ಮಡಿಕೇರಿ, ನ. ೧೬: ಟಿ. ಶೆಟ್ಟಿಗೇರಿ ಸಿದ್ದಾರೂಢ ಆಶ್ರಮದಲ್ಲಿ ಸದ್ಗುರು ನಿರ್ಗುಣಾನಂದ ಸ್ವಾಮಿಗಳ ಮತ್ತು ಮಾತೃಶ್ರೀ ಚಿಣ್ಣಮ್ಮನವರ ಪುಣ್ಯಾರಾಧನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಇದರ ಅಂಗವಾಗಿ ಬೆಳಿಗ್ಗೆ ನಿತ್ಯಪೂಜೆ ನಂತರ ರುದ್ರಾಭಿಷೇಕ, ಪಾದಪೂಜೆ, ಅರ್ಚನೆ ಪಲ್ಲಕ್ಕಿ ಉತ್ಸವ, ಗಣಪತಿಹೋಮ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮಗಳನ್ನು ಆಶ್ರಮದ ಉಸ್ತುವಾರಿಗಳಾದ ಸಿದ್ದು ಸ್ವಾಮಿ ಅವರು ನಡೆಸಿಕೊಟ್ಟರು.