ಮಡಿಕೇರಿ, ನ. ೧೧: ದೀಪಾವಳಿ ಹಬ್ಬದಲ್ಲಿ ಪೂಜೆಗೆಂದು ದೇವಾಲಯಕ್ಕೆ ಬಂದಿದ್ದ ಕುಟುಂಬದ ಮೇಲೆ ಗುಂಪೊAದು ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ. ನಗರದ ಗೌಳಿಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯಕ್ಕೆ ಭಾನುವಾರ ಸಂಜೆ ಹೊಸ ಬಡಾವಣೆಯ ನಿವಾಸಿಗಳಾದ ಜಿ.ಆರ್. ಸತೀಶ್ ಹಾಗೂ ಪತ್ನಿ ಮತ್ತು ಮಕ್ಕಳಾದ ಸಂಪ್ರೀತ್ ಹಾಗೂ ಅಭಿಶೀತ್ ಅವರುಗಳು ಪೂಜೆಗೆಂದು ಬಂದಿದ್ದ ಸಂದರ್ಭದಲ್ಲಿ ದೇವಾಲಯದ ಮುಂಭಾಗದಲ್ಲಿದ್ದ ಶರತ್, ಸೂರಜ್ ಮತ್ತು ಉಮೇಶ್ ಸುಬ್ರಮಣಿ ಅವರುಗಳು ಹಳೆಯ ವೈಷಮ್ಯದ ಹಿನ್ನೆಲೆ ಸತೀಶ್ ಹಾಗೂ ಮಕ್ಕಳಾದ ಸಂಪ್ರೀತ್ ಮತ್ತು ಅಭಿಶೀತ್ ಅವರುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಘಟನೆಗೆ ಸಂಬAಧಿಸಿದAತೆ ಮಡಿಕೇರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿಂದಿನಿAದಲೂ ನಮಗೆ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದು ಈ ಕುರಿತು ದೂರನ್ನು ಕೂಡ ನೀಡಲಾಗಿತ್ತು, ಇದೀಗ ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದಾರೆ. ಆದರೂ ಇದುವರೆಗೂ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೆAದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಸತೀಶ್, ಸಂಪ್ರೀತ್ ಹಾಗೂ ಅಭಿಶೀತ್ ಹೇಳಿಕೆ ನೀಡಿದ್ದಾರೆ.