ನಾಪೋಕ್ಲು, ನ. ೧೨: ಕೊಡವ ಸಮಾಜ ನಾಪೋಕ್ಲು ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ಸಮಾಜದ ಹರದಾಸ ಅಪ್ಪನೆರವ೦ಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಜರುಗಿತು.

ಸಮಾಜದ ಅಧ್ಯಕ್ಷರಾದ ಮುಂಡAಡ ಸಿ. ನಾಣಯ್ಯ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಆಡಳಿತ ಮಂಡಳಿಯ ಮೂರು ವರ್ಷದ ಅಭಿವೃದ್ಧಿ ಕಾರ್ಯವನ್ನು ಸಭೆಗೆ ಮಂಡಿಸಿದರು.

ಸಮಾಜದ ಅಭಿವೃದ್ಧಿಗೆ ಮಾಡಿದ ೨೮ ಲಕ್ಷ ಬ್ಯಾಂಕ್ ಸಾಲವನ್ನು ನಮ್ಮ ಆಡಳಿತ ಅವಧಿಯಲ್ಲಿ ಮರುಪಾವತಿ ಮಾಡಿದ್ದೇವೆ. ಸಮಾಜದ ಕಟ್ಟಡದ ಮುಂಭಾಗದಲ್ಲಿ ಸಭೆ ಸಮಾರಂಭ ನಡೆಸಲು ಅನುಕೂಲವಾಗುವಂತೆ ೧೨ ಲಕ್ಷದಲ್ಲಿ ಸುಸಜ್ಜಿತವಾದ ಕಾಫಿ, ತಿಂಡಿ ಕೌಂಟರ್ ಅನ್ನು ನಿರ್ಮಿಸಲಾಗಿದೆ ಎಂದರು. ವಸತಿಗೃಹದ ಗೋಡೆಗಳಿಗೆ ಟೈಲ್ಸ್ ಅಳವಡಿಕೆ, ಅಲ್ಲದೆ ಇಂಟರ್ಲಾಕ್ ಹಾಗೂ ೧೬ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜನಾಂಗದ ಯುವಕ ಯುವತಿಯರಿಗೆ ತಮ್ಮ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ಸಲುವಾಗಿ ನುರಿತ ತಜ್ಞರಿಂದ ಒಂದು ತಿಂಗಳ ತರಬೇತಿ ನೀಡಲಾಗಿದೆ. ವಿದ್ಯಾನಿಧಿಯನ್ನು ಬೆಳೆಸಲು ೫೦ ಲಕ್ಷ ದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ದಾನಿಗಳು ಸಹಕಾರ ನೀಡಿರುವುದಾಗಿ ತಿಳಿಸಿದರು. ಈ ಎಲ್ಲಾ ಅಭಿವೃದ್ಧಿ ಕಾರ್ಯವನ್ನು ಮಾಡಲು ಸಮಾಜದ ಸರ್ವ ಸದಸ್ಯರು ಸಹಕಾರವನ್ನು ನೀಡಿದ್ದು ಅವರಿಗೆ ಸಮಾಜದ ಪರವಾಗಿ ಕೃತಜ್ಞತೆಯನ್ನು ಬಯಸಿದರು. ಸಭೆಯಲ್ಲಿ ಸಮಾಜದ ಅಭಿವೃದ್ಧಿಗೆ ಸಂಬAಧಿಸಿದAತೆ ಕೆಲವು ಚರ್ಚೆಗಳು ನಡೆಸಿ ಅಂತಿಮವಾಗಿ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಾಯಿತು.

ಕೊಡಗಿನ ಕುಲದೇವರಾದ ಶ್ರೀ ಇಗ್ಗುತ್ತಪ್ಪ ದೇವರ ಪುತ್ತರಿ ದೇಶ ಕಟ್ಟನ್ನು ಎಲ್ಲಾ ಕೊಡವ ಸಮಾಜ, ಸಮುದಾಯದ ಜನಾಂಗ ಬಾಂಧವರು ಕಡ್ಡಾಯವಾಗಿ ಪಾಲಿಸಬೇಕೆಂದು ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು, ಅಲ್ಲದೆ ಈ ದೇಶ ಕಟ್ಟು ಇರುವ ಸಂದರ್ಭದಲ್ಲಿ ಕೊಡವ ಸಮಾಜದ ಒಕ್ಕೂಟದ ಆಶ್ರಯದಲ್ಲಿ ಕೊಡವ ನಮ್ಮೆಯನ್ನು ಆಚರಿಸುತ್ತಿರುವುದಕ್ಕೆ ಸಭೆಯಲ್ಲಿ ಒಮ್ಮತದ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ನಾಯಕಂಡ ಜ್ಯೂಬಿ ತಿಮ್ಮಯ್ಯ ಹಾಗೂ ಕಲಿಯಂಡ ಗೀತಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವನ್ನು ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಸ್ವಾಗತಿಸಿ ಗೌರವ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು, ಈ ಸಂದರ್ಭ ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಮಾಚೇಟಿರ ಕುಸು ಕುಶಾಲಪ್ಪ, ಖಜಾಂಜಿ ಚೌರಿರ ಉದಯ, ವ್ಯವಸ್ಥಾಪಕ ಶಿವಚಳಿಯಂಡ ಜಗದೀಶ್, ನಿರ್ದೇಶಕರುಗಳು, ಸಮಾಜದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.