ಮಡಿಕೇರಿ, ನ. ೧೯: ರಾಷ್ಟಿçÃಯ ಹೆದ್ದಾರಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆಎತ್ತಿರುವ ಅಂಗಡಿ-ಮಳಿಗೆಗಳು ಹಾಗೂ ಜಾಹೀರಾತು ಫಲಕಗಳ ತೆರವಿಗೆ ರಾಷ್ಟಿçÃಯ ಹೆದ್ದಾರಿ ಉಪವಿಭಾಗ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಾಹನಗಳ ಸುಗಮ ಸಂಚಾರಕ್ಕೂ ತೊಡಕಾಗಿರುವ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಲು ಇಲಾಖೆ ಸೂಚನೆ ನೀಡಿದೆ.
ರಾಷ್ಟಿçÃಯ ಹೆದ್ದಾರಿ-೨೭೫ರ ಸಂಪಾಜೆ ಯಿಂದ ಕುಶಾಲನಗರದ ಕಾವೇರಿ ನದಿ ಸೇತುವೆವರೆಗೂ ಇದ್ದ ಅನಧಿಕೃತ ಜಾಹೀರಾತು ಫಲಕಗಳು, ಅಂಗಡಿ ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ತೆರವು ಕಾರ್ಯಾಚರಣೆ ನಡೆದಿದ್ದರೂ ಮತ್ತೆ ಅದೇ ಸ್ಥಳಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಜಾಗ ತೆರವುಗೊಳಿಸಿದರೂ ಮತ್ತೆ ಅನಧಿಕೃತವಾಗಿ ಮಳಿಗೆಗಳು ತಲೆ ಎತ್ತುತ್ತಿರುವುದು ಸವಾಲಾಗಿ ಪರಿಣಮಿಸಿದೆ. ರಾಷ್ಟಿçÃಯ ಹೆದ್ದಾರಿಯ ಪರಿದಿಯಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಂದ ಪಾದಚಾರಿಗಳು ಹಾಗೂ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ, ರಸ್ತೆ ಬದಿಯಲ್ಲಿನ ಅನಧಿಕೃತ ಮಳಿಗೆಗಳು ಮತ್ತು ಜಾಹೀರಾತು ಫಲಕಗಳು ಅಪಘಾತಗಳಿಗೆ ಆಹ್ವಾನ ನೀಡುವ ಸಾಧ್ಯತೆಯೂ ಇದೆ ಎಂಬ ಅಂಶದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ವಯಂ ತೆರವಿಗೆ ಅವಕಾಶ - ಬಳಿಕ ಕಾರ್ಯಾಚರಣೆ
ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿ-ಮಳಿಗೆಗಳು ಹಾಗೂ ಅನಧಿಕೃತ ಜಾಹೀರಾತು ಫಲಕಗಳನ್ನು ನ.೧೫ರೊಳಗಾಗಿ ಸ್ವಯಂ ತೆರವುಗೊಳಿಸುವಂತೆ ಇಲಾಖೆ ಈ ಹಿಂದೆಯೇ ಸೂಚಿಸಿತ್ತು. ಆದರೆ, ನಿಗದಿತ ಗಡುವು ಮುಕ್ತಾಯಗೊಂಡಿದ್ದು, ಪ್ರಕಟಣೆಯಲ್ಲಿ ನ.೧೬ರಿಂದಲೇ ಇಲಾಖೆಯ ವತಿಯಿಂದ ತೆರವು ಕಾರ್ಯಾಚರಣೆ ಆರಂಭಿಸುವುದಾಗಿ ಪ್ರಕಟಿಸಿತ್ತು. ಆದರೆ, ಇದುವರೆಗೂ ಯಾವುದೇ ಕಾರ್ಯಾಚರಣೆಯೂ ಆರಂಭವಾಗಿಲ್ಲ.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ ಅದಕ್ಕೆ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ರಾಷ್ಟಿçÃಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅವಕಾಶ ವಿಸ್ತರಣೆ
ಫಲಕ ಹಾಗೂ ಅಂಗಡಿಗಳ ತೆರವಿಗೆ ಅವಕಾಶವನ್ನು ವಿಸ್ತರಣೆ ಮಾಡಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಜೀವ್ ಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಈಗಾಗಲೇ ಪ್ರಕಟಣೆ ನೀಡಿ ಸೂಚನೆ ನೀಡಲಾಗಿದ್ದು, ಮತ್ತೊಮ್ಮೆ ಪ್ರಕಟಣೆ ನೀಡಿ ಒಂದು ವಾರ ಅಥವಾ ೧೫ ದಿನಗಳ ಅವಕಾಶ ನೀಡಲಾಗುವುದು. ಈ ಸಂದರ್ಭ ತೆರವಿಗೆ ಸಂಬAಧ ಏಜೆನ್ಸಿಯನ್ನು ನೇಮಿಸಿಕೊಳ್ಳಲಾಗುವುದು. ಬಳಿಕವೂ ತೆರವು ಮಾಡದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.