ಮಡಿಕೇರಿ, ನ. ೨೬: ಸಂವಿಧಾನ ದಿನದ ಅಂಗವಾಗಿ ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೬ನೇ ವರ್ಷದ ಕೊಡವ ನ್ಯಾಷನಲ್ ಡೇ ನಡೆಯಿತು. ಕೊಡವ ಜನಾಂಗದ ಸಾಂವಿಧಾನಿಕ ಹಕ್ಕುಗಳು, ಕೊಡವಲ್ಯಾಂಡ್ ಸ್ವಾಯತ್ತತೆ, ಪರಿಶಿಷ್ಟ ಪಂಗಡ ಸ್ಥಾನಮಾನ, ಕೊಡವ ತಕ್ಕ್ ಭಾಷೆಗೆ ಮಾನ್ಯತೆ ಹಾಗೂ ೨೦೨೭ರ ಜನಗಣತಿಯಲ್ಲಿ ಕೊಡವರ ಪ್ರತ್ಯೇಕ ಜನಾಂಗೀಯ ಗುರುತಿನ ದಾಖಲಾತಿ ಕುರಿತು ಗಣ್ಯರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಜನಾಂಗದ ವಿಶಿಷ್ಟ ಗುರುತು, ಸಾಂಸ್ಕೃತಿಕ ಪರಂಪರೆ, ಪಾರಂಪರಿಕ ಹಕ್ಕುಗಳು ಹಾಗೂ ಸಂವಿಧಾನಾತ್ಮಕ ರಕ್ಷಣೆಯ ಅಗತ್ಯತೆಯನ್ನು ಪ್ರಸ್ತಾಪಿಸಿದರು.
ಕೊಡವಲ್ಯಾಂಡ್ಗಾಗಿ ನಡೆಯುತ್ತಿರುವ ಹೋರಾಟ ಪ್ರತ್ಯೇಕತಾವಾದವಲ್ಲ, ಬದಲಾಗಿ ಸಂವಿಧಾನದ ಚೌಕಟ್ಟಿನೊಳಗಿನ ಸ್ವಯಂ ಆಡಳಿತಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ನಾವು ಭಾರತದ ವಿರುದ್ಧವಲ್ಲ, ಸಂವಿಧಾನದ ಪರವಾಗಿದ್ದೇವೆ. ಕೊಡವರನ್ನು ವಿಲೀನಗೊಳಿಸಲು, ಅವರ ನಂಬಿಕೆಯಿAದ ನಿರಸ್ತ್ರಗೊಳಿಸಲು ಅಥವಾ ಅವರ ವಿಶಿಷ್ಟ ಗುರುತನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ನುಡಿದರು.
ಕೊಡವ ಜನಾಂಗದ ಶಾಸ್ತ್ರೀಯ ನಾಮಕರಣವಾದ ‘ಕೊಡವ’ ಎಂಬ ಪದವನ್ನು ಅಧಿಕೃತ ದಾಖಲೆಗಳಲ್ಲಿ ಮರುಸ್ಥಾಪಿಸುವ ಕುರಿತು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಡಾ. ದ್ವಾರಕಾನಾಥ್ ಆಯೋಗದ ಮುಂದೆ ಐತಿಹಾಸಿಕ, ಮಾನವಶಾಸ್ತ್ರೀಯ ಹಾಗೂ ಜನಾಂಗೀಯ ದಾಖಲೆಗಳೊಂದಿಗೆ ವಾದ ಮಂಡಿಸಲಾಗಿದ್ದು, ‘ಕೊಡಗರು’ ಎಂಬ ಪದದ ಬದಲಿಗೆ ‘ಕೊಡವ’ ಎಂಬ ನಾಮಕರಣವನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ವಿಚಾರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು ಕೊಡವ ಜನಾಂಗದ ವಿಶಿಷ್ಟ ಗುರುತಿನ ಮರುಸ್ಥಾಪನೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.
ಕೊಡವರ ಆದಿಮಸಂಜಾತ ವಂಶಾವಳಿ ಮತ್ತು ವಿಶಿಷ್ಟ ಜನಾಂಗೀಯ ಗುರುತನ್ನು ದೃಢೀಕರಿಸಲು ಜಿ. ರಿಕ್ಟರ್ ಅವರ ‘ಗೆಜೆಟಿಯರ್ ಆಫ್ ಕೂರ್ಗ್’, ಡಾ. ಐ.ಎಂ. ಮುತ್ತಣ್ಣ ಅವರ ‘ದಿ ಟೈನಿ ಮಾಡೆಲ್ ಸ್ಟೇಟ್ ಆಫ್ ಸೌತ್ ಇಂಡಿಯಾ’, ಡಾ. ಎಂ.ಎನ್. ಶ್ರೀನಿವಾಸ್ ಅವರ ‘ರಿಲಿಜನ್ ಅಂಡ್ ಸೊಸೈಟಿ ಅಮಾಂಗ್ ದಿ ಕೂರ್ಗ್ಸ್ ಆಫ್ ಸೌತ್ ಇಂಡಿಯಾ’, ಡಿ.ಎನ್. ಕೃಷ್ಣಯ್ಯ ಅವರ ‘ಕೊಡಗಿನ ಇತಿಹಾಸ’, ಡಾ. ಪಿ.ಎಸ್. ರಾಮಾನುಜಂ ಅವರ ‘ಕೊಡವರು’ ಸೇರಿದಂತೆ ಹಲವು ಐತಿಹಾಸಿಕ ಹಾಗೂ ಸಂಶೋಧನಾ ಕೃತಿಗಳನ್ನು ಉಲ್ಲೇಖಿಸಿದರು.
ಕೊಡವರ ಇತಿಹಾಸ, ಸಂಸ್ಕೃತಿ, ಭಾಷೆ, ಧಾರ್ಮಿಕ ಆಚರಣೆಗಳು ಮತ್ತು ಪಾರಂಪರಿಕ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ದಾಖಲೆಗಳು ಮಹತ್ವದ್ದಾಗಿವೆ ಎಂದರು.
ಕೊಡವರ ಹಕ್ಕುಗಳ ಮರುಸ್ಥಾಪನೆಗಾಗಿ ಶಾಂತಿಯುತ ಹೋರಾಟ ಮುಂದುವರಿಸುವುದಾಗಿ ನಾಚಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಲಾದ ಪತ್ರದಲ್ಲಿನ ಬೇಡಿಕೆಗಳನ್ನೂ ವಿವರಿಸಲಾಯಿತು.
ನವೆಂಬರ್ ೨೬, ೧೯೪೯ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಕೊಡವ ರಾಷ್ಟ್ರೀಯ ದಿನವೂ ಸಂವಿಧಾನದ ಮೇಲಿನ ನಂಬಿಕೆ ಹಾಗೂ ಕೊಡವ ಜನಾಂಗದ ವಿಶಿಷ್ಟ ಗುರುತಿನ ಪುನರುಚ್ಚಾರಣೆಯ ದಿನವಾಗಿದೆ.
ಸಂವಿಧಾನ ರಚನಾ ಸಭೆಯಲ್ಲಿ ಕೊಡವ ಜನಾಂಗದ ಪ್ರತಿನಿಧಿಗಳಿರಲಿಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸಿದ ಅವರು, ೧೯೫೬ರ ರಾಜ್ಯ ಪುನರ್ವಿಂಗಡಣೆಯ ಸಂದರ್ಭದಲ್ಲಿ ಕೊಡಗು ರಾಜ್ಯವನ್ನು ವಿಲೀನಗೊಳಿಸಿದ ಕುರಿತು ಕೊಡವ ಜನಾಂಗದ ಹಕ್ಕುಗಳ ದೃಷ್ಟಿಯಿಂದ ಮರುಪರಿಶೀಲನೆ ಅಗತ್ಯವೆಂದು ಅಭಿಪ್ರಾಯಪಟ್ಟರು.
ಕೊಡವರ ಸಾಂಸ್ಕೃತಿಕ, ಭಾಷಿಕ, ಧಾರ್ಮಿಕ ಹಾಗೂ ಭೌಗೋಳಿಕ ಗುರುತನ್ನು ಸಂರಕ್ಷಿಸುವುದು ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆ ಎಂದು ಹೇಳಿದರು.
ಸಂವಿಧಾನದ ವಿಧಿ ೨೪೪, ೩೭೧ ಹಾಗೂ ಆರನೇ ಅನುಸೂಚಿಯ ಮಾದರಿಯಲ್ಲಿ ಕೊಡವಲ್ಯಾಂಡ್ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವುದು, ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವುದು, ಸಿಕ್ಕಿಂ ಸಂಘ ಮಾದರಿಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದು, ಕೊಡವ ಪವಿತ್ರ ಸಂಸ್ಕಾರ ಕೋವಿಗೆ ಸಂವಿಧಾನದ ವಿಧಿ ೨೫ ಮತ್ತು ೨೬ರ ಅಡಿಯಲ್ಲಿ ರಕ್ಷಣೆ ಹಾಗೂ ಶಾಸನಬದ್ಧ ವಿನಾಯಿತಿಯ ಮುಂದುವರಿಕೆ, ಕೊಡವರ ಪಿತ್ರಾರ್ಜಿತ ಭೂಮಿಯ ಮರುಸ್ಥಾಪನೆ ಮತ್ತು ನ್ಯಾಯಯುತ ಪರಿಹಾರ, ಐನ್ಮನೆಗಳು, ದೇವಟ್ ಪರಂಬು, ನಾಲ್ನಾಡು ಅರಮನೆ ಸೇರಿದಂತೆ ಕೊಡವ ಪರಂಪರೆಯ ಸ್ಮಾರಕಗಳ ರಕ್ಷಣೆ ಸೇರಿದಂತೆ ೨೦೨೭ರಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಗುರುತಿನೊಂದಿಗೆ ವೈಜ್ಞಾನಿಕವಾಗಿ ಗಣತಿ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಒತ್ತಾಯಿಸಲಾಯಿತು.
ಖ್ಯಾತ ಮಾನವಶಾಸ್ತ್ರಜ್ಞ ಪ್ರೊ. ಡಾ. ಎಂ.ಎ. ಕಲಾಂ ಮಾತನಾಡಿ, ವೈಜ್ಞಾನಿಕ ಜನಗಣತಿಯ ಮೂಲಕ ಕೊಡವರ ಏಕ-ಜನಾಂಗೀಯ ಗುರುತನ್ನು ದಾಖಲಿಸುವುದು ಮಹತ್ವದ್ದಾಗಿದೆ ಎಂದು ಹೇಳಿದರು.
ಜನಗಣತಿಯಲ್ಲಿ ಪ್ರತ್ಯೇಕ ಗುರುತು ದೊರೆತರೆ Sಖಿ ಸ್ಥಾನಮಾನ, ಕೊಡವ ತಕ್ಕ್ಗೆ ಭಾಷಾ ಮಾನ್ಯತೆ, ಕೊಡವಲ್ಯಾಂಡ್ ಸ್ವಾಯತ್ತತೆ ಹಾಗೂ ಪಿತ್ರಾರ್ಜಿತ ಭೂಮಿಯ ಹಕ್ಕುಗಳ ಕುರಿತ ಬೇಡಿಕೆಗಳಿಗೆ ದಾಖಲೆ ಆಧಾರ ದೊರೆಯಲಿದೆ ಎಂದರು.
ಕೈಮಡ, ಐನ್ಮನೆ, ದೇವಟ್ ಪರಂಬು, ಇಗ್ಗುತ್ತಪ್ಪ ದೇವರು, ಪುತ್ತರಿ ಹಾಗೂ ವಾಲಗ ಸೇರಿದಂತೆ ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಅವರ ವಿಶಿಷ್ಟ ಗುರುತಿನ ಭಾಗವಾಗಿವೆ ಎಂದು ತಿಳಿಸಿದರು.
ಎಲ್ಲಾ ಧರ್ಮಗಳನ್ನು ಗೌರವಿಸುವುದರ ಜೊತೆಗೆ ಕೊಡವ ಪ್ರಕೃತಿ ಆರಾಧನೆ ಮತ್ತು ಪೂರ್ವಜರ ಆರಾಧನೆಯ ಪರಂಪರೆಯನ್ನು ಉಳಿಸಿಕೊಳ್ಳುವುದು ಕೊಡವರ ಹಕ್ಕಾಗಿದೆ ಎಂದು ಅವರು ಹೇಳಿದರು.
ಹೈಕೋರ್ಟ್ ವಕೀಲರಾದ ಕಿರಣ್ ನಾರಾಯಣ್ ಮಾತನಾಡಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತಕ್ಕಾಗಿ ಡಾ. ಸುಬ್ರಮಣ್ಯನ್ ಸ್ವಾಮಿ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಸುತ್ತಿರುವ ಹೋರಾಟದ ಕುರಿತು ವಿವರಿಸಿದರು.
೩೬ ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟವು ಇದೀಗ ನ್ಯಾಯಾಂಗದ ಮುಂದಿದ್ದು, ಕೊಡವ ಜನಾಂಗದ ದೃಢನಿಶ್ಚಯ, ನಿರಂತರ ಬೆಂಬಲ ಹಾಗೂ ಒಗ್ಗಟ್ಟು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕೊಡಂದೆರ ಉತ್ತರೆ ತಿಮ್ಮಯ್ಯ, ಆದೇಂಗಡ ತಾರಾ ಅಯ್ಯಮ್ಮ, ಚೋಳಪಂಡ ಜ್ಯೋತಿ ನಾಣಯ್ಯ, ನಂದೇಟಿರ ಕವಿತಾ ಸುಬ್ಬಯ್ಯ, ಪುಲ್ಲೆರ ಸ್ವಾತಿ ಕಾಳಪ್ಪ, ನಂದಿನೆರವAಡ ರೇಖಾ ನಾಚಪ್ಪ, ಕೊಡಂದೇರ ದುಹಿತಾ, ನಂದಿನೆರವAಡ ನಿಶಾ, ಪಟ್ಟಮಾಡ ಲಲಿತಾ ಗಣಪತಿ, ಬಿದ್ದಂಡ ಸಾಹಿತ್ಯ ಉತ್ತಪ್ಪ, ಪುಲ್ಲೆರ ದೇಚಮ್ಮ ಕೊಡವತಿ, ಬಿದ್ದಂಡ ಸುರಕ್ಷಿತಾ ಉತ್ತಪ್ಪ, ಮಂದಪAಡ ರಚನಾ ಮಂದಣ್ಣ, ಅರೆಯಡ ಸವಿತಾ ಗಿರೀಶ್, ನಂದಿನೆರವAಡ ಬೀನಾ ಅಯ್ಯಣ್ಣ, ಬಿದ್ದಂಡ ರಾಧಾ ಮಾದಯ್ಯ, ನಾಯಕಂಡ ಶಾಂತಿ ಬಿದ್ದಪ್ಪ, ಐ.ಕೆ. ಭಾಗೀರಥಿ, ಅಡಿಕೆರ ಶಾಂತಿ ಜಯ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಚಂಗAಡ ಕನ್ನಿಕಾ ಸೂರಜ್, ಚಂಗAಡ ಶಿವಾಂಶಿ ಮುತ್ತಮ್ಮ, ಅಜ್ಜಮಾಡ ಸುನೀತಾ ಚೆಂಗಪ್ಪ, ಅಜ್ಜಮಾಡ ಸಾವಿತ್ರಿ ಪೆಮ್ಮಯ್ಯ, ಅಜ್ಜಮಾಡ ಅನಿತಾ ಮೋಹನ್, ಅಪ್ಪಾರಂಡ ನಂದಿನಿ ನಂಜಪ್ಪ, ಬಾಳೆಯಡ ಮೀರಾ ಅಶೋಕ್, ಮಾಳೇಟಿರ ಉಷಾ ಸುಬ್ಬಯ್ಯ, ಬೈರೇಟಿರ ಶಾಂತಿ ಸುಬ್ಬಯ್ಯ, ಬೈರೇಟಿರ ದಮಯಂತಿ, ಪಟ್ಟಚೆರವಂಡ ಸೋನಿಯಾ, ಚೊಯಮಾಡಂಡ ಪವಿತ್ರಾ, ಕೇಚಮಾಡ ಶಿಲ್ಪಾ ಶರತ್, ಅಪ್ಪಾರಂಡ ವಿನ್ಸಿ ಪ್ರಸಾದ್, ಅಪ್ಪಾರಂಡ ಚುಕ್ಕಿ ಪೂವಣ್ಣ, ಕೇಚಮಾಡ ಶ್ರವ್ಯಾ ತಂಗಮ್ಮ, ಅಳಮಂಡ ಜೈ ಗಣಪತಿ, ನಂದೇಟಿರ ರವಿ ಸುಬ್ಬಯ್ಯ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಪುಳ್ಳಂಗಡ ನಟೇಶ್, ಕಿರಿಯಮಾಡ ಶೆರಿನ್, ಬೇಪಡಿಯಂಡ ದಿನು, ಮಂದಪAಡ ಮನೋಜ್ ಮಂದಣ್ಣ, ಚೆಂಬAಡ ಜನತ್, ಕಾಟುಮಣಿಯಂಡ ಉಮೇಶ್, ಅರೆಯಡ ಗಿರೀಶ್, ಅರೆಯಡ ರತ್ನ ಪೆಮ್ಮಯ್ಯ, ನಂದೇಟಿರ ಮೋಹನ, ಕೆಟೋಳಿರ ಹರೀಶ್ ಪೂವಯ್ಯ, ಅಪ್ಪಾರಂಡ ಪೂವಣ್ಣ, ಕಾಡ್ಯಮಡ ಗಣಪತಿ, ಪೊರಿಮಂಡ ದಿನಮಣಿ ಪೂವಯ್ಯ, ಕಲಿಯಂಡ ಪ್ರಕಾಶ್, ಬೊಟ್ಟಂಗಡ ಗಿರೀಶ್, ಮದ್ರಿರ ಕರುಂಬಯ್ಯ, ಬಿದ್ದಂಡ ಮಾದಯ್ಯ, ಉದಿಯಂಡ ಚೆಂಗಪ್ಪ, ಸೋಮೆಯಂಡ ರೇಶಾ ತಿಮ್ಮಯ್ಯ, ಅಜ್ಜಮಾಡ ಚಿಮ್ಮ, ಬಾಚಿನಾಡಂಡ ಜಗದೀಶ್, ಚಂಗAಡ ಸೂರಜ್, ಚಂಗAಡ ವಿದ್ವಾನ್, ಚೋಕಂಡ ಕಟ್ಟಿ, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ಚೋಳಂಡ ಸೋಮಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ನೆರ್ಪಂಡ ಜಿಮ್ಮಿ ಚೆಂಗಪ್ಪ, ಪಟ್ರಪಂಡ ರಮೇಶ್ ಬೋಪಯ್ಯ, ಐತಿಚಂಡ ಬನ್ಸಿ ಬೋಪಣ್ಣ, ನಂದಿನೆರವAಡ ಅಪ್ಪಯ್ಯ, ಕೊಳ್ಳಿಮಾಡ ಕಾರ್ಯಪ್ಪ, ಕಾಟಿಮಾಡ ಅಣ್ಣಯ್ಯ, ಡಾ. ಕಾಳಿಮಾಡ ಶಿವಪ್ಪ, ಬಿದ್ದಂಡ ರಾಜಾ ಉತ್ತಪ್ಪ, ಹರಿ ಮುತ್ತಪ್ಪ, ಚೊಯಮಾಡಂಡ ಸನ್ನು, ಬಡುವಂಡ ವಿಜಯ, ಐಲಪಂಡ ಮಿಟ್ಟು ಉತ್ತಪ್ಪ, ಬಿ.ಎಂ. ಗಣಪತಿ, ಕಾಡ್ಯಮಡ ಕರುಂಬಯ್ಯ, ಬಾಳೆಯಡ ಅಶೋಕ್, ಮಾಣವಟ್ಟಿರ ಸೋಮೇಶ್, ಕುಲ್ಲೇಟಿರ ಅರುಣ ಬೇಬ, ಚೇರಂಡ ಸುಭಾಷ್, ಮೇಕೇರಿರ ದಿಲೀಪ್ ದೇವಯ್ಯ, ಪುಟ್ಟಿಚಂಡ ಸನ್ನು ಪೂವಯ್ಯ, ಅಜ್ಜೇಟಿರ ಪಳಂಗಪ್ಪ, ಅಜ್ಜಿನಿಕಂಡ ಕುಶಾಲಪ್ಪ, ಕೋದಂಡ ಸುರ ಅಯ್ಯಪ್ಪ, ನಂದೇಟಿರ ಗಾಂಧಿ ದೇವಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮಾಳೇಟಿರ ರತ್ನ ಸುಬ್ಬಯ್ಯ, ಪೂಳಂಡ ತನು, ಪೂಳಂಡ ಡಾಲು ಪೂಣಚ್ಚ, ಪೂಳಂಡ ರಾಜಾ ಗಣಪತಿ, ಪೂಳಂಡ ತಿಮ್ಮಯ್ಯ, ಮುಂಡAಡ ಪಳಂಗಪ್ಪ, ಪೂಳಂಡ ವಿನು ಪೆಮ್ಮಯ್ಯ, ಮುಕ್ಕಾಟಿರ ಮುತ್ತಣ್ಣ, ಎಂ.ಎನ್. ಗಣಪತಿ, ಮಂಡೇಪAಡ ದೇವಯ್ಯ, ನಂದೇಟಿರ ಜೀವನ್, ತಾತಪಂಡ ಪೊನ್ನಪ್ಪ, ಕಾಟುಮಣಿಯಂಡ ಲೆಹರ್, ಮಣವಟ್ಟಿರ ಉತ್ತಮ್ ಅಯ್ಯಪ್ಪ, ಅಪ್ಪಾರಂಡ ತಿಮ್ಮಯ್ಯ, ಅರೆಯಡ ಸಾವನ್, ನಂದೇಟಿರ ನಿಶು ನಂಜಪ್ಪ, ಮಣವಟ್ಟಿರ ನಂದ ಭೀಮಯ್ಯ, ಅಳಮಂಡ ನೆಹರು, ಪಟ್ಟಮಾಡ ಪ್ರಕಾಶ್, ಚಟ್ಟಂಗಡ ಸೋಮಣ್ಣ, ಚಂಗAಡ ಪಳಂಗಪ್ಪ, ಬೊಜ್ಜಂಗಡ ನಂದ, ಮಣವಟ್ಟಿರ ಉತ್ತಪ್ಪ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಮಂಡೇಪAಡ ನಿರನ್ ಮುತ್ತಪ್ಪ, ಮುಳ್ಳಂಡ ರತ್ತು ಚೆಂಗಪ್ಪ, ಬಟ್ಟಿರ ರಕ್ಷು ಕಾಳಪ್ಪ, ಸಾದೇರ ರಮೇಶ್, ಅಜ್ಜಮಾಡ ಮಾದಪ್ಪ, ಅಜ್ಜಮಾಡ ಪ್ರಸಾದ್, ಕಾಂಡೇರ ಪ್ರದೀಪ್, ಮಂದಪAಡ ಸೂರಜ್, ನಂದಿನೆರವAಡ ಬೋಪಣ್ಣ, ಪಾಲಚಂಡ ಚಿಟ್ಟಿಯಪ್ಪ, ನಾಪಂಡ ಅಚ್ಚಯ್ಯ, ಅಲ್ಲಂಡ ರಾಜಾ ಚಿಣ್ಣಪ್ಪ, ಕೆ.ಬಿ. ಕರುಂಬಯ್ಯ, ಕಾಂಡೆರ ತೇಜಸ್, ಪೊರಿಮಂಡ ಈರಪ್ಪ, ಬದಲೆರ ಕೌಶಿಕ್, ಚೋಳಪಂಡ ರಘು, ಅಡಿಕೆರ ಜಯ ಮುತ್ತಪ್ಪ, ಚೇರಂಡ ನಂದ, ಬಲ್ಲಾರಂಡ ಅಚ್ಚಯ್ಯ, ಅಮ್ಮಾಟಂಡ ಪ್ರಸಾದ್ ಗಣಪತಿ, ಪುಲ್ಲೆರ ಬೋಪಯ್ಯ, ಕೊಕ್ಕಲೆರ ಮೊಣ್ಣಪ್ಪ, ಚೋಳಪಂಡ ನಾಣಯ್ಯ, ಮಂಡೆಡ ಕುಮಾರ್, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಬಲ್ಲಚಂಡ ಸಂಪತ್ ಕುಟ್ಟಪ್ಪ, ಮಿದೇರಿರ ತಿಮ್ಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಪುಲ್ಲೆರ ಕಾಳಪ್ಪ, ಅಪ್ಪಾರಂಡ ಪ್ರಸಾದ್, ಪುದಿಯೊಕ್ಕಡ ಪೃಥ್ವಿ, ಅಪ್ಪಾರಂಡ ಪ್ರಕಾಶ್, ಅಮ್ಮಾಟಂಡ ಗಣಪತಿ, ನಂದಿನೆರವAಡ ನಂದ, ನಂದಿನೆರವAಡ ಟಿಪ್ಪು ಬಿದ್ದಪ್ಪ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಚೋಳಪಂಡ ವಿಜಯ್ ಮಂದಣ್ಣ, ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಕೇಚಮಾಡ ಶರತ್, ಮಚ್ಚಮಾಡ ರಂಜಿ, ಅಪ್ಪೆಂಗಡ ಮಾಲೆ ಪೂಣಚ್ಚ, ನಂದಿನೆರವAಡ ಅಯ್ಯಣ್ಣ, ಬಿದ್ದಂಡ ಅಚ್ಚಯ್ಯ, ನಂದಿನೆರವAಡ ವಿಜು, ಪುದಿಯೊಕ್ಕಡ ಕಾಶಿ, ಸೊಮೆಯಂಡ ದಿಲೀಪ್, ಮಣವಟ್ಟಿರ ಜಗದೀಶ್, ಅಪ್ಪನೆರವಂಡ ವಿನು, ಅಪ್ಪುಮಣಿಯಂಡ ರಘು, ಮುಕ್ಕಾಟಿರ ಪ್ರೇಮ್ ಪಾಲ್ಗೊಂಡಿದ್ದರು.
ಕೊಡವಲ್ಯಾAಡ್ ಹಕ್ಕೊತ್ತಾಯದ ಪರ ಹೋರಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು. ದುಡಿಕೊಟ್ಟ್ ಪಾಟ್ನೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಎನ್.ಯು.ನಾಚಪ್ಪ ಹಾಗೂ ಅತಿಥಿಗಳು ಬಾಳೆ ಬೇಂಗುವ ಕಾರ್ಯ ನೆರವೇರಿಸಿದರು. ಅತಿಥಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು.