ಸೋಮವಾರಪೇಟೆ, ನ. ೧೧: ಕಳೆದ ೨೦೧೫ ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭ ಸಂಭವಿಸಿದ ಘರ್ಷಣೆಯಲ್ಲಿ ಸಾವನ್ನಪ್ಪಿದ ದೇವಪ್ಪಂಡ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಹಿಂದು ಪರ ಸಂಘಟನೆಗಳಿAದ ಮಡಿಕೇರಿ, ಮಾದಾಪುರ ಹಾಗೂ ಕುಶಾಲನಗರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಸ್ಮರಣೆ ಮಾಡಿಕೊಳ್ಳಲಾಯಿತು.
ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕುಟ್ಟಪ್ಪ ಅವರ ಸ್ಮರಣಾರ್ಥ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಪರ ಸಂಘನೆಗಳ ಪ್ರಮುಖರಾದ ಕುಕ್ಕೇರ ಅಜಿತ್ ಕುಮಾರ್, ಶಾಂತೆಯAಡ ರವಿ ಕುಶಾಲಪ್ಪ, ಮನು ಮಂಜುನಾಥ್, ಅಪ್ಪು ರೈ, ವಿನಯ್ ಕುಮಾರ್, ರಮೇಶ್ ಹೊಳ್ಳ, ದುರ್ಗೇಶ್ ಇತರರು ಪಾಲ್ಗೊಂಡಿದ್ದರು.
ದೇವಪ್ಪಂಡ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮ ಮಾದಾಪುರದ ಗಣಪತಿ ದೇವಾಲಯದಲ್ಲಿ ನಡೆಯಿತು. ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ಸುನಿಲ್ ಮಾದಾಪುರ, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಯೋಜಕ್ ವಿನು, ಪ್ರಮುಖರಾದ ಮನೋಜ್ಕುಮಾರ್, ಸೂರಜ್, ಪ್ರವೀಣ್, ಅಶೋಕ, ಅಜಿತ್, ಗಪ್ಪು ಸೋಮಯ್ಯ, ರಮೇಶ್ ಸೇರಿದಂತೆ ಇತರರು ಇದ್ದರು.
ಕುಶಾಲನಗರ ಗಣಪತಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಹರೀಶ್, ಭರತ್ ಮಾಚಯ್ಯ, ಪ್ರಜ್ವಲ್, ಸಂತೋಷ್ ಇನ್ನಿತರರು ಪಾಲ್ಗೊಡಿದ್ದರು.