ಚೆಯ್ಯಂಡಾಣೆ, ನ. ೨೪: ಸುನ್ನಿ ಯುವಜನ ಸಂಘ (ಎಸ್‌ವೈಎಸ್) ವೀರಾಜಪೇಟೆ ಶಾಖೆ ಸಮಿತಿಯ ವತಿಯಿಂದ ಅಸ್ಸುನ್ನ ತಾತ್ವಿಕ ಸಮ್ಮೇಳನ ಹಾಗೂ ಸಯ್ಯಿದ್ ಅಲಿ ಬಾಫಖೀ ತಂಙಳ್ ಸಂಸ್ಮರಣೆ ಕಾರ್ಯಕ್ರಮ ತಾ. ೨೭ ರಂದು ಸಂಜೆ ೬.೩೦ಕ್ಕೆ ವೀರಾಜಪೇಟೆ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಸೀನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ವಾಗ್ಮಿ ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ಭಾಗವಹಿಸಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಸಯ್ಯಿದ್ ಮಹ್ದಿ ಅಹ್ಮದ್ ಅಲ್ ಬುಖಾರಿ ಅವರು ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ಎಸ್‌ವೈಎಸ್ ವೀರಾಜಪೇಟೆ ಶಾಖೆ ಅಧ್ಯಕ್ಷ ಹಂಝ ಮದನಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉದ್ಘಾಟಿಸಲಿದ್ದಾರೆ ಎಂದು ಎಸ್‌ವೈಎಸ್ ವೀರಾಜಪೇಟೆ ಶಾಖೆ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಶಿಹಾಬ್ ತಂಙಳ್ ತಿಳಿಸಿದ್ದಾರೆ.