ಮಡಿಕೇರಿ, ನ. ೨೬: ಪ್ರಸಕ್ತ ಮಡಿಕೇರಿ ಡೌನ್ಸ್ ಗಾಲ್ಫ್ ಕ್ಲಬ್ ಆಡಳಿತ ಮಂಡಳಿಯು ತಾ. ೨೩ ರಂದು ಸಭೆ ಸೇರಿ ೯ ಮಂದಿ ಸದಸ್ಯರ ಸದಸ್ಯತ್ವವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ.

ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಕಟ್ಟಡ ನಿರ್ಮಾಣ ನ್ಯೂನ್ಯತೆಗಳ ಬಗ್ಗೆ ಈಗಿನ ಆಡಳಿತ ಮಂಡಳಿಯು ಆಂತರಿಕ ತನಿಖೆ ನಡೆಸುತ್ತಿದೆ. ಈ ಸಂಬAಧ ಮುಖ್ಯವಾಗಿ ಈ ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಅಧ್ಯಕ್ಷರಾಗಿದ್ದ ಐ.ಕೆ. ಅನಿಲ್ ಸೇರಿದಂತೆ ಪದಾಧಿಕಾರಿಗಳಾಗಿದ್ದ ಕೆ.ಎಂ. ಅಪ್ಪಣ್ಣ, ಆರ್. ಸುಂದರA ಹಾಗೂ ಎನ್.ಸಿ. ಸುನೀಲ್ ದೇವಯ್ಯ ಇವರುಗಳನ್ನು ತಾತ್ಕಾಲಿಕವಾಗಿ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಈ ಹಿಂದಿನ ಆಡಳಿತ ಮಂಡಳಿಯ ನ್ಯೂನ್ಯತೆಗಳ ಆಂತರಿಕ ತನಿಖೆ ಮುಕ್ತಾಯಗೊಳ್ಳುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಅದುವರೆಗೆ ಈ ನಾಲ್ವರು ಸದಸ್ಯರು ಗಾಲ್ಫ್ ಕ್ಲಬ್‌ನ ಸದಸ್ಯತ್ವದ ಹಕ್ಕನ್ನು, ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಮಾತ್ರವಲ್ಲ ಕ್ಲಬ್ ಆವರಣದೊಳಗೆ ಪ್ರವೇಶವನ್ನು ಕೂಡ ಮಾಡಲು ನಿಷೇಧ ಹೇರಲಾಗಿದೆ, ಆದರೆ ಆಂತರಿಕ ತನಿಖೆ ಸಂದರ್ಭ ಅಗತ್ಯಬಿದ್ದಾಗ ಅವರನ್ನು ಕರೆಸಿದಾಗ ಮಾತ್ರ ಅವರುಗಳು ಕ್ಲಬ್ ಆವರಣದೊಳಗೆ ಪ್ರವೇಶಿಸಬಹುದಾಗಿದೆ.

ಮತ್ತಿತರ ಐವರ ಅಮಾನತು

ಇದೇ ಅಲ್ಲದೆ ತನಿಖೆ ಪೂರ್ಣಗೊಳ್ಳುವವರೆಗೆ ಇತರ ಸದಸ್ಯರುಗಳಾದ ಕೆ.ಸಿ. ತಿಮ್ಮಯ್ಯ, ಎಸ್. ದಿಲೀಪ್ ಅಪ್ಪಚ್ಚು, ಬಿ.ಎ. ಅಚ್ಚಯ್ಯ, ಜಿ.ಬಿ. ಅರವಿಂದ್ ಹಾಗೂ ಡಿ.ಎಸ್. ಪೂವಯ್ಯ ಇವರುಗಳು ಕೂಡ ಸದಸ್ಯತ್ವದಿಂದ ಅಮಾನತುಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.

ಅಮಾನತಿಗೆ ಮುಖ್ಯ ಕಾರಣ

ನೂತನ ಆಡಳಿತ ಮಂಡಳಿ ಅಧಿಕೃತವಾಗಿ ಚುನಾಯಿತಗೊಂಡ ಬಳಿಕ ಈ ಹಿಂದಿನ ಅಧ್ಯಕ್ಷರಾಗಿದ್ದ ಐ.ಕೆ. ಅನಿಲ್ ನೇತೃತ್ವದಲ್ಲಿ ಕಂಡುಬAದಿದ್ದ ಕಟ್ಟಡ ನಿರ್ಮಾಣ ನ್ಯೂನ್ಯತೆಗಳ ಕುರಿತು ಆಂತರಿಕ ತನಿಖೆ ಕೈಗೊಳ್ಳಲು ನಿರ್ಧರಿಸಿ ತನಿಖೆಯನ್ನು ಆರಂಭಿಸಿತ್ತು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಆದರೆ ಗಾಲ್ಫ್ನ ಸರ್ವ ಸದಸ್ಯರ ಪರವಾಗಿ ಹಾಗೂ ಗಾಲ್ಫ್ ಆಡಳಿತವನ್ನು ಸುವ್ಯವಸ್ಥಿತಗೊಳಿಸುವ ಸಲುವಾಗಿ ನಡೆಸಲು ಉದ್ದೇಶಿಸಿದ್ದ ಆಂತರಿಕ ತನಿಖೆಗೆ ಸಹಕಾರ ನೀಡುವ ಬದಲು ಈ ಹಿಂದಿನ ಆಡಳಿತ ಮಂಡಳಿಯ ನಾಲ್ವರು ಪ್ರಮುಖ ಪದಾಧಿಕಾರಿಗಳು ಜಿಲ್ಲಾ ರಿಜಿಸ್ಟಾçರ್ ಕಚೇರಿಯಲ್ಲಿ ಬೇರೊಂದು ಮನವಿಯನ್ನು ಮಾಡಿದ್ದರು. ಅದರನ್ವಯ ಈಗಿನ ಆಡಳಿತ ಮಂಡಳಿ ನಡೆಸುತ್ತಿರುವ ತನಿಖೆಗೆ ರಿಜಿಸ್ಟಾçರ್ ಅವರು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಕಾನೂನಿನ ಅನ್ವಯ ಆಂತರಿಕ ತನಿಖೆಗೆ ಭಂಗಗೊಳಿಸುವAತಹ ಈ ಸದಸ್ಯರುಗಳ ಕೃತ್ಯವು ಎಂಡಿಜಿಸಿ ರೂಲ್ ೧೯ರ ಅನ್ವಯ ದುರ್ವರ್ತನೆ ಎಂದು ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಗೂ ಇದೇ ಆಧಾರದಲ್ಲಿ ಒಟ್ಟು ೯ ಮಂದಿ ಸದಸ್ಯರುಗಳನ್ನು ಸದಸ್ಯತ್ವದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅಲ್ಲದೆ ಈ ಹಿಂದಿನ ಆಡಳಿತ ಮಂಡಳಿಯಲ್ಲಿನ ನ್ಯೂನ್ಯತೆಗಳ ಸಮರ್ಪಕ ಆಂತರಿಕ ತನಿಖೆಯನ್ನು ಮುಂದುವರಿಸಲಿರುವುದಾಗಿ ಪ್ರಸಕ್ತ ಆಡಳಿತ ಮಂಡಳಿ ಪ್ರಮುಖರು ‘ಶಕಿ’್ತಗೆ ಮಾಹಿತಿಯಿತ್ತಿದ್ದಾರೆ.ಮಡಿಕೇರಿ, ನ. ೨೬: ಪ್ರಸಕ್ತ ಮಡಿಕೇರಿ ಡೌನ್ಸ್ ಗಾಲ್ಫ್ ಕ್ಲಬ್ ಆಡಳಿತ ಮಂಡಳಿಯು ತಾ. ೨೩ ರಂದು ಸಭೆ ಸೇರಿ ೯ ಮಂದಿ ಸದಸ್ಯರ ಸದಸ್ಯತ್ವವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ.

ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಕಟ್ಟಡ ನಿರ್ಮಾಣ ನ್ಯೂನ್ಯತೆಗಳ ಬಗ್ಗೆ ಈಗಿನ ಆಡಳಿತ ಮಂಡಳಿಯು ಆಂತರಿಕ ತನಿಖೆ ನಡೆಸುತ್ತಿದೆ. ಈ ಸಂಬAಧ ಮುಖ್ಯವಾಗಿ ಈ ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಅಧ್ಯಕ್ಷರಾಗಿದ್ದ ಐ.ಕೆ. ಅನಿಲ್ ಸೇರಿದಂತೆ ಪದಾಧಿಕಾರಿಗಳಾಗಿದ್ದ ಕೆ.ಎಂ. ಅಪ್ಪಣ್ಣ, ಆರ್. ಸುಂದರA ಹಾಗೂ ಎನ್.ಸಿ. ಸುನೀಲ್ ದೇವಯ್ಯ ಇವರುಗಳನ್ನು ತಾತ್ಕಾಲಿಕವಾಗಿ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಈ ಹಿಂದಿನ ಆಡಳಿತ ಮಂಡಳಿಯ ನ್ಯೂನ್ಯತೆಗಳ ಆಂತರಿಕ ತನಿಖೆ ಮುಕ್ತಾಯಗೊಳ್ಳುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಅದುವರೆಗೆ ಈ ನಾಲ್ವರು ಸದಸ್ಯರು ಗಾಲ್ಫ್ ಕ್ಲಬ್‌ನ ಸದಸ್ಯತ್ವದ ಹಕ್ಕನ್ನು, ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಮಾತ್ರವಲ್ಲ ಕ್ಲಬ್ ಆವರಣದೊಳಗೆ ಪ್ರವೇಶವನ್ನು ಕೂಡ ಮಾಡಲು ನಿಷೇಧ ಹೇರಲಾಗಿದೆ, ಆದರೆ ಆಂತರಿಕ ತನಿಖೆ ಸಂದರ್ಭ ಅಗತ್ಯಬಿದ್ದಾಗ ಅವರನ್ನು ಕರೆಸಿದಾಗ ಮಾತ್ರ ಅವರುಗಳು ಕ್ಲಬ್ ಆವರಣದೊಳಗೆ ಪ್ರವೇಶಿಸಬಹುದಾಗಿದೆ.

ಮತ್ತಿತರ ಐವರ ಅಮಾನತು

ಇದೇ ಅಲ್ಲದೆ ತನಿಖೆ ಪೂರ್ಣಗೊಳ್ಳುವವರೆಗೆ ಇತರ ಸದಸ್ಯರುಗಳಾದ ಕೆ.ಸಿ. ತಿಮ್ಮಯ್ಯ, ಎಸ್. ದಿಲೀಪ್ ಅಪ್ಪಚ್ಚು, ಬಿ.ಎ. ಅಚ್ಚಯ್ಯ, ಜಿ.ಬಿ. ಅರವಿಂದ್ ಹಾಗೂ ಡಿ.ಎಸ್. ಪೂವಯ್ಯ ಇವರುಗಳು ಕೂಡ ಸದಸ್ಯತ್ವದಿಂದ ಅಮಾನತುಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.

ಅಮಾನತಿಗೆ ಮುಖ್ಯ ಕಾರಣ

ನೂತನ ಆಡಳಿತ ಮಂಡಳಿ ಅಧಿಕೃತವಾಗಿ ಚುನಾಯಿತಗೊಂಡ ಬಳಿಕ ಈ ಹಿಂದಿನ ಅಧ್ಯಕ್ಷರಾಗಿದ್ದ ಐ.ಕೆ. ಅನಿಲ್ ನೇತೃತ್ವದಲ್ಲಿ ಕಂಡುಬAದಿದ್ದ ಕಟ್ಟಡ ನಿರ್ಮಾಣ ನ್ಯೂನ್ಯತೆಗಳ ಕುರಿತು ಆಂತರಿಕ ತನಿಖೆ ಕೈಗೊಳ್ಳಲು ನಿರ್ಧರಿಸಿ ತನಿಖೆಯನ್ನು ಆರಂಭಿಸಿತ್ತು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಆದರೆ ಗಾಲ್ಫ್ನ ಸರ್ವ ಸದಸ್ಯರ ಪರವಾಗಿ ಹಾಗೂ ಗಾಲ್ಫ್ ಆಡಳಿತವನ್ನು ಸುವ್ಯವಸ್ಥಿತಗೊಳಿಸುವ ಸಲುವಾಗಿ ನಡೆಸಲು ಉದ್ದೇಶಿಸಿದ್ದ ಆಂತರಿಕ ತನಿಖೆಗೆ ಸಹಕಾರ ನೀಡುವ ಬದಲು ಈ ಹಿಂದಿನ ಆಡಳಿತ ಮಂಡಳಿಯ ನಾಲ್ವರು ಪ್ರಮುಖ ಪದಾಧಿಕಾರಿಗಳು ಜಿಲ್ಲಾ ರಿಜಿಸ್ಟಾçರ್ ಕಚೇರಿಯಲ್ಲಿ ಬೇರೊಂದು ಮನವಿಯನ್ನು ಮಾಡಿದ್ದರು. ಅದರನ್ವಯ ಈಗಿನ ಆಡಳಿತ ಮಂಡಳಿ ನಡೆಸುತ್ತಿರುವ ತನಿಖೆಗೆ ರಿಜಿಸ್ಟಾçರ್ ಅವರು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಕಾನೂನಿನ ಅನ್ವಯ ಆಂತರಿಕ ತನಿಖೆಗೆ ಭಂಗಗೊಳಿಸುವAತಹ ಈ ಸದಸ್ಯರುಗಳ ಕೃತ್ಯವು ಎಂಡಿಜಿಸಿ ರೂಲ್ ೧೯ರ ಅನ್ವಯ ದುರ್ವರ್ತನೆ ಎಂದು ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಗೂ ಇದೇ ಆಧಾರದಲ್ಲಿ ಒಟ್ಟು ೯ ಮಂದಿ ಸದಸ್ಯರುಗಳನ್ನು ಸದಸ್ಯತ್ವದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅಲ್ಲದೆ ಈ ಹಿಂದಿನ ಆಡಳಿತ ಮಂಡಳಿಯಲ್ಲಿನ ನ್ಯೂನ್ಯತೆಗಳ ಸಮರ್ಪಕ ಆಂತರಿಕ ತನಿಖೆಯನ್ನು ಮುಂದುವರಿಸಲಿರುವುದಾಗಿ ಪ್ರಸಕ್ತ ಆಡಳಿತ ಮಂಡಳಿ ಪ್ರಮುಖರು ‘ಶಕಿ’್ತಗೆ ಮಾಹಿತಿಯಿತ್ತಿದ್ದಾರೆ.