ತು ಕಿ.ಮಿ. ತನಕ ತಲಕಾವೇರಿ ವನ್ಯಜೀವಿ ಅಭಯಾರಣ್ಯದ ದಟ್ಟ ಅರಣ್ಯದ ನಡುವೆ ಹತ್ತಾರು ಮರಗಳು ಉರುಳಿ ಬಿದ್ದು ರಸ್ತೆಯಲ್ಲಿ ವಾಹನ ಓಡಾಡು ವದು ಅತ್ಯಂತ ಪ್ರಯಾಸಕರವಾಗಿದೆ. ಇವೆಲ್ಲದರ ನಡುವೆ ನಮ್ಮನ್ನಾಳುತ್ತಿರು ವವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನದ ಪವಿತ್ರ ಸ್ಥಾನ ವಿಧಾನಸೌಧದಲ್ಲಿ ಹಾವು ಏಣಿ ಆಟ ಆಡುತ್ತಾ ಐಷಾರಾಮಿ ರೆಸಾರ್ಟ್ ಗಳಲ್ಲಿ ನಿದ್ರಿಸುತ್ತಿದ್ದರೆ ರಸ್ತೆ ಕಾಮಗಾರಿ ನಿರ್ವಹಿಸಬೇಕಿದ್ದ ಲೋಕೋಪಯೋಗಿ ಇಲಾಖೆ ಮಾತ್ರ ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿರುವದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಬಸ್ಸಿನಲ್ಲಿ ಗರಗಸ ಹಗ್ಗ...! ಈಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದÀ ಕರಿಕೆ ಭಾಗಮಂಡಲ ಮೂಲಕ ಮಡಿಕೇರಿಗೆ ಬೆಳಿಗ್ಗೆ ಸಂಚರಿಸುತ್ತಿರುವ ಭಾಗಮಂಡಲದ ವಿಜಯ ಲಕ್ಷ್ಮೀ ಮೋಟಾರ್ ಹೆಸರಿನ ಏಕೈಕ ಖಾಸಗಿ ಬಸ್ಸಿನ ಚಾಲಕ ಹಾಗೂ ನಿರ್ವಹಕರು ಪ್ರತಿದಿನ ನಿರಂತರವಾಗಿ ಸುರಿಯುವ ಮಳೆಯ ನಡುವೆ ಪ್ರಯಾಣಿಕರ, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ಮರಗಳನ್ನು ಕಡಿದು ನಂತರ ಮಡಿಕೇರಿ ಕಡೆ ಪ್ರಯಾಣಿಸುವದು ಪ್ರತಿವರ್ಷದಂತೆ ಈ ವರ್ಷ ಮುಂದುವರೆದಿರುವದು ಹೊಸತೇನಲ್ಲ. ಮಳೆಗಾಲ ಬಂತೆಂದರೆ ಈ ಬಸ್ಸಿನಲ್ಲಿ ಗರಗಸ, ಹಗ್ಗ, ಕೊಡಲಿ, ಕತ್ತಿ ಸೇರಿ ದಂತೆ ಇತರ ಅಗತ್ಯ ಪರಿಕರಗಳನ್ನು ಇಟ್ಟುಕೊಳ್ಳುವದು ಸಾಮಾನ್ಯವಾಗಿದ್ದು, ಇಲ್ಲವಾದಲ್ಲಿ ಕೋರ್ಟ್, ಕಚೇರಿ ಕೆಲಸಕ್ಕೆ ಕರಿಕೆಯಿಂದ ಎಪ್ಪತ್ತು ಕಿ.ಮಿ. ದೂರದ ಜಿಲ್ಲಾ ಕೇಂದ್ರ ಮಡಿಕೇರಿಗೆ ನಿತ್ಯ ತೆರಳುವ ಪ್ರಯಾಣಿಕರ ಗತಿ ಅದೋಗತಿ. ಆದರೆ ಪ್ರತಿವರ್ಷ ಮಳೆಗಾಲಕ್ಕೆ ಮೊದಲು ರಸ್ತೆ ಬದಿ ಬಿದ್ದ ಮರಗಳನ್ನು ತೆರವುಗೊಳಿಸಿ, ಕಾಡು ಕಡಿದು ಚರಂಡಿ ನಿರ್ಮಾಣ ಮಾಡಬೇಕೆಂಬ ಗ್ರಾಮಸ್ಥರ ಮನವಿ ಮಾತುಗಳು ಮಾತ್ರ ಈ ದಟ್ಟಾರಣ್ಯ ದೊಳು ಅರಣ್ಯರೋದನವಾದಂತಿದೆ. ಸಮಯದ ಅಭಾವದಿಂದ ವಾಹನ ದಾಟಲು ಮಾತ್ರ ಅನುಕೂಲಕರ ವಾಗುವಂತೆ ಮರಗಳನ್ನು ಕಡಿದು ಹರಸಾಹಸಪಟ್ಟು ಬಸ್ ಮುಂದಕ್ಕೆ ಸಂಚರಿಸುತ್ತಿದ್ದು ಪ್ರಯಾಣ ಕ್ಲಿಷ್ಟಕರವಾಗಿದ್ದು ಪ್ರಯಾಣಿಕರು ಜೀವವನ್ನು ಕೈಯಲ್ಲಿ ಒತ್ತೆಯಿಟ್ಟು ಪ್ರಯಾಣಿಸಬೇಕಾದ ಪರಿಸ್ಥಿತಿ ಇಂದಿನ ಆಧುನಿಕಯುಗದಲ್ಲಿರುವದು ದುರದೃಷ್ಟಕರ. ಅಧಿಕಾರಿಗಳಿಗೆ ಸುಗ್ಗಿ..! ನಾಲ್ಕೈದು ತಿಂಗಳ ಮಳೆಗಾಲ ದಲ್ಲಿ, ಬಸ್, ಲಘು ವಾಹನಗಳು, ಸಾರ್ವಜನಿಕರ ಸಹಕಾರದಿಂದ ರಸ್ತೆಗೆ ಬಿದ್ದ ಮರ, ಬಿದಿರು, ಕಾಡು ಬಳ್ಳಿ, ಬೆತ್ತ, ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡು ತ್ತಿದ್ದು, ಮಳೆಗಾಲ ಕಳೆಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ ಮಳೆ ಹಾನಿ ಪರಿಹಾರ ಎಂಬ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಗುತ್ತಿಗೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಕೊಳ್ಳೆ ಹೊಡೆಯುತ್ತಿರುವದು ಸಾಮಾನ್ಯವಾಗಿದೆ. ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಇಂತಹ ಅಕ್ರಮಗಳಿಗೆ ಜಿಲ್ಲಾಧಿಕಾರಿಗಳು ಕೂಡಲೇ ಕಡಿವಾಣ ಹಾಕುವದಲ್ಲದೆ ರಸ್ತೆಯ ದುರಸ್ತಿಗೆ ಕ್ರಮ ವಹಿಸಿ ಸಂಚಾರಕ್ಕೆ ಅಡಚಣೆಯಾಗಿರುವ ರಸ್ತೆ ಬದಿ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ನಾಟಾ ಸಂಗ್ರಹಾಲ ಯಕ್ಕೆ ಸಾಗಿಸಲು ಸೂಚನೆ ನೀಡಿ ಸಾರ್ವಜನಿಕರು ನಿರಾತಂಕವಾಗಿ ಸಂಚರಿಸಲು ಅನುವುಮಾಡಿ ಕೊಡ ಬೇಕೆಂಬದೇ ಗ್ರಾಮಸ್ಥರ ಒತ್ತಾಯ ವಾಗಿದೆ. ಹೊದ್ದೆಟ್ಟಿ ಸುಧೀರ್

ಕರಿಕೆ, ಜು. 23: ಕೆಲ ತಿಂಗಳುಗಳಿಂದ ಸದಾ ಸುದ್ದಿಯಲ್ಲಿರುವ ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿ ಇದೀಗ ಗಾಳಿ ಮಳೆಯಿಂದಾಗಿ ರಸ್ತೆಗೆ ಬೃಹತ್ ಗಾತ್ರದ ಮರಗಳು ಉರುಳಿಬಿದ್ದ ಪರಿಣಾಮ

ಒಂದು ಲಕ್ಷ ಮರಳು ಚೀಲಗಳ ಶೇಖರಣೆ

ಮಡಿಕೇರಿ, ಜು. 23: ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಹಾಗೂ ಸೂಕ್ಷ್ಮ ರಸ್ತೆಗಳಿಗೆ ಹಾನಿಯುಂಟಾದರೆ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮರಳು ಚೀಲಗಳನ್ನು

ಸಮ್ಮೇಳನ ಅಧ್ಯಕ್ಷರಿಗೆ ಆಹ್ವಾನ

ವೀರಾಜಪೇಟೆ, ಜು. 23: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಸಭಾಂಗಣದಲ್ಲಿ ನಡೆಯಲಿರುವ 8ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ

ಮೈಸೂರಿನಲ್ಲಿ ಜಿಲ್ಲೆಯ ಮಹಿಳೆ ನಾಪತ್ತೆ

ಮಡಿಕೇರಿ, ಜು. 23: ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲೆಯ ಮೂರ್ನಾಡು-ಮುತ್ತಾರುಮುಡಿಯ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಮುತ್ತಾರುಮುಡಿಯ ಮೇರ್‍ಕಜೆ ದಿ. ನಾಣಯ್ಯ ಅವರ