ಮಡಿಕೇರಿ, ನ. ೧೩: ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಇಂದಿನಿAದ (ತಾ.೧೪ ರಿಂದ) ೭ ದಿನಗಳ ಕಾಲ ೭೩ನೇ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಪಿ.ಯು ರಾಬಿನ್ ದೇವಯ್ಯ ಅವರು ಮಾಹಿತಿ ನೀಡಿದರು.
ಇಂದು ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಯೂನಿಯನ್ ಎಂದು ಪ್ರಶಸ್ತಿಯನ್ನು ಪಡೆದುಕೊಂಡು ರಾಜ್ಯದ ಎಲ್ಲಾ ಯೂನಿಯನ್ಗೆ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಸಹಕಾರ ಶಿಕ್ಷಣ, ಮತ್ತು ತರಬೇತಿ ನೀಡುವ ಅಂತೆಯೇ ಸಹಕಾರ ತತ್ವವನ್ನು ಪ್ರಚಾರ ಪಡಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ತಾ.೧೪ ರಿಂದ ಆರಂಭವಾಗಿ ೭ ದಿನಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಹಬ್ಬದಂತೆ ಸಹಕಾರ ಸಪ್ತಾಹವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಸಹಕಾರ ಕ್ಷೇತ್ರಕ್ಕೆ ಸಂಬAಧಿಸಿದ ನಿರ್ಧಿಷ್ಟ ವಿಷಯವೊಂದನ್ನು ಗಮನದಲ್ಲಿರಿಸಿಕೊಂಡು ಅದರ ಮೇಲೆ ಹಿಡಿತ ಸಾಧಿಸಲು ಯಶಸ್ಸುಗಳಿಸಲು ತಾ.೧೪ ರಿಂದ ೨೦ ರವರೆಗೆ ೭ ದಿನಗಳ ಅವಧಿಯಲ್ಲಿ ಸಪ್ತಾಹ ನಡೆಯಲಿದೆ ಎಂದರು.
ತಾ.೧೪ ರಂದು ಕಾರುಗುಂದ ಪ್ಯಾಕ್ಸ್, ತಾ. ೧೫ ರಂದು ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿ., ಮಡಿಕೇರಿ, ತಾ.೧೬ ರಂದು ಹುದಿಕೇರಿ ಪ್ಯಾಕ್ಸ್, ತಾ.೧೭ ರಂದು ಶಾಂತಳ್ಳಿ ಪ್ಯಾಕ್ಸ್, ತಾ.೧೮ ರಂದು ರುದ್ರುಗುಪ್ಪೆ ಪ್ಯಾಕ್ಸ್, ತಾ.೧೯ ರಂದು ತೊರೆನೂರು ಪ್ಯಾಕ್ಸ್ನಲ್ಲಿ ಸಪ್ತಾಹದ ಅಂಗವಾಗಿ ಕಾರ್ಯಕ್ರಮಗಳು ನಡೆಯಲಿವೆ.
ತಾ.೨೦ ರಂದು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ೭೩ ನೇ ಸಹಕಾರ ಸಪ್ತಾಹದಾಚರಣೆಯ ಅಂಗವಾಗಿ ಕೊಡಗು ಸಹಕಾರ ರತ್ನ ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಕೆ.ಪಿ ಗಣಪತಿ ಮಾತನಾಡಿ, ಭಾರತದಲ್ಲಿ ೧೨೧ ವರ್ಷಗಳ ಇತಿಹಾಸ ಸಹಕಾರ ಬ್ಯಾಂಕ್ಗಳಿಗಿವೆ. ರೈತರಿಗೆ ಕಡಿಮೆ ಬಡ್ಡಿ ದರ, ಕನಿಷ್ಟ ದಾಖಲಾತಿ ಆಧಾರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕ್ಗಳು ಕಲ್ಪಿಸಿವೆ. ಕೊಡಗು ಜಿಲ್ಲೆಯಲ್ಲಿ ೩೦೩ ದವಸಬಂಡಾರಗಳಿದ್ದು, ಸಹಕಾರ ಕ್ಷೇತ್ರದಲ್ಲಿ ೧೧೫ ವರ್ಷಗಳ ಇತಿಹಾಸ ಇದೆ ಎಂದರು. ಸಹಕಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಜನರನ್ನು ಸೇರಿಸಿ ಮಾಹಿತಿ, ಜಾಗೃತಿ ನೀಡುವುದೇ ಸಪ್ತಾಹದ ಉದ್ದೇಶ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹೆಚ್.ಕೆ ಮಾದಪ್ಪ, ನಿರ್ದೇಶಕರುಗಳಾದ ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಟಿ ಸುಬ್ಬಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಜರಿದ್ದರು.
ಪ್ರಶಸ್ತಿ ಪ್ರದಾನ
ಕೊಡಗು ಸಹಕಾರ ರತ್ನ ಪ್ರಶಸ್ತಿಯನ್ನು ಸೋಮವಾರಪೇಟೆ ತಾಲೂಕಿನ ಸಂಪಿಗೆದಾಳು ಗ್ರಾಮದ ಎಸ್.ಕೆ. ವೀರಪ್ಪ ಅವರಿಗೆ ಪ್ರದಾನ ಮಾಡಲಾಗುವುದು. ಇವರು ೧೯೬೪ ರಿಂದ ೧೯೭೭ ರವರೆಗೆ ಹಂಡ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ೧೯೭೮ ರಿಂದ ೧೯೯೦ ರವರೆಗೆ ಶನಿವಾರಸಂತೆ ಸಹಕಾರ ಯೂನಿಯನ್ನಲ್ಲಿ ನಿರ್ದೇಶಕರಾಗಿ, ೧೯೮೮ ರಿಂದ ೧೯೯೪ ರವರೆಗೆ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೧ ರಿಂದ ೧೯೮೪ ರವರೆಗೆ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘ ಮಡಿಕೇರಿಯಲ್ಲಿ, ೧೯೮೬ ರಿಂದ ೧೯೮೯ ರವರೆಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿಯಲ್ಲಿ, ೧೯೯೨ ರಿಂದ ೧೯೯೭ ರವರೆಗೆ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಮೀನುಗಾರಿಕಾ ಮಹಾಮಂಡಳ-ಮೈಸೂರು ಇಲ್ಲಿ ೧೯೯೯ ರಿಂದ ಒಂದು ಅವಧಿಗೆ ನಿರ್ದೇಶಕರಾಗಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕುಂಡ್ಯೋಳAಡ ಪಿ. ಮುದ್ದಯ್ಯ ಅವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇವರು, ೧೯೯೫ ರಿಂದ ೨೦೦೦ ರÀವರೆಗೆ ನಾಪೋಕ್ಲು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, ೧೯೯೬ ರಿಂದ ೧೯೯೯ ರವರೆಗೆ ನಾಪೋಕ್ಲುನಾಡು ಗ್ರಾಹಕರ ಸಹಕಾರ ಸ್ಟೊರ್ಸ್ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೫-೨೦೨೦ ರವರೆಗೆ ಮಡಿಕೇರಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನಲ್ಲಿ ನಿರ್ದೇಶಕರಾಗಿ, ೨೦೨೦ ರಿಂದ ೨೦೨೫ ರವರೆಗೆ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಘವು ರಾಜ್ಯಮಟ್ಟದ ಪ್ರಶಸ್ತಿ ಗಳಿಸಿತ್ತು. ೨೦೨೦ ರಿಂದ ೨೦೨೫ ರವರೆಗೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿದ್ದರು. ಕೊಳಕೇರಿ ವಿವಿದೊದ್ಧೇಶ ಸಹಕಾರ ದವಸ ಭಂಡಾರದಲ್ಲಿ ೨೦೧೭ ರಿಂದ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ.
ಮುದ್ದಿಯಡ ಎ. ಸೋಮಯ್ಯ(ಬೋಸ್) ಅವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇವರು, ೧೯೭೮ ರಲ್ಲಿ ಪೊನ್ನಂಪೇಟೆ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ೨ ಅವಧಿಗಳಿಗೆ ಸೇವೆ ಸಲ್ಲಿಸಿದ್ದಾರೆ. ೧೯೮೩ ರಲ್ಲಿ ಪೊನ್ನಂಪೇಟೆ ವ್ಯವಸಾಯ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ನಿರ್ದೇಶಕರಾಗಿ ನಂತರದಲ್ಲಿ ೪ ಅವಧಿಗಳಿಗೆ ಅಧ್ಯಕ್ಷರಾಗಿ ಪ್ರಸ್ತುತ ನಿರ್ದೇಶಕರಾಗಿ ಮುಂದುವರೆಯುತ್ತಿದ್ದಾರೆ.
ಲೋಕೇಶ್ವರಿ ಗೋಪಾಲ್ ಅವರಿಗೆ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇವರು, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದಲ್ಲಿ ಸ್ಥಾಪಕ ನಿರ್ದೇಶಕರಾಗಿ ೧೯೯೭ ರಿಂದ ಇದುವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದಲ್ಲಿ ನೆಲೆಸಿರುವ ಇವರು ೨೦೧೫ ರಿಂದ ೨೦೨೦ ರವರೆಗೆ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ೨೦೧೦ ರಿಂದ ೨೦೧೫ ರವರೆಗೆ ಉಪಾಧ್ಯಕ್ಷರಾಗಿ, ೨೦೨೦ ರಿಂದ ಸತತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ಉನ್ನತಿ ಭವನ’ದ ಸಭಾಂಗಣದಲ್ಲಿ ತಾ.೨೦ರಂದು ಏರ್ಪಡಿಸಲಾಗಿದೆ.