ಮಡಿಕೇರಿ, ನ. ೧೨: ಸಮಸ್ತ ಎಸ್.ವೈ.ಎಸ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನವಂಬರ್ ೮ ಮಂಗಳವಾರ ಎಮ್ಮೆಮಾಡು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫೀ ಶಹೀದ್ ಸನ್ನಿಧಿಯಲ್ಲಿ ಅಲ್ ಬಿದಾಯ ಕ್ಯಾಂಪಿನ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಕೊಡಗಿನ ಸಹ ಖಾಝಿಗಳಾದ ಶೈಖುನಾ ಎಂ.ಎA. ಅಬ್ದುಲ್ಲಾ ಫೈಝಿ ಉದ್ಘಾಟನೆ ನೆರವೇರಿಸಿದರು. ಸಮಸ್ತ ಎಸ್.ವೈ.ಎಸ್ ಜಿಲ್ಲಾ ಸಮಿತಿಯ ಅದೀನ ದಲ್ಲಿ ಕೊಡಗಿನಲ್ಲಿ ಕಾರ್ಯಾಚರಿಸುತ್ತಿರುವ ೩೦ಕ್ಕಿಂತ ಅಧಿಕ ಶಾಖೆಗಳಲ್ಲಿ ಡಿಸೆಂಬರ್ ೩೦ಕ್ಕಿಂತ ಮುಂಚಿತವಾಗಿ ಕಾರ್ಯಕರ್ತರಲ್ಲಿ ಅಧ್ಯಾತ್ಮಿಕ ಚಿಂತನೆ ಮೂಡಿಸುವುದರೊಂದಿಗೆ ಸಂಘಟನಾತ್ಮಕ ಚಿಂತನೆಗಳು ಮತ್ತು ಸಾಮಾಜಿಕ ಕಳಕಳಿಯ ಅರಿವು ಮೂಡಿಸುವುದು ಹಾಗೂ ಕ್ರಿಯಾಶೀಲತೆಯಿಂದ ಸಾತ್ವಿಕ ಬದುಕು ಕಟ್ಟಿಕೊಳ್ಳುವುದರ ಅನಿವಾರ್ಯತೆಯ ಬಗ್ಗೆ ಶಾಖೆಗಳಲ್ಲಿ ಅಧ್ಯಯನ ಶಿಬಿರವನ್ನು ಶಿಸ್ತು ಬದ್ಧವಾಗಿ ನಡೆಸಬೇಕಾದ ಕಾರ್ಯಕ್ರಮವಾಗಿದೆ ಅಲ್-ಬಿದಾಯ ಶಿಬಿರ. ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಸಮಸ್ತ ಪ್ರಧಾನ ಕಾರ್ಯದರ್ಶಿ ಎ.ಸಿ ಉಸ್ತಾದ್ ಉಸ್ಮಾನ್ ಫೈಝಿ, ಎಸ್.ವೈ.ಎಸ್ ಕೊಡಗು ಜಿಲ್ಲಾಧ್ಯಕ್ಷರಾದ ಸಿಪಿಎಂ ಬಶೀರ್ ಹಾಜಿ, ಎಸ್.ವೈ.ಎಸ್ ಜಿಲ್ಲಾ ಕೋಶಾಧಿಕಾರಿ ಉಮ್ಮರ್ ಫೈಝಿ, ಎಸ್.ವೈ.ಎಸ್ ಜಿಲ್ಲಾ ನಾಯಕರಾದ ಇಕ್ಬಾಲ್ ಮುಸ್ಲಿಯರ್ ನೆಲ್ಯಾ ಹುದಿಕೇರಿ, ಅಬ್ದುಲ್ ಸಲಾಂ ನೆಲ್ಯಾ ಹುದಿಕೇರಿ, ಅಶ್ರಫ್ ಪೊನ್ನಂಪೇಟೆ, ಶೌಕತ್ ಗೋಣಿಕೊಪ್ಪ, ಅಬ್ದುಲ್ ರೆಹಮಾನ್ ಗೋಣಿಕೊಪ್ಪ, ಇಬ್ರಾಹಿಂ ಹಾಜಿ ಎಮ್ಮೆ ಮಾಡು, ಅಹಮದ್ ಮುಸ್ಲಿಯಾರ್, ಮುಹಮ್ಮದ್ ಅಝ್ ಹರಿ, ಉಮರ್ ಮುಸ್ಲಿಯರ್ ಇನ್ನಿತರ ಜಿಲ್ಲಾ ಹಾಗೂ ವಲಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಸ್ವಾಗತಿಸಿ, ವಂದಿಸಿದರು.