ಪೊನ್ನಂಪೇಟೆ, ನ. ೪: ಕುಶಾಲನಗರದ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ರಾಮನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಈ ತಂಡವು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದೆ. ಸುಶ್ಮಿತಾ ಪಿ.ಎಂ. ನಾಯಕತ್ವದ ತಂಡದಲ್ಲಿ ಸಿಂಚನ ಜೆ.ಎಂ., ದಿವ್ಯ ಪಿ.ಜೆ., ಸೌಮ್ಯ ಪಿ.ಎಸ್., ರಚನ ಜೆ.ಜಿ., ಶಿವಮ್ಮ ಜೆ.ಕೆ., ಕೃತಿಕಾ ಎಂ., ಸೌಮ್ಯ ಪಿ.ಕೆ,. ಸಂಧ್ಯಾ ಪಿ.ಆರ್., ಕನಕವಲ್ಲಿ ಎಸ್., ಅಲನ್ಯ ಸುರೇಶ್, ರಿಷಿತ ಕೆ.ವಿ., ಶೋಭಾ ಪಿ.ಎಂ. ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.