ಶನಿವಾರಸಂತೆ, ನ. ೨೨: ‘ಸಹಕಾರ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಶನಿವಾರಸಂತೆ ಸಮೀಪದ ಸಂಪಿಗೆದಾಳು ಗ್ರಾಮದ ಹಿರಿಯ ಸಹಕಾರಿ ಎಸ್.ಕೆ. ವೀರಪ್ಪ ಅವರನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶ ಸದಾಶಿವ ಸ್ವಾಮೀಜಿ ಅವರು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಸದಾಶಿವ ಸ್ವಾಮೀಜಿ, ವೀರಪ್ಪ ಅವರು ಹಂಡ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಆರಂಭಿಸಿದ್ದು, ಇಂದಿಗೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಅವರ ದೀರ್ಘಕಾಲದ ಸಹಕಾರ ಸೇವೆಯನ್ನು ಗುರುತಿಸಿ ಕೊಡಗು ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಅವರ ನಿರಂತರ ಸೇವೆಗೆ ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಪ್ರಶಸ್ತಿ ಹಾಗೂ ಗೌರವಗಳು ಲಭಿಸಲಿ ಎಂದು ಹಾರೈಸಿದರು.

ಈ ಸಂದರ್ಭ ಮುಖಂಡರಾದ ಡಿ.ಬಿ. ಧರ್ಮಪ್ಪ, ವೀರೇಂದ್ರ, ಸೋಮಶೇಖರ ಶಾಸ್ತ್ರಿ, ಮಂಜುನಾಥ ಶಾಸ್ತ್ರಿ ಹಾಗೂ ವೀರಪ್ಪ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.