ಮಡಿಕೇರಿ, ನ. ೧೩: ಮಾಜಿ ಬ್ಯಾಡ್ಮಿಂಟನ್ ಕ್ರೀಡಾಪಟು ಮೂಲತಃ ಕೊಡಗಿನವರಾದ ಮಾಳೆಯಂಡ ಅರುಣ್ ಪೂವಯ್ಯ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ ಮಾಡಲಾಯಿತು.
ಉತ್ತರಹಳ್ಳಿಯ ಮೀನಾಕ್ಷಿ ರಂಗಮAಚ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯೋರ್ವಳ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಾಜಿ ಅಂತರರಾಷ್ಟಿçÃಯ ಬ್ಯಾಡ್ಮಿಂಟನ್ ಪಟು ಅರುಣ್ ಪೂವಯ್ಯ ಅವರ ಸಾಧನೆ ಹಾಗೂ ಯಶಸ್ಸಿನ ಕ್ರೀಡಾ ಬದುಕನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ನಾಟ್ಯ ಗುರು ವಿದೂಷಿ ಭಾಗ್ಯ ಮಂಜುನಾಥ್, ವಕೀಲೆ ಹಾಗೂ ಭರತನಾಟ್ಯ ಕಲಾವಿದೆ ಬಿಂದು ಕಾರ್ತಿಕೇಯನ್ ಹಾಗೂ ಇತರ ಪ್ರಮುಖರು ಹಾಜರಿದ್ದರು.