ವೀರಾಜಪೇಟೆ, ನ. ೧೧: ಕಲ್ಲು ಬಾಯ್ಸ್ ಕಲ್ಲುಬಾಣೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾ. ೧೨ ರಿಂದ ೧೫ ರವರೆಗೆ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಹೊನಲು ಬೆಳಕಿನ ಫುಟ್‌ಬಾಲ್ ಪಂದ್ಯಾಟ ನಡೆಯಲಿದೆ. ಕ್ರೀಡಾಕೂಟದಲ್ಲಿ ಒಟ್ಟು ೩೨ ತಂಡಗಳು ಭಾಗವಹಿಸಲಿವೆ.

ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನಗಳಿದ್ದು, ಪ್ರಥಮ ಸ್ಥಾನ ೧,೭೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ. ದ್ವಿತೀಯ ಸ್ಥಾನ ೧,೨೦,೦೦೦ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ೩೦,೦೦೦ ನಗದು, ಚತುರ್ಥ ಸ್ಥಾನ ವಿಶೇಷ ಟ್ರೋಫಿ ನೀಡಲಾಗುತ್ತದೆ.

ಈ ಬಾರಿಯ ಪಂದ್ಯಾಟದಲ್ಲಿ ಉಳಿಯುವ ಮೊತ್ತವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಹಾಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಅಲ್ಲದೆ, ಸಮಾಜಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಮತ್ತು ಕ್ರೀಡಾ ಸಾಧಕರನ್ನು ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: ೮೧೦೫೨೫೩೩೯೮ ಸಂಪರ್ಕಿಸಬಹುದಾಗಿದೆ.