-
ಸುಂಟಿಕೊಪ್ಪ, ನ. ೪: ಸುಂಟಿಕೊಪ್ಪ ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ್ಕೆ ೨ ತಾಲೂಕು ಹೊರತುಪಡಿಸಿ ಜಿಲ್ಲೆಯ ವಿವಿಧ ಊರುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ದಿನವೊಂದಕ್ಕೆ ಹತ್ತಾರು ಮಲ ತ್ಯಾಜ್ಯ ವಾಹನಗಳಲ್ಲಿ ತಂದು ವಿಲೇವಾರಿ ಮಾಡುತ್ತಿದ್ದು ಲೆಕ್ಕ ಪತ್ರದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಹಾಗೂ ವೇವ್ ಸಂಸ್ಥೆಯ ಪದಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ಘಟಕದಲ್ಲಿ ಅಂದಾಜು ಸುಮಾರು ರೂ. ೭೫ ಲಕ್ಷ ವೆಚ್ಚದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಿಗೆ ಸೇರಿದ ಗ್ರಾಮಗಳಿಗೆ ಸಂಬAಧಿಸಿದ ಮಲ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಗೊಳಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ ಒಂದು ತಿಂಗಳಿನಿAದ ಹಗಲು ರಾತ್ರಿಯೇನ್ನೇದ ೫-೬ ತ್ಯಾಜ್ಯ ಘಟಕದಲ್ಲಿ ಸುರಿಯಲಾಗುತ್ತಿದೆ. ಈ ಘಟಕವು ಅಕ್ರಮ ಮತ್ತು ಅವೈಜ್ಞಾನಿಕ ಕೇಂದ್ರವಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಪರಿಸರಕ್ಕೂ ಹಾನಿಯುಂಟಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕಸ ವಿಲೇವಾರಿ ಜಾಗದಲ್ಲಿ ಬೀದಿ ನಾಯಿಗಳ ಹಾವಳಿ ಎಲ್ಲೇಮಿರಿದ್ದು ಇದರಿಂದ ಇಲ್ಲಿನ ನಿವಾಸಿಗಳು, ವಿಶೇಷಚೇತನರು, ಶಾಲಾ ಮಕ್ಕಳ ಆರೋಗ್ಯಕ್ಕೂ ಕಂಟಕ ಪ್ರಾಯವಾಗಲಿದೆ ಎಂದು ಮಾಜಿ ಸದಸ್ಯರುಗಳು ದೂರಿಕೊಂಡರು.
ಪಂಚಾಯಿತಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ ಮಲ ತ್ಯಾಜ್ಯ ಘಟಕದ ನಿರ್ವಹಣೆಗೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಸೀಮಿತಕ್ಕೆ ಹಿಂದಿನ ಆಡಳಿತ ಮಂಡಳಿ ನಿರ್ಣಯಿಸಲಾಗಿದ್ದರು, ಇದೀಗ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು ಏಕಪಕ್ಷೀಯ ನಿರ್ಧಾರದಿಂದ ಮಲ ತ್ಯಾಜ್ಯ ಘಟಕವು ನಿರ್ವಹಣೆ ನಿರ್ಲಕ್ಷö್ಯಕ್ಕೆ ತುತ್ತಾಗಿದೆ. ಇದರ ಗುತ್ತಿಗೆ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನು ಮಾಜಿ ಸದಸ್ಯರುಗಳು ವ್ಯಕ್ತಪಡಿಸಿದರು.
ಇದಕ್ಕೆ ಪ್ರತ್ರಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಒಂದು ತಿಂಗಳಲ್ಲಿ ಸರಿಸುಮಾರು ೭೫ಕ್ಕೂ ಮಿಕ್ಕಿ ಲಾರಿಗಳಲ್ಲಿ ಮಲ ವಿಲೇವಾರಿಗೊಳಿಸಲಾಗಿದ್ದು, ತಾಲೂಕು ನಿರ್ವಹಣಾಧಿಕಾರಿಗಳು ನಿಗದಿಗೊಳಿಸಿರುವ ಬಾಪ್ತು ಗುತ್ತಿಗೆದಾರ ಜಮಾಗೊಳಿಸಿದ್ದಾನೆ ಎಂದು ಸಮಾಜಾಯಿಷಿಕೆ ನೀಡಿದರು.
ಇದಕ್ಕೆ ಅತೃಪ್ತರಾದ ಮಾಜಿ ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ರಫೀಕ್ ಖಾನ್, ಶಬೀರ್, ವೇವ್ ಸಂಘಟನೆಯ ಸಂಚಾಲಕ ಲತೀಫ್, ಪರಾಝ್ ಉಸ್ಮಾನ್, ರಶೀದ್, ಇಬ್ರಾಹಿಂ ಮತ್ತಿತರರು ಒಂದು ವಾರದೊಳಗೆ ಈ ಘಟಕದ ಸರಿಯಾದ ನಿರ್ವಹಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತು ದಿನವೊಂದಕ್ಕೆ ಹತ್ತಾರು ಬಾರೀ ವಾಹನಗಳು ಸಂಚರಿಸುವ ಸಂಖ್ಯೆಯ ಬಗ್ಗೆ ಸಂಶಯವಿದ್ದು, ಸರಿಯಾದ ಲೆಕ್ಕವನ್ನು ವಂಚಿಸುತ್ತಿರುವ ಸಂಶಯ ವ್ಯಕ್ತಪಡಿಸಿ ಈ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.