ಚೆಯ್ಯಂಡಾಣೆ, ನ. ೧೨: ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿದ ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ, ಕೋಕೇರಿ ಗ್ರಾಮದ ಬಿದ್ದಂಡ ಸಿ. ರೋಹಿಣಿ ಅವರು ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿಗೆ ಭಾಜನರಾಗಿದ್ದು, ಈ ಹಿನ್ನೆಲೆಯಲ್ಲಿ ಕೋಕೇರಿ ಸುವರ್ಣ ಗ್ರೂಪ್ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಸುದೀರ್ಘ ಕಾಲದಿಂದ ನಿಷ್ಠೆ ಹಾಗೂ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ರೋಹಿಣಿ ಅವರ ಕಾರ್ಯವನ್ನು ಗುರುತಿಸಿ ಸುವರ್ಣ ಗ್ರೂಪ್ ವತಿಯಿಂದ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಪೆಮ್ಮಂಡ ಕೌಶಿ ಕಾವೇರಮ್ಮ, ಕುಮ್ಮಂಡ ಸುಶೀಲಾ, ಚೇನಂಡ ಗಾಯತ್ರಿ, ಮೂಡೇರ ಜುಗ್ಗು, ಪೆಮ್ಮಂಡ ಗೌರಮ್ಮ, ಕುಮ್ಮಂಡ ಚಿತ್ರಾ, ಪೆಮ್ಮಂಡ ಜನತಾ, ಮೂಡೇರ ರಾಣಿ, ಪೆಮ್ಮಂಡ ಉಷಾ ಹಾಗೂ ಕುಮ್ಮಂಡ ಡಿಂಪಲ್ ಉಪಸ್ಥಿತರಿದ್ದರು.