ವೀರಾಜಪೇಟೆ, ನ. ೨೪: ಎಸ್‌ಡಿಎಫ್‌ಐ (ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಫೌಂಡೇಶನ್ ಆಫ್ ಇಂಡಿಯಾ) ಆಯೋಜಿಸಿದ್ದ ರಾಷ್ಟಿçÃಯ ಮಟ್ಟದ ಅಂಡರ್-೧೯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವೀರಾಜಪೇಟೆಯ ಕಲ್ಲುಬಾಣೆ ನಿವಾಸಿ ಕೆ.ಎಸ್. ಗೋಕುಲ್ ಪ್ರಸಾದ್ ಅವರು ಚಿನ್ನದ ಪದಕ ಗೆದ್ದು ರಾಷ್ಟಿçÃಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪಂದ್ಯಾವಳಿಯ ೭೫ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಗೋಕುಲ್ ಪ್ರಸಾದ್, ಪ್ರಥಮ ಸ್ಥಾನದೊಂದಿಗೆ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಈತ ಕೆ.ಎ. ಸುರೇಶ್ ಹಾಗೂ ಸಾವಿತ್ರಿ ದಂಪತಿ ಪುತ್ರ.