ಬೆAಗಳೂರು, ನ. ೪: ಸಾರ್ವಜನಿಕ ಅಧಿಕಾರವನ್ನು ಜನರಿಗೆ ಸೇವೆ ಸಲ್ಲಿಸಲು ನೀಡಲಾಗಿರುತ್ತದೆಯೇ ಹೊರತು ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ನೀಡಲು ಅಲ್ಲ. ಅಧಿಕಾರ ಬಿಟ್ಟುಕೊಡಲು ಇಷ್ಟಪಡದ ವ್ಯಕ್ತಿಯೊಬ್ಬರ ಬಯಕೆ, ಸಾರ್ವಜನಿಕ ಆಡಳಿತದ ಗತಿಯನ್ನು ನಿರ್ಧರಿಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಗುರುರಾಜ ಗಂಟಿಹೊಳೆ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್.ಶಾಂತಿ ಭೂಷಣ್ ಅವರಿದ್ದ ವಿಭಾಗೀಯಪೀಠ, ಬೈಂದೂರು ಕ್ಷೇತ್ರದ ಸಾಗುವಳಿ ಭೂಮಿ ಮಂಜೂರಾತಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ‘ಹೆಚ್ಚುವರಿ ಸಮಿತಿ’ ರಚಿಸಿ ಹೊರಡಿಸಿದ್ದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿದೆ.
ಅಲ್ಲದೇ, ಕರ್ನಾಟಕ ಭೂ ಕಂದಾಯ ನಿಯಮ ೧೦೮-ಇಇ(೧)(ಚಿ) ರ ಅಡಿ ಬರುವ ಹೆಚ್ಚುವರಿ ಸಮಿತಿಯ ಅಧ್ಯಕ್ಷರ ನೇಮಕಾತಿಗೆ ಸಂಬAಧಿಸಿದAತೆ ಮಾರ್ಗಸೂಚಿ ರೂಪಿಸಬೇಕು. ಮಾರ್ಗಸೂಚಿ ರಚಿಸುವಾಗ ಈ ತೀರ್ಪಿನಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಾರ್ಗಸೂಚಿಗಳು ವಸ್ತುನಿಷ್ಠ ಮಾನದಂಡಗಳನ್ನು ಒಳಗೊಂಡಿರಬೇಕು. ಅದರಲ್ಲಿ ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಸಂಬAಧಿತ ಅನುಭವ, ಪ್ರಾಮಾಣಿಕತೆ, ಗೌಪ್ಯತೆ ಕಾಪಾಡುವ ಗುಣ ಮತ್ತು ದೋಷರಹಿತ ನಡವಳಿಕೆ ಮುಂತಾದ ಅಂಶಗಳು ಸೇರಿರಬೇಕು ಎಂದು ರಾಜ್ಯ ಸರ್ಕಾರಕ್ಕೆ ಪೀಠ ಸೂಚನೆ ನೀಡಿದೆ.
ಅಲ್ಲದೇ, ನೇಮಕಾತಿಗಳು ಬಾಹ್ಯ ಅಥವಾ ವೈಯಕ್ತಿಕ ಪರಿಗಣನೆಗಳಿಂದ ಪ್ರಭಾವಿತವಾಗದೇ, ಕೇವಲ ಸೂಕ್ತವಾದ ಹಾಗೂ ಕಾನೂನುಬದ್ಧ ಉದ್ದೇಶ ಈಡೇರಿಸುವಂತಹ ಅಂಶಗಳ ಆಧಾರದ ಮೇಲೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮಾರ್ಗಸೂಚಿಗಳ ಉದ್ದೇಶವಾಗಿದೆ. ಹೆಚ್ಚುವರಿ ಸಮಿತಿಗೆ ವಹಿಸಲಾದ ಕಾರ್ಯಗಳ ಸ್ವರೂಪ ಮತ್ತು ಅದರ ಅಧ್ಯಕ್ಷ ಹುದ್ದೆಗೆ ಸಂಬAಧಿಸಿದ ಜವಾಬ್ದಾರಿ ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ರೂಪಿಸುವ ಮಾರ್ಗಸೂಚಿಗಳು ನ್ಯಾಯಯುತ, ಪಾರದರ್ಶಕ ಮತ್ತು ನಿರಂಕುಶವಲ್ಲದ ನೇಮಕಾತಿ ಪ್ರಕ್ರಿಯೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠ ತಾಕೀತು ಮಾಡಿದೆ.
ಪ್ರಕರಣದಲ್ಲಿ ಸಾರ್ವಜನಿಕರ ನಿಜವಾದ ಅಗತ್ಯ ಪೂರೈಸುವ ಬದಲು, ರಾಜಕೀಯ ಪ್ರಭಾವ ಅಥವಾ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ನಾಯಕರೊಬ್ಬರು ಪರೋಕ್ಷ ಮಾರ್ಗದ ಮೂಲಕ ಅಧಿಕಾರ ಪಡೆಯಲು ಮತ್ತು ಹಿಂಬಾಗಿಲಿನ ದಾರಿಯಿಂದ ಕಳೆದುಕೊಂಡ ಪ್ರಭಾವ ಮರಳಿ ಗಳಿಸಲು ನಡೆಸಿದ ಪ್ರಯತ್ನವನ್ನು ಸೂಚಿಸುತ್ತದೆ. ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ವ್ಯಕ್ತಿಯೊಬ್ಬರಿಗೆ ಪುನರ್ವಸತಿ ಕಲ್ಪಿಸಲು ಅಥವಾ ಕಳೆದುಕೊಂಡ ಪ್ರಭಾವವನ್ನು ಮರಳಿ ಪಡೆಯಲು ಪರೋಕ್ಷ ಅವಕಾಶವನ್ನು ಒದಗಿಸಿಕೊಡುವ ಉದ್ದೇಶದಿಂದ ಮಾತ್ರ ಹೆಚ್ಚುವರಿ ಹುದ್ದೆ ಅಥವಾ ವ್ಯವಸ್ಥೆಯನ್ನು ಸೃಷ್ಟಿಸುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದು ಪೀಠ ಚಾಟಿ ಬೀಸಿದೆ.
ಅಧಿಕಾರವನ್ನು ಬಿಟ್ಟುಕೊಡಲು ಇಷ್ಟಪಡದ ವ್ಯಕ್ತಿಯೊಬ್ಬರ ಬಯಕೆಯು ಸಾರ್ವಜನಿಕ ಆಡಳಿತದ ಗತಿಯನ್ನು ನಿರ್ಧರಿಸಲು ಅವಕಾಶ ನೀಡಬಾರದು. ಸಾರ್ವಜನಿಕ ಅಧಿಕಾರವನ್ನು ಜನರಿಗೆ ಸೇವೆ ಸಲ್ಲಿಸಲು ನೀಡಲಾಗಿರುತ್ತದೆ ಹೊರತು ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ನೀಡಲು ಅಲ್ಲ. ಸಾರ್ವಜನಿಕ ಹುದ್ದೆಯನ್ನು ಸೋತ ರಾಜಕಾರಣಿಗೆ ನೀಡುವ ಸಮಾಧಾನಕರ ಬಹುಮಾನ ಎಂದು ಪರಿಗಣಿಸಲು ಸಾಧ್ಯವಿಲ್ಲ. ರಾಜಕೀಯ ನಿಷ್ಠೆಗೆ ನೀಡುವ ಪ್ರತಿಫಲವಾಗಿಯೂ ಇದನ್ನು ಪರಿವರ್ತಿಸಬಾರದು ಎಂದು ಪೀಠ ಸೂಚಿಸಿದೆ. ಸಾರ್ವಜನಿಕ ಹುದ್ದೆಯು ಸಾರ್ವಜನಿಕ ಹಿತಾಸಕ್ತಿಗಾಗಿ ವಹಿಸಿಕೊಟ್ಟ ಜವಾಬ್ದಾರಿಯೇ ಹೊರತು, ಅದನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕಾದ ಅಥವಾ ರಾಜಕೀಯ ತಂತ್ರಗಾರಿಕೆಗಳ ಮೂಲಕ ಮರಳಿ ಪಡೆಯಬೇಕಾದ ಸವಲತ್ತಲ್ಲ. ಅದಕ್ಕೆ ಅವಕಾಶ ನೀಡಿದರೆ, ಸಾರ್ವಜನಿಕ ಆಡಳಿತವು ಕೇವಲ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈಡೇರಿಸಿಕೊಳ್ಳುವ ಸಾಧನವಾಗಿ ಕುಗ್ಗಿಹೋಗುತ್ತದೆ. ಇದು ಸರ್ಕಾರಿ ಅಧಿಕಾರವನ್ನು ನಿರ್ವಹಿಸುವವರಿಗೆ ಆ ಅಧಿಕಾರವನ್ನು ವಹಿಸಿಕೊಟ್ಟ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ. ಆದ್ದರಿಂದ, ರಾಜ್ಯ ಸರ್ಕಾರವು ವೈಯಕ್ತಿಕ ರಾಜಕೀಯ ಏಳಿಗೆಯ ಲೆಕ್ಕಾಚಾರಗಳಿಂದ ದೂರವಿರಬೇಕು. ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಬಯಸುವ ವ್ಯಕ್ತಿಗೆ ಅವಕಾಶ ಕಲ್ಪಿಸುವ ಬದಲು, ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಅಗತ್ಯಗಳ ಆಧಾರದ ಮೇಲೆಯೇ ತನ್ನ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
೨೦೨೩ರಲ್ಲಿ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಭೂಮಿ ಮಂಜೂರಾತಿ ಸಮಿತಿಯನ್ನು ಸರ್ಕಾರ ರಚಿಸಿತ್ತು. ನಂತರ ಅವರ ಎದುರು ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ್ ಪೂಜಾರಿ ಕೋರಿಕೆ ಮೇರೆಗೆ ಅವರ ನೇತೃತ್ವದಲ್ಲಿ ಹೆಚ್ಚುವರಿ ಸಮಿತಿ ರಚಿಸಿ ೨೦೨೩ರ ಡಿ.೪ರಂದು ಸರ್ಕಾರ ಮತ್ತೊಂದು ಅಧಿಸೂಚನೆ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ್ದರಿಂದ ಗುರುರಾಜ ಗಂಟಿಹೊಳೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.