ಗೋಣಿಕೊಪ್ಪ, ನ. ೨೬: ತಂದೆ-ತಾಯಿಯ ಸಮಾಧಿಗೆ ಕದಿರುಕಟ್ಟಲು ತೆರಳಿದ್ದ ಬೆಳೆಗಾರರೊಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ವ್ಯಾಪ್ತಿಯಲ್ಲಿ ನಡೆದಿದೆ.
ತಿತಿಮತಿ ಸಮೀಪದ ಅಬ್ಬೂರು ತಾರಿಕಟ್ಟೆಯ ಉಪ್ಪುಂಡಿ ಕೇಶವ (೫೫) ಆನೆ ದಾಳಿಗೆ ಬಲಿಯಾದ ದುರ್ದೈವಿ. ಗುರುವಾರ ಬೆಳಿಗ್ಗೆ ೭.೩೦ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮನೆಯಿಂದ ಮುನ್ನೂರು ಮೀಟರ್ ದೂರದಲ್ಲಿರುವ ತಂದೆ-ತಾಯಿಯ ಸಮಾಧಿಗೆ ಕದಿರು ಕಟ್ಟಲು ಕಾರ್ಮಿಕರೊಂದಿಗೆ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ಆನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಅರಣ್ಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ. ಮೃತ ಕೇಶವ ಅವರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ. ಗೋಣಿಕೊಪ್ಪ ಶವಾಗಾರದ ಮುಂದೆ ರೈತ ಸಂಘದ ಪದಾಧಿಕಾರಿಗಳು ಸೂಕ್ತ ನ್ಯಾಯಕ್ಕಾಗಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಕಾಡಾನೆಯಿಂದ ಜೀವ ಕಳೆದುಕೊಳ್ಳುತ್ತಿರುವವರ ಕಷ್ಟ ಆಲಿಸುವವರು ಇಲ್ಲದಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಶವಾಗಾರದ ಮುಂದೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಜಮಾವಣೆಯಾಗಿದ್ದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮೃತರ ಕುಟುಂಬದ ಮಕ್ಕಳಿಗೆ ಅರಣ್ಯ ಇಲಾಖೆಯಲ್ಲಿ ಖಾಯಂ ಉದ್ಯೋಗ ನೀಡುವಂತೆ ಕುಟುಂಬಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಸುದ್ದಿ ತಿಳಿದ ಗ್ರಾಮಸ್ಥರು, ನಾಗರಿಕರು ಗೋಣಿಕೊಪ್ಪ ಆಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಮಹೇಶ್ ಕುಮಾರ್ ಮುಂದಾಳತ್ವದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಆರ್.ಮುಧೋಳ್, ಠಾಣಾಧಿಕಾರಿ ಕಾಳೇಗೌಡ, ಅರಣ್ಯ ಇಲಾಖೆಯ ತಿತಿಮತಿ ವಲಯ ಆರ್ಎಫ್ಒ ಗಂಗಾಧರ್ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು. ಸಂಜೆಯ ವೇಳೆ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಎನ್.ಎನ್. ದಿನೇಶ್/ಹೆಚ್.ಕೆ. ಜಗದೀಶ್
ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ೫ ಲಕ್ಷ ರೂಪಾಯಿ ನೀಡಲಾಗಿದ್ದು, ಇದರ ಜೊತೆಗೆ ಮಾಸಿಕ ೪,೦೦೦ ರೂಪಾಯಿ ಪಿಂಚಣಿ ಮಂಜೂರು ಮಾಡಲಾಗಿದೆ. ಉಳಿದ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಅಲ್ಲದೆ, ಸಂತ್ರಸ್ತರ ಪತ್ನಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವಂತೆ ಶಿಫಾರಸು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸೌರ ಬೇಲಿಗಳು, ಆನೆ ತಡೆ ಕಂದಕ ಮತ್ತು ಕಾಂಕ್ರೀಟ್ ತಡೆಗೋಡೆ ಇದ್ದರೂ, ತಡೆಗೋಯ ನಡುವೆ ಇದ್ದ ಅಂತರಮೊAದರ ಮೂಲಕ ಆನೆ ಕಾಡಿನಿಂದ ಹೊರಬರಲು ಸಾಧ್ಯವಾಗಿದೆ. ಕಾಂಕ್ರೀಟ್ ತಡೆಗೋಡೆಯನ್ನು ಮತ್ತಷ್ಟು ವಿಸ್ತರಿಸಲು ಪ್ರಸ್ತುತ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಇದಲ್ಲದೆ, ಆನೆಗಳ ಚಲನವಲನದ ಕುರಿತು ಬುಧವಾರ ರಾತ್ರಿ ೮ ಗಂಟೆಗೆ ಮತ್ತು ಗುರುವಾರ ಬೆಳಿಗ್ಗೆ ೭ ಗಂಟೆಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಸಂತ್ರಸ್ತರು ಈ ಎಚ್ಚರಿಕೆ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ.
ಸAಘರ್ಷ ಪೀಡಿತ ಪ್ರದೇಶಗಳಲ್ಲಿರುವ ೨,೫೦೦ಕ್ಕೂ ಹೆಚ್ಚು ತೋಟಗಳಿಗೆ ಎಚ್ಚರಿಕೆ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ಗಳನ್ನು ಕಳುಹಿಸಿದ್ದೇವೆ.
- ಸೋನಲ್ ವೃಷ್ಣಿ,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,