ಐಗೂರು, ನ. ೧೨: ಐಗೂರಿನ ವಿಜಯನಗರದ ಗುಳಿಗಪ್ಪ ಸ್ವಾಮಿ ಮತ್ತು ವನದುರ್ಗಿ ದೇವರ ವಾರ್ಷಿಕ ಪೂಜೆ ಭಕ್ತಿಪೂರ್ವಕವಾಗಿ ಸಂಪನ್ನಗೊAಡಿತು. ದೇವಾಲಯವು ಹೂವಿನ ಅಲಂಕಾರಗಳಿAದ ಶೃಂಗಾರಗೊAಡು, ಬ್ಯಾಂಡ್ ವಾದನವು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಕೊಡಗು ಜಿಲ್ಲೆ ಮತ್ತು ನೆರೆಯ ಮೈಸೂರು, ದಕ್ಷಿಣ ಕನ್ನಡ, ಹಾಸನ ಮತ್ತು ಬೆಂಗಳೂರಿನ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಮೆರವಣಿಗೆ ಮುಗಿದ ನಂತರ ಅರ್ಚಕರಾದ ಸುರೇಂದ್ರ ಭಟ್ ಮತ್ತು ಪೂಜಾರಿ ಅಚ್ಚುತ ಅವರ ನೇತೃತ್ವದಲ್ಲಿ ಹೋಮ, ಅಭಿಷೇಕ ಪೂಜೆ ಮತ್ತು ,ಮಹಾಪೂಜೆ ನೆರವೇರಿತು. ಮಹಾಪೂಜೆಯ ಪ್ರಯುಕ್ತ ಗ್ರಾಮಸ್ಥರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಹಿಳೆಯರು ತಮ್ಮ ಮನೆಗಳ ಮುಂದೆ ಆಕರ್ಷಕ ರಂಗೋಲಿಯನ್ನು
ಬಿಡಿಸುವ ಮೂಲಕ ಉತ್ಸವದಲ್ಲಿ ತಮ್ಮ
ಕಲಾಪ್ರತಿಭೆ ಹಾಗೂ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸಿ ದರು. ದೇವಾಲಯ ವತಿಯಿಂದ ಕಳೆದ ಮೂರು ವರ್ಷಗಳಿಂದ ಆಡಳಿತ ಮಂಡಳಿಯಲ್ಲಿ ಪದಾಧಿಕಾರಿಗಳಾಗಿ ಶ್ರಮಿಸಿದ
ಆರ್. ರವಿ, ಕೆ.ಆರ್. ರಮೇಶ್, ಟಿ.ಜಿ. ಮುತ್ತಪ್ಪ, ಕೆ.ಪಿ. ಮುತ್ತಪ್ಪ ಮತ್ತು ರೂ. ೧೦,೦೦೦ ಕ್ಕಿಂತ ಮೇಲ್ಪಟ್ಟ ಧನಸಹಾಯ ನೀಡಿದ ದಾನಿಗಳಾದ ಜಿಲ್ಲಾ ತೀಯನ್ ಸಮಾಜದ ಉಪಾಧ್ಯಕ್ಷರಾದ
ಅಶೋಕ್ ಕುಮಾರ್, ಸಮಾಜಸೇವಕ ಎಡಿಕೇರಿ ಪ್ರಸನ್ನ, ಸಜಿ ಭರತ್, ಪೂರ್ಣಿಮಾ ನಂದಕುಮಾರ್, ಕೆ.ಟಿ. ಮೇದಪ್ಪ ಮತ್ತು ಚಿರಂಜೀವಿ ರೆಡ್ಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಪಿ.ಧರ್ಮಪ್ಪ, ಉಪಾಧ್ಯಕ್ಷ ಎಂ.ಎನ್ ಗೋಪಿ, ಖಜಾಂಚಿ ಮಣಿಕಂಠ ಪಿ., ಕಾರ್ಯದರ್ಶಿ ಅರುಣ, ಉಪ ಕಾರ್ಯದರ್ಶಿ ವಿ.ನಿತಿನ್, ಉಪಖಜಾಂಚಿ ಪಿ. ವಿನು ಮತ್ತು ಐಗೂರು ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.