ಮಡಿಕೇರಿ, ನ. ೧೬: ಅಕ್ಟೋಬರ್ನಲ್ಲಿ ಪಂಜಾಬ್ನಲ್ಲಿ ನಡೆದ ರಾಷ್ಟçಮಟ್ಟದ ಸಿಐಎಸ್ಸಿಇ (ಅISಅಇ) ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಸಾಂಚ್ವಿ ಎಸ್ ಹಾನಗಲ್ ಚಿನ್ನದ ಪದಕವನ್ನು ಹಾಗೂ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ೨೦೨೬-೨೭ರ ಸಾಲಿನ ೭೦ನೇ ರಾಷ್ಟçಮಟ್ಟದ ಎಸ್ಜಿಎಫ್ಐ (SಉಈI) ವಿಭಾಗದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಸಾಂಚ್ವಿ ಎಸ್ ಹಾನಗಲ್ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ಎಚ್.ಎಂ. ಸತೀಶ್ ಮತ್ತು ಶ್ರೀವಿದ್ಯಾ ಅವರ ಪುತ್ರಿಯಾಗಿದ್ದು ಬೆಂಗಳೂರಿನ ವಿದ್ಯಾರಣ್ಯಪುರಂನ ಎಂ.ಇ.ಎಸ್ ಕಿಶೋರ್ ಕೇಂದ್ರ ಪಬ್ಲಿಕ್ ಸ್ಕೂಲ್ನಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.