ಕೂಡಿಗೆ, ನ. ೯: ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಕೂಡಿಗೆ ವೃದ್ಧಾಶ್ರಮದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೃದ್ಧಾಶ್ರಮದ ಹಿರಿಯರಿಗೆ ಮಧ್ಯಾಹ್ನದ ಊಟ, ಹಣ್ಣು-ಹಂಪಲು, ಸಿಹಿ, ಬಟ್ಟೆ ಹಾಗೂ ಆಶ್ರಮಕ್ಕೆ ಅಗತ್ಯವಿರುವ ಮಿಕ್ಸರ್, ಗ್ಯಾಸ್ ಸ್ಟೌವ್ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಾಂಗ್ರೆಸ್ ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಮಾಜಿ ಸದಸ್ಯ ಶಿವಶಂಕರ್, ಮುಖಂಡರಾದ ಚಿರಂಜೀವಿ, ಯೋಜನಾ ಪ್ರಾಧಿಕಾರದ ಸದಸ್ಯ ಕಿರಣ್, ಹೆಬ್ಬಾಲೆಯ ರಂಜನ್, ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.