ಮಡಿಕೇರಿ ನ.೦೪: ಐಸಿಹಾಸಿಕ ಹಿನ್ನೆಲೆ ಗಳಿಸಿರುವ ಮಡಿಕೇರಿ ದಸರಾವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿAದ ಜನೋತ್ಸವ ದಸರಾವನ್ನಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದು ಬೈಲಾ ತಿದ್ದುಪಡಿಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ ಹೇಳಿದರು.

ನಗರದ ರೆಡ್‌ಬ್ರಿಕ್ಸ್ ಸಂಸ್ಥೆಯ ಸತ್ಕಾರ ಸಭಾಂಗಣದಲ್ಲಿ ದಸರಾ ದಶಮಂಟಪ ಸಮಿತಿ ಹಾಗೂ ೬೨ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳಿAದ ಮಂಗಳವಾರ ಏರ್ಪಡಿಸಲಾಗಿದ್ದ ‘ಪೌರ ಸನ್ಮಾನ ಸ್ವೀಕರಿಸಿ’ ಅವರು ಮಾತನಾಡಿದರು.

ದಸರಾ ಸಿದ್ಧತೆಯನ್ನು ಏಪ್ರಿಲ್ ತಿಂಗಳಿನಿAದಲೇ ಮಾಡಿಕೊಳ್ಳಬೇಕು, ಮಂಟಪ ನಿರ್ಮಾಣಕ್ಕಾಗಿ ಹಲವರು ದುಡಿಯುತ್ತಾರೆ. ಮಡಿಕೇರಿ ದಸರಾದಲ್ಲಿ ಕರಗ ಉತ್ಸವದ ಜೊತೆಗೆ ಶೋಭಾಯಾತ್ರೆ ಅತೀ ಮುಖ್ಯ. ಆ ನಿಟ್ಟಿನಲ್ಲಿ ಮಂಟಪ ಸಮಿತಿಗೆ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಹೇಳಿದರು.

ಅಭಿವೃದ್ಧಿಗೆ ಪೂರಕವಾಗಿ ಹಿರಿಯರ ಸಲಹೆ, ಮಾರ್ಗದರ್ಶನ ದಂತೆ ನಡೆಯಲಾಗುವುದು, ದಸರಾ ಸಂಬAಧಿಸಿದAತೆ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮ ಆಯೋಜಿಸಲು ಎಲ್ಲರೂ ಸಹಕಾರ ನೀಡಬಹುದಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದರು.

ದಸರಾವನ್ನು ಜನೋತ್ಸವವಾಗಿ ಆಚರಿಸುವಲ್ಲಿ ಶಾಸಕನಾಗಿ ತನ್ನ ಕರ್ತವ್ಯವಿದ್ದು, ಅದನ್ನು ನಿರ್ವಹಿಸುತ್ತೇನೆ. ಸಾರ್ವಜನಿಕರ ಜೊತೆ ನಿರಂತರವಾಗಿ ಇರುತ್ತೇನೆ ಎಂದು ಶಾಸಕರು ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಹೈಟೆಕ್ ವೇದಿಕೆ ನಿರ್ಮಾಣವಾಗುತ್ತಿದೆ. ಈಗ ರಸ್ತೆಯು ಸಹ ನಿರ್ಮಾಣವಾಗುತ್ತಿದ್ದು, ಕಾಮಗಾರಿಗೆ ಅಗತ್ಯ ಸಹಕಾರ ನೀಡಬೇಕು. ಊರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮಡಿಕೇರಿಯಲ್ಲಿ ವಿದ್ಯುತ್ ಮಾರ್ಗವು ಭೂಮಿಯ ಒಳಭಾಗದಲ್ಲಿ ನಿರ್ಮಾಣವಾಗಲಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆ ಮೂಲಕ ಅನೇಕ ಅನಾನುಕೂಲತೆಗಳು ತಪ್ಪಲಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಮಾತನಾಡಿ, ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಬೈಲಾ ರಚಿಸಿ ಹಲವು ದಶಕಗಳೇ ಕಳೆದಿದೆ. ಶಾಸಕರ ನೇತೃತ್ವದಲ್ಲಿ ನೂತನ ಬೈಲಾ ರಚಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಮಡಿಕೇರಿ ದಸರಾಗೆ ಮುಂಗಡ ಪತ್ರದಲ್ಲಿ ಅನುದಾನ ನಿಗದಿ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು ಎಂದು ರಮೇಶ್ ಅವರು ಮನವಿ ಮಾಡಿದರು. ಅನೇಕ ಹಿರಿಯರು ದಸರಾ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ಮಡಿಕೇರಿ ದಸರಾ ಮಂಟಪಗಳ ಹಾಗೂ ದೇವಾಲಯಗಳ ಶಕ್ತಿ, ಪರಂಪರೆ ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ದಸರಾ ವೈಭವವನ್ನು ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಶಯ ವ್ಯಕ್ತಪಸಿದರು.

ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಬಿ.ಗಣೇಶ್ ಅವರು ಮಾತನಾಡಿ, ಶಾಸಕರು ಎಲ್ಲಾ ದೇವಾಲಯಗಳಿಗೂ ಅಗತ್ಯ ಸಹಕಾರ ನೀಡಿದ್ದಾರೆ. ಕಳೆದ ಬಾರಿ ೧.೫೦ ಕೋಟಿ ರೂ.ಬಿಡುಗಡೆ ಮಾಡಿಸಿದ್ದರು. ಈ ಬಾರಿ ೨ ಕೋಟಿ ರೂ. ಕೊಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಾರಿ ರೂ. ೨ ಕೋಟಿಗೆ ತಕ್ಕ ದಸರಾ ನಡೆದಿಲ್ಲ, ತಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿಲ್ಲ ಎಂದು ಕೆ.ಎಂ.ಬಿ. ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.

ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ದಶಮಂಟಪ ಸಮಿತಿಯಲ್ಲಿ ಹಲವು ನಿಯಮಗಳನ್ನು ಬದಲಾಯಿಸಿಕೊಂಡು ನಡೆಯಬೇಕಿದೆ ಎಂದರು. ದಸರಾ ಸಮಿತಿಗೆ ಅಗತ್ಯವಿರುವಂತೆ ದಶಮಂಟಪಗಳಿಗೂ ಬೈಲಾ ಅಗತ್ಯವಿದ್ದು, ಈ ವರ್ಷ ಎಲ್ಲರನ್ನೂ ಸೇರಿಸಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಶಾಸಕರು ಕ್ರೀಯಾಶೀಲವಾಗಿ ತೊಡಗಿಸಿಕೊಂಡು ದಸರಾ ವಿಜೃಂಭಣೆಗೆ ಶ್ರಮಿಸಿದ್ದಾರೆ ಎಂದರು.

ಕರ್ನಾಟಕ ಪ್ಲಾಂರ‍್ಸ್ ಅಸೋಶಿಯೇಷನ್ ಅಧ್ಯಕ್ಷ ಎಂ. ಕಾರ್ಯಪ್ಪ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಅರ್ಚಕರಾದ ಚಾಮಿ, ಪೌರ ಕಾರ್ಮಿಕರಾದ ಲಕ್ಷಿö್ಮ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಸಂತೋಷ್ ಅಣ್ವೇಕರ್, ದಸರಾ ಸಮಿತಿ ಉಪಾಧ್ಯಕ್ಷರಾದ ವಿ.ಜೆ.ಮೋಹನ್ ವೇದಿಕೆಯಲ್ಲಿದ್ದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತು ಕಾರ್ಯಕ್ರಮ ಸಂಚಾಲಕ ರಾಜೇಶ್ ಯಲ್ಲಪ್ಪ ಸ್ವಾಗತಿಸಿದರು. ಮುನೀರ್ ಅಹಮ್ಮದ್, ಕಾಫಿ ದಸರಾ ಸಮಿತಿ ಸಂಚಾಲಕ ಎಚ್.ಟಿ. ಅನಿಲ್ ಕಾರ್ಯಕ್ರಮ ನಿರೂಪಿಸಿದರು.