ಚೆಯ್ಯಂಡಾಣೆ, ನ. ೪: ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ವಿಭಾಗ ಮಟ್ಟದ ೧೭ ವರ್ಷ ವಯೋಮಿತಿಯ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಸಮೀಪದ ಕಕ್ಕಬೆ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಪಾಲ್ಗೊಂಡು ಸಾಧನೆ ಮಾಡಿದ್ದಾರೆ.
ಕೊಡಗು ಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ಕೆಯಾದ ಕ್ರೀಡಾಪಟುಗಳಲ್ಲಿ ಕಕ್ಕಬ್ಬೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಚ್.ಡಿ.ದೀರಜ್ ದೇವಯ್ಯ, ಪಿ.ಟಿ.ಸ್ವಾತಿಕ್, ಪಿ.ಡಿ.ಪ್ರೇಣಿತ್ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.