ಮಡಿಕೇರಿ, ನ. ೨೪: ಪ್ರತಿ ವರ್ಷದಂತೆ ಈ ವರ್ಷವೂ ಮಡಿಕೇರಿಯ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಜಿಲ್ಲಾಮಟ್ಟದ ವಿಪ್ರ ಕ್ರೀಡೋ ತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಮಟ್ಟದ ಆಟಗಳ ವಿವರ : ಶೆಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್. ಈ ಆಟಗಳು ತಾ. ೨೯ ರಂದು ಮಡಿಕೇರಿಯ ಮ್ಯಾನ್ಸ್ ಕಂಪೌAಡ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ ಗಂಟೆಯಿAದ ನಡೆಯಲಿದೆ.

ಈ ಸ್ಪರ್ಧೆಗಳು ಜೂನಿಯರ್, ಸೀನಿಯರ್, ಮಹಿಳೆಯರು, ಪುರುಷರು ಇತ್ಯಾದಿ ಹಲವು ವಿಭಾಗಗಳಲ್ಲಿ ನಡೆಯಲಿದೆ. ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಅದೇ ದಿನ ಆಟಗಳು ಆರಂಭವಾಗುವ ಮೊದಲು ಅಲ್ಲಿಯೇ ಕೊಡಬೇಕು.

ಈ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿಪ್ರರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ನಿಧಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೋರಿದ್ದಾರೆ.