ಮಡಿಕೇರಿ. ನ. ೧೨: ಪುಟ್ಟ ಕಂದನನ್ನು ಮನೆಯೊಳಗೆ ಪೆಟ್ಟಿಗೆಯಲ್ಲಿ ಕೂಡಿಟ್ಟು ತಾಯಿ ಒಬ್ಬಳು ಬಾಗಿಲು ಬೀಗ ಜಡಿದು ಪರಾರಿ ಆಗಿರುವ ಪ್ರಸಂಗ ಮಾದಾಪುರದ ಫೀ. ಮಾ. ಕಾರ್ಯಪ್ಪ ಪುನರ್ವಸತಿ ಬಡಾವಣೆಯಲ್ಲಿ ಗೋಚರಿಸಿದೆ.

ನಿನ್ನೆ ಅಪರಾಹ್ನದ ವೇಳೆ ಈ ಪ್ರಸಂಗ ಬೆಳಕಿಗೆ ಬಂದಿದೆ. ಈ ನಡುವೆ ಪಕ್ಕದ ಮನೆಯವರು ನೆರಮನೆಯೊಳಗೆ ಮಗುವಿನ ಅಳು ಕೇಳಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ಗೊತ್ತಾಗಿದೆ.

ತಕ್ಷಣ ದೌಡಾಯಿಸಿದ ಪೊಲೀಸರು ಮಗುವನ್ನು ರಕ್ಷಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

(ವಿವರ ನಾಳೆಯ ಸಂಚಿಕೆಯಲ್ಲಿ)