ಪೊನ್ನಂಪೇಟೆ, ನ. ೧೮: ಪಟ್ಟಣದ ಹೃದಯಭಾಗದಲ್ಲಿರುವ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಿಮಲ್ಲಿಕಾರ್ಜುನ ಸ್ವಾಮೀಜಿಗಳ ನೇತೃತ್ವದಲ್ಲಿ ಹೂ ಪ್ರಶ್ನೆ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಧಾರ್ಮಿಕ ಸಂಪ್ರದಾಯದAತೆ ಪ್ರತಿಷ್ಠಾಪನೆಯಾದ ಬಳಿಕ ಪ್ರತಿ ೧೨ ವರ್ಷಗಳಿಗೊಮ್ಮೆ ಕುಂಭಾಭಿಷೇಕ ನೆರವೇರಿಸಬೇಕು. ಈ ಹಿಂದೆ ಕುಂಭಾಭಿಷೇಕ ನಡೆದು ಈಗಾಗಲೇ ೧೨ ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಮುಂದಿನ ಕುಂಭಾಭಿಷೇಕದ ಕುರಿತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೂ ಪ್ರಶ್ನೆ ನಡೆಸಲಾಯಿತು.

ಹೂ ಪ್ರಶ್ನೆಯಲ್ಲಿ ಕಂಡುಬAದAತೆ, ಮುಂಬರುವ ಉತ್ತರಾಯಣ ಪುಣ್ಯ ಕಾಲದಲ್ಲಿ ಕುಂಭಾಭಿಷೇಕ ನೆರವೇರಿಸುವುದು ಸೂಕ್ತ ಎಂದು ತಿಳಿದುಬಂದಿದೆ. ಅದರಂತೆ ಮುಂದಿನ ಮಕರ ಸಂಕ್ರಾAತಿಯ ಶುಭ ಸಂದರ್ಭದಲ್ಲಿ ಕುಂಭಾಭಿಷೇಕ ನೆರವೇರಿ ಸಲು ನಿರ್ಧರಿಸಲಾಗಿದೆ.

ಈ ಸಂದರ್ಭ ಮಾತನಾಡಿದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆಯ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಸ್ಥಾನದ ಸಂಪ್ರದಾಯ ಮತ್ತು ಪಾವಿತ್ರ‍್ಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಕುಂಭಾಭಿಷೇಕಕ್ಕೆ ಸಿದ್ಧತೆ ಕೈಗೊಳ್ಳಬೇಕಿದ್ದು, ಈ ಧಾರ್ಮಿಕ ಕಾರ್ಯ ಯಶಸ್ವಿಯಾಗಿ ನೆರವೇರಲು ದಾನಿಗಳ ನೆರವು ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಬಿ.ಎನ್. ಕಾಂತರಾಜ್, ಉಪಾಧ್ಯಕ್ಷ ವಿ.ಬಿ. ರುದ್ರಪ್ಪ, ಕಾರ್ಯದರ್ಶಿ ಹೆಚ್.ಬಿ. ಸುರೇಶ್, ಖಜಾಂಚಿ ಪಿ.ಟಿ. ಸುರೇಶ್, ಸದಸ್ಯರಾದ ಹೆಚ್.ಎಸ್. ಮಹೇಶ್, ಮಂಜು, ಅರ್ಚಕ ಗಿರೀಶ್ ಹಾಗೂ ಭಕ್ತರು ಹಾಜರಿದ್ದರು.