ಮಡಿಕೇರಿ, ನ. ೧೬: ಭೂಮಿಯ ಉಗಮವಾದಾಗಿನಿಂದಲೂ ಕೊಡವ ಮಾತೃಭೂಮಿ ಅಸ್ತಿತ್ವದಲ್ಲಿದೆ. ಮಾನವಕುಲದ ಉತ್ಪತ್ತಿಯಾದಾಗಿನಿಂದಲೂ ಈ ಶಾಂತಿಯುತ ಪವಿತ್ರ ಭೂಮಿಯಾದ ಕೊಡವಲ್ಯಾಂಡ್ ಮೊಳಕೆಯೊಡೆದು, ಅರಳಿ, ವಿಕಸನಗೊಂಡು ಸಮೃದ್ಧವಾಗಿದೆ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅಭಿಪ್ರಾಯಪಟ್ಟರು.

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಟಿ. ಶೆಟ್ಟಿಗೇರಿಯಲ್ಲಿ ನಡೆದ ೧೦ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಮಸಂಜಾತ ಅನಿಮಿಸ್ಟಿಕ್ ನಂಬುಗೆಯ ಕೊಡವರನ್ನೂ ಒಳಗೊಂಡAತೆ ಅಪರೂಪದ ಜನಾಂಗೀಯ ಗುಂಪುಗಳಿಗೆ ಸಂಬAಧಿಸಿದAತೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ-ಆಡಳಿತ, ಹಾಗೂ ಕೊಡವರ ಆಂತರಿಕ ಸ್ವಯಂ-ನಿರ್ಣಯದ ಹಕ್ಕುಗಳನ್ನು ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿದೆ ಎಂದರು.

ರಾಜ್ಯ ಪುನರ್ವಿಂಗಡಣಾ ಕಾಯ್ದೆಯಡಿ ಕೊಡವ ಭೂಮಿಯನ್ನು ವಿಲೀನಗೊಳಿಸಿದಾಗಿನಿಂದ, ೧೯೫೬ರಲ್ಲಿ ತಮ್ಮ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ಮಾತೃಭೂಮಿಯಾದ ‘ಪಾರ್ಟ್-ಸಿ’ ಕೂರ್ಗ್ ರಾಜ್ಯವನ್ನು ಕಳೆದುಕೊಂಡ ನಂತರ ಆದಿಮಸಂಜಾತ ಕೊಡವರನ್ನು ವ್ಯವಸ್ಥಿತವಾಗಿ ಅಂಚಿಗೆ ತಳ್ಳಲಾಯಿತು. ೧೯೪೧ರ ಜನಗಣತಿಯ ನಂತರ ಕೊಡವರು ತಮ್ಮ ಜನಾಂಗೀಯ ಅಸ್ಮಿತೆಯನ್ನು ಕಳೆದುಕೊಂಡರು ಮತ್ತು ತಮ್ಮ ಪೂರ್ವಿಕರ, ಪಿತೃಪ್ರಧಾನ ಆದಿಮಸಂಜಾತ ಭೂಮಿಯಿಂದ ಬಲವಂತವಾಗಿ ಬೇರ್ಪಡಿಸಲ್ಪಟ್ಟರು ಎಂದರು. ಕೊಡವರಲ್ಲಿ ಯಾವುದೇ ಜಾತಿ-ಉಪಜಾತಿ ಅಥವಾ ಒಳಪಂಗಡಗಳಿಲ್ಲ. ಕೊಡವರು ಜಾತಿಯೂ ಅಲ್ಲ, ಧರ್ಮವೂ ಅಲ್ಲ ಎಂದು ನಾಚಪ್ಪ ಹೇಳಿದರು.

೫ನೇ ಮತ್ತು ೬ನೇ ಅನುಸೂಚಿಯಡಿ ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ಲಡಾಖ್, ಲೇಹ್, ವಿಶಾಖಪಟ್ಟಣಂ ಮತ್ತು ಗೋದಾವರಿ ಬೆಟ್ಟ ಪ್ರದೇಶ ಏಜೆನ್ಸಿ, ಈಶಾನ್ಯ ಭಾರತದ ೧೦ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು ಎಂದು ಆಗ್ರಹಿಸಿದರು.

ಕೊಡವರನ್ನು ಸಂವಿಧಾನಾತ್ಮಕವಾಗಿ ವಿಶಿಷ್ಟ ಪ್ರಕೃತಿ ಆರಾಧಕ ಜನಾಂಗೀಯ ಸಮುದಾಯವೆಂದು ಗುರುತಿಸಿ, ಸ್ವಯಂ-ಶಾಸನದ ಮಾತೃಭೂಮಿ ಭದ್ರತೆಯೊಂದಿಗೆ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆಯನ್ನು ಒದಗಿಸಿದರೆ ಮಾತ್ರ ಕೊಡವರ ಭೂಮಿ, ನೀರು, ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸಲು ಸಾಧ್ಯ ಎಂದರು.

ಈ ಸಂದರ್ಭ ಮಾಣಿರ ಕವಿತಾ ಬೊಳ್ಳಿಯಪ್ಪ, ಮುಕ್ಕಾಟಿರ ಅಮ್ಮಕ್ಕ, ಚೊಟ್ಟೆಯಂಡಮಡ ಶಾರದಾ, ಚೊಟ್ಟೆಯಂಡಮಡ ಕಮಲ, ಬಲ್ಯಮೀದೇರಿರ ಪ್ರೀತು, ಅಜ್ಜಮಡ ಸಾವಿತ್ರಿ, ಮನ್ನೆರ ಪಾರ್ವತಿ, ಅಪ್ಪಚಂಗಡ ಮೋಟಯ್ಯ, ಕಟ್ಟೆರ ಈಶ್ವರ, ಚೊಟ್ಟೆಯಂಡಮಾಡ ಉದಯ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಜ್ಜಮಾಡ ಮೋಹನ್, ಅಜ್ಜಮಡ ಚಿಮ್ಮ, ಮಾಣಿರ ಬೊಳ್ಳಿಯಪ್ಪ, ಕಿರಿಯಮಡ ಶೆರಿನ್, ಮಾಣಿರ ಮನು, ಮಚ್ಚಮಾಡ ಮುತ್ತಪ್ಪ, ಪೊಕ್ಕಳಂಗಡ ಕಾಶಿ ಪೊನ್ನಪ್ಪ, ತಡಿಯಂಗಡ ಕರುಂಬಯ್ಯ, ಕಟ್ಟೆರ ಸದಾ ಕುಶಾಲಪ್ಪ, ಉಳುವಂಗಡ ಗಣಪತಿ, ಚೊಟ್ಟೆಯಂಡಮಡ ಪೂಣಚ್ಚ, ಬಲ್ಯಂಡಮಾಡ ಉತ್ತಯ್ಯ, ಕೊದೆಂಗಡ ಬೋಪಯ್ಯ, ಮಾಯಣಮಡ ಗಣಪತಿ, ಕಾಳಿಮಡ ಕಿರಣ್, ಚೊಟ್ಟೆಯಂಡಮಡ ಅರ್ಜುನ್ ಸೋಮಣ್ಣ, ಚೊಟ್ಟೆಯಂಡಮಾಡ ಸತೀಶ್ ಮೊಣ್ಣಪ್ಪ, ಮಾಣಿರ ಪ್ರವೀಣ್, ಚೊಟ್ಟೆಯಂಡಮಾಡ ವಿನೋದ್, ಚಟ್ಟಂಡ ಬೊಳ್ಳಿಯಪ್ಪ, ಚಟ್ಟಂಗಡ ಸಜನ್ ಸೋಮಣ್ಣ, ಮಚ್ಚಮಾಡ ಸುಧಾ ಮೊಣ್ಣಪ್ಪ, ಮಚ್ಚಮಡ ಕಾಶಿ ಸುಬ್ಬಯ್ಯ, ಕಟ್ಟೆರ ಮುತ್ತು, ಮಾಣಿರ ಮುತ್ತು, ಚೊಟ್ಟೆಯಂಡಮಾಡ ಬೋಪಯ್ಯ, ಪೆಮ್ಮಣಮಾಡ ಮುರಳಿ ತಿಮ್ಮಯ್ಯ, ಚೊಟ್ಟೆಯಂಡಮಾಡ ಧನಂಜಯ, ತಡಿಯಂಗಡ ಅಚ್ಚಯ್ಯ, ತಡಿಯಂಗಡ ದಿನೇಶ್, ಚಟ್ಟಂಗಡ ದಿನು, ಕಟ್ಟೆರ ಕವನ್, ಮುಕ್ಕಾಟಿರ ಕರುಂಬಯ್ಯ, ಪೆಮ್ಮಣಮಡ ಹ್ಯಾರಿ, ಕೋಟ್ರಮಾಡ ನಿತಿನ್ ತಿಮ್ಮಯ್ಯ, ಚಟ್ಟಂಗಡ ಕರಣ್, ತೀತಿರ ಸತೀಶ್, ಅಜ್ಜಮಡ ಪ್ರಸಾದ್, ಮಾಣಿರ ದೀಪಕ್, ಚೊಟ್ಟೆಯಂಡಮಡ ವಿನು ಮುತ್ತಪ್ಪ, ಐಯ್ಯ ಮಡ ಮುತ್ತಣ್ಣ, ಮೀದೇರಿರ ಮುತ್ತಣ್ಣ, ಬೊಟ್ಟಂಗಡ ಲೋಕೇಶ್, ಚಟ್ಟಂಗಡ ಪ್ರಕಾಶ್, ಬೊಳ್ಳೆರ ರೋಷನ್, ಚೊಟ್ಟೆಯಂಡಮಾಡ ಪ್ರವೀಣ್ ಪೊನ್ನಪ್ಪ, ಚಟ್ಟಂಡ ಪ್ರತು, ಚೊಟ್ಟೆಯಂಡಮಾಡ ರಮೇಶ್, ಮಚ್ಚಮಡ ಜಗತ್, ಕೈಬುಲಿರ ಸುರೇಶ್, ದೇಕಮಡ ಮಧುಕುಮಾರ್, ನೂರೇರ ಶರತ್ ಕುಟ್ಟಪ್ಪ, ಜೀವನ್ ಮುರುವಂಡ, ಕೋಟ್ರಮಾಡ ಸುಮಂತ್, ಮಾಣಿರ ದೇವಯ್ಯ, ದೇಯಂಡ ಪೊನ್ನಪ್ಪ, ಚೊಟ್ಟೆಯಂಡಮಾಡ ದೀಪಕ್, ಪೊಕ್ಕಳಂಗಡ ವಾಸು, ಕುಂಞAಗಡ ಕೇಶು ಬೋಪಯ್ಯ, ಅಣ್ಣಳಮಡ ಭೀಮಯ್ಯ, ಕಾಳಿಮಡ ಕಾಳಪ್ಪ, ಬಾದುಮಂಡ ಚಂಗಪ್ಪ, ಪಾಲೇಕಂಡ ಪ್ರಧಾನ್ ಪೂಣಚ್ಚ , ಐತಿಚಂಡ ಪೂವಣ್ಣ , ಕಾಯಮಡ ಪೆಮ್ಮಯ್ಯ, ಮನ್ನೆರ ಮುತ್ತಣ್ಣ.

ಅಪ್ಪಚಂಗಡ ಮೋಟಯ್ಯ ಸ್ವಾಗತಿಸಿದರು. ಬಾಚರಣಿಯಂಡ ಚಿಪ್ಪಣ್ಣ ವಂದಿಸಿದರು. ೧೧ನೇ ಮಾನವ ಸರಪಳಿ ಕಾರ್ಯಕ್ರಮವು ಹುದಿಕೇರಿಯಲ್ಲಿ ತಾ.೨೩ ರಂದು ಜರುಗಲಿದೆ.