ವೀರಾಜಪೇಟೆ, ನ. ೧೯: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಅಂತರ ಕೊಡವ ಸಮಾಜಗಳ ಹಾಕಿ ಪಂದ್ಯಾಟವನ್ನು ಮಾಜಿ ಒಲಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ ಉದ್ಘಾಟಿಸಿದರು.
ನಂತರ ಮಾತನಾಡಿ, ಕೊಡವ ಸಮಾಜಗಳ ಒಕ್ಕೂಟವು ಹಾಕಿ ಹಾಗೂ ಇನ್ನಿತರ ಕ್ರೀಡಾಕೂಟಗಳನ್ನು ಕಳೆದ ೧೩ ವರ್ಷಗಳಿಂದ ಉತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಪಂದ್ಯಾಟಗಳು ಮತ್ತು ಸಾಂಸ್ಕೃತಿಕ ಪೈಪೋಟಿಗಳನ್ನು ನಡೆಸುವುದು ಸುಲಭದ ವಿಚಾರವಲ್ಲ. ಎಲ್ಲಾ ಕೊಡವ ಸಮಾಜಗಳು ಮತ್ತು ಕೊಡವ ಸಂಘ ಸಂಸ್ಥೆಗಳು ಕೈ ಜೋಡಿಸಿದರೆ ಮಾತ್ರ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಸಾಧ್ಯ ಎಂದು ಹೇಳಿದರು.
ಮತ್ತೊರ್ವ ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಮಾತನಾಡಿ, ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಮೂಲಕ ಅಂತರ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾಟಗಳನ್ನು ನಡೆಸುವುದು ಉತ್ತಮ. ಎಲ್ಲಾ ಕೊಡವ ಸಮಾಜಗಳ ಬಾಂಧವ್ಯ ವೃದ್ಧಿ ಆಗುವುದರ ಜೊತೆಗೆ ಗ್ರಾಮೀಣ ಭಾಗದ ಆಟಗಾರರಿಗೆ ಅವಕಾಶ ಲಭಿಸಿದಂತಾಗುತ್ತದೆ ಎಂದು ಬೆಂಗಳೂರು ಕೊಡವ ಸಮಾಜ ೧೦೦ ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಅಂದಿನ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಯಪ್ಪ ಅವರ ಬಳಿ ಚರ್ಚಿಸಲಾಗಿತ್ತು. ಅವರ ಪ್ರಯತ್ನದಿಂದ ಪ್ರಾರಂಭವಾದ ಹಾಕಿ ಪಂದ್ಯಾಟ ೧೩ ವಸಂತಗಳನ್ನು ಪೂರೈಸುತ್ತಿರುವುದು ಶ್ಲಾಘನೀಯ. ಇಂತಹ ಪಂದ್ಯಾಟಗಳು ನಿರಂತರವಾಗಿ ಎಲ್ಲಾ ಕಡೆಗಳಲ್ಲಿ ನಡೆಯಬೇಕು. ಹಾಕಿಯ ಬೇಸಿಗೆ ಶಿಬಿರನ್ನು ಕೊಡವ ಸಮಾಜಗಳು ನಡೆಸಿದರೆ ಉದಯೋನ್ಮುಖ ಆಟಗಾರರನ್ನು ರಾಷ್ಟಿçÃಯಮಟ್ಟಕ್ಕೆ ಕಳುಹಿಸಬಹುದಾಗಿದೆ ಎಂದು ಹೇಳಿದರು.
ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ ,ಪಂದ್ಯಾಟಗಳು ಅಂತರ ಕೊಡವ ಸಮಾಜಗಳ ನಡುವೆ ನಡೆಯಲಿದೆ. ಇದು ಕೊಡವ ಜನಾಂಗಕ್ಕೆ ಮಾತ್ರ ಸೀಮೀತವಾಗಿದ್ದು ಪಂದ್ಯಾಟ ಹಾಗೂ ಸಾಂಸ್ಕೃತಿಕ ಪೈಪೋಟಿಗಳನ್ನು ಜಾತಿ, ಮತ, ಬೇದ, ಧರ್ಮ ಇಲ್ಲದೆ ಮುಕ್ತವಾಗಿ ವೀಕ್ಷಿಸಬಹುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಹಗ್ಗಜಗ್ಗಾಟ ಸಮಿತಿ ಸಂಚಾಲಕ ಬೊಳಿಯಂಗಡ ದಾದು ಪೂವಯ್ಯ, ಅಂತರಾಷ್ಟಿçÃಯ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಸೇರಿದಂತೆ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.
ಹಾಕಿ ಪಂದ್ಯಾಟ
ಪುರುಷರ ಹಾಕಿ ಪಂದ್ಯಾಟದಲ್ಲಿ ಟಿ ಶೆಟ್ಟಿಗೇರಿ ಕೊಡವ ಸಮಾಜ ಬಾರದ ಕಾರಣ ಆಯೋಜಕರು ಕುಟ್ಟ ಕೊಡವ ಸಮಾಜವನ್ನು ವಿಜಯಿ ಎಂದು ಘೋಷಿಸಿದರು.
ಮಹಿಳೆಯರ ಫೈಸೈರ್ಸ್ ಪಂದ್ಯಾಟದಲ್ಲಿ ಮೂರ್ನಾಡು ಕೊಡವ ಸಮಾಜವು ೨-೦ ಗೋಲುಗಳಿಂದ ಪೊನ್ನಂಪೇಟೆ ಕೊಡವ ಸಮಾಜವನ್ನು ಪರಾಭವಗೊಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮಡಿಕೇರಿ ಕೊಡವ ಸಮಾಜವು ೨-೦ ಗೋಲುಗಳಿಂದ ಸಡನ್ ಡೆತ್ನಲ್ಲಿ ಮಕ್ಕಂದೂರು ಕೊಡವ ಸಮಾಜವನ್ನು ಮಣಿಸಿತು. ನಿಗದಿತ ಅವಧಿಗೆ ಯಾವುದೇ ಗೋಲು ಗಳಿಸದ ಕಾರಣ ಟ್ರೆöÊಬ್ರೇಕರ್ ನಿಯಮ ಅಳವಡಿಸಲಾಯಿತು. ಅದರಲ್ಲೂ ಯಾವುದೇ ಗೋಲು ದಾಖಲಾಗದ ಕಾರಣ ಸಡನ್ಡೆತ್ ನಿಯಮದಲ್ಲಿ ಮಡಿಕೇರಿ ತಂಡ ಜಯಗಳಿಸಿತು.
ಸೋಮವಾರಪೇಟೆ ಕೊಡವ ಸಮಾಜ ತಂಡ ಬಾರದ ಕಾರಣ ಆರಾಯಿರ ನಾಡು ತಂಡವನ್ನು ವಿಜಯಿ ಎಂದು ಘೋಷಿಸಿದರು. ವೀರಾಜಪೇಟೆ ತಂಡವು ಆರಾಯಿರ ತಂಡವನ್ನು ೬-೦ ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು.
ಮೂರ್ನಾಡು ತಂಡವು ೮-೧ ಗೋಲುಗಳಿಂದ ಮಡಿಕೇರಿ ಕೊಡವ ಸಮಾಜ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾಟ ತಾ. ೨೨ ರಂದು ಭಾನುವಾರ ಸಂಜೆ ೪ ಗಂಟೆಗೆ ನಡೆಯಲಿದೆ. ಪಂದ್ಯಾಟದ ತಾಂತ್ರಿಕ ನಿರ್ದೇಶಕರಾಗಿ ಕನ್ನಂಬಿರ ಚಿಣ್ಣಪ್ಪ ಕಾರ್ಯನಿರ್ವಹಿಸಿದರು.