ಮನೆಗೆ ನುಗ್ಗಿದ ಕಳ್ಳರು ಬೇರೆ ಯಾವದೇ ವಸ್ತುಗಳನ್ನು ಮುಟ್ಟಿ ಕೂಡ ನೋಡಿಲ್ಲ. ನೇರವಾಗಿ ಚಿನ್ನಾಭರಣಗಳಿರುವ ಕೋಣೆಗೆ ನುಗ್ಗಿ ಅಲ್ಲಿದ್ದ ಆಭರಣ ಮತ್ತು ಹಣವನ್ನು ಮಾತ್ರ ಕಳವು ಮಾಡಿದ್ದಾರೆ. ಹಾಗಾಗಿ ಇದು ವ್ಯವಸ್ಥಿತವಾಗಿ, ಪೂರ್ವಯೋಜಿತವಾಗಿ ಎಸಗಿರುವ ಕಳ್ಳತನ ಪ್ರಕರಣವಾಗಿದೆ ಎಂದು ಪೊಲೀಸರಿಗೂ ಸಂಶಯ ಮೂಡಿದೆ.
ಅಷ್ಟಕ್ಕೂ ಮನೆಗೆ ನುಗ್ಗಿದ ಕಳ್ಳರು ಬಾಕ್ಸ್ಗಳಲ್ಲಿದ್ದ ಆಭರಣಗಳನ್ನು ಕದ್ದು, ಬಾಕ್ಸ್ಗಳನ್ನು ಅಲ್ಲೇ ಬಿಸುಟಿದ್ದಾರೆ. ವಿಚಿತ್ರವೆಂದರೆ ಆಭರಣ ಖರೀದಿ ಮಾಡಿದ ಬಿಲ್ಗಳನ್ನು ಕೂಡ ಕದ್ದೊಯ್ದಿದ್ದಾರೆ. ಇದರ ಜೊತೆಗೆ ಮಕ್ಕಳ ಮದುವೆ ಕೊಡುವ ಸಂದರ್ಭದಲ್ಲಿ ಬಲುವಳಿಯಾಗಿ ನೀಡಲಾಗುವ ಆಭರಣಗಳ ಸಹಿತ ವಸ್ತುಗಳ ಪಟ್ಟಿಯನ್ನು ಕೂಡ ಕದ್ದೊಯ್ದಿದ್ದಾರೆ..!