ಬೆಂಗಳೂರು, ನ. ೪: ಕೊಡಗಿನವರಾದ ಹಾಕಿ ಒಲಂಪಿಯನ್, ೧೯೮೦ರ ಇಸವಿಯಲ್ಲಿ ಮಾಸ್ಕೋದಲ್ಲಿ ನಡೆದ ಹಾಕಿ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದ ಎಂ.ಎA ಸೋಮಯ್ಯ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನವಾಗಿದ್ದು, ಅಂದು ಅವರು ಪಡೆದ ಚಿನ್ನದ ಪದಕವನ್ನೂ ಖದೀಮರು ಎತ್ತೊಯ್ದಿದ್ದಾರೆ.
ಬೆಂಗಳೂರಿನ ಊಂಐ ೩ನೇ ಹಂತದಲ್ಲಿನ ಸೋಮಯ್ಯ ಅವರ ನಿವಾಸದಲ್ಲಿ ಅ.೨೮ ರಂದು ಕಳ್ಳತನವಾಗಿದ್ದು, ಈ ಸಂದರ್ಭ ಸೋಮಯ್ಯ ಅವರು ಕೊಡಗಿನಲ್ಲಿದ್ದುದಾಗಿ ಪ್ರಕರಣಕ್ಕೆ ಸಂಬAಧಿಸಿದAತೆ ದಾಖಲಾದ ಎಫ್.ಐ.ಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲನ್ನು ಒಡೆದು ಕಳ್ಳರು ಒಳನುಗ್ಗಿ ಬೆಲೆಬಾಳುವ ವಸ್ತುಗಳೊಂದಿಗೆ ಸೋಮಯ್ಯ ಅವರು ಪಡೆದಿದ್ದ ಒಲಂಪಿಕ್ ಚಿನ್ನದ ಪದಕವನ್ನೂ ಕದ್ದೊಯ್ದಿದ್ದಾರೆ. ಅ.೨೮ ರ ಬೆಳಿಗ್ಗೆ ೭:೧೫ರ ವೇಳೆಗೆ ಪಕ್ಕದ ಮನೆಯ ನಿವಾಸಿ ನಾರಾಯಣ ಎಂಬವರಿಗೆ ಸೋಮಯ್ಯ ಅವರ ಮನೆಯ ಬಾಗಿಲು ತೆರೆದಿದ್ದು ಕಂಡು ಬಂದ ಹಿನ್ನೆಲೆ, ಆ ಸಂದರ್ಭ ಕೊಡಗಿನಲ್ಲಿದ್ದ ಸೋಮಯ್ಯ ಅವರಿಗೆ ಈ ಬಗ್ಗೆ ಅವರು ತಿಳಿಸಿದ್ದಾರೆ. ಸಿ.ಸಿ ಟಿ.ವಿ ದೃಶ್ಯವನ್ನು ಪರಿಶೀಲಿಸಿದ ಸಂದರ್ಭ ಅ.೨೮ ಮುಂಜಾನೆ ೨:೩೪ ಕ್ಕೆ ಕಳ್ಳರು ಬಾಗಿಲನ್ನು ಒಡೆದು ಕೃತ್ಯ ಎಸಗಿರುವುದು ಕಂಡು ಬಂದಿದೆ.
ಒಲಂಪಿಕ್ ಚಿನ್ನದ ಪದಕ ಮಾತ್ರವಲ್ಲದೆ, ೧೯೮೨ ನಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಸೋಮಯ್ಯ ಅವರು ಗೆದ್ದಿದ್ದ ಬೆಳ್ಳಿ ಪದಕ, ೧೯೮೬ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಕಂಚಿನ ಪದಕ ಹಾಗೂ ೧೯೮೨ ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದಿದ್ದ ಕಂಚಿನ ಪದಕವನ್ನೂ ಕದ್ದಿದ್ದಾರೆ.
ಇದು ಮಾತ್ರವಲ್ಲದೆ ರೂ.೩.೫ ಲಕ್ಷ ಬೆಲೆ ಬಾಳುವ ವಸ್ತುಗಳು, ೧೦ ಗ್ರಾಂ ಚಿನ್ನದ ಬಳೆ, ೮ ಗ್ರಾಂ ಚಿನ್ನದ ನಾಣ್ಯ, ಬೆಳ್ಳಿಯ ಇತರ ವಸ್ತುಗಳು ಹಾಗೂ ರೂ.೩೦,೦೦೦ ನಗದು ಕೂಡ ಕಳ್ಳತನವಾಗಿದೆ.
ಘಟನೆ ಸಂಬAಧ ಇಂದಿರಾನಗರ ಪೊಲೀಸರು ಬಿ.ಎನ್.ಎಸ್ ಸೆಕ್ಷನ್ ೩೩೧(೪) -ಮನೆ ಅತಿಕ್ರಮಣ ಹಾಗೂ ಸೆಕ್ಷನ್ ೩೦೫ (ಮನೆಯಲ್ಲಿ ಕಳ್ಳತನ) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.