ಪೊನ್ನಂಪೇಟೆ, ನ ೪: ಇತ್ತೀಚೆಗೆ ಮುಕ್ತಾಯಗೊಂಡ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲಿನ ಲಯನ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ತೋರಿ ಸಾಧನೆಗೈದಿದ್ದಾರೆ.

ಕ್ರೀಡಾಕೂಟದಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್, ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್, ಬಾಲಕಿಯರ ವಿಭಾಗದ ಹ್ಯಾಂಡ್ ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುವ ಶಾಲಾ ತಂಡ, ಬಾಲಕರ ವಿಭಾಗದ ಟೇಬಲ್ ಟೆನ್ನಿಸ್, ಬಾಲಕರು ಮತ್ತು ಬಾಲಕಿಯರ ವಿಭಾಗದ ಹಾಕಿ, ಬಾಲಕರ ವಿಭಾಗದ ಹ್ಯಾಂಡ್ ಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಶಾಲಾ ವಿದ್ಯಾರ್ಥಿಗಳಾದ ಭೃತಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ರಿಧಿ ದ್ವಿತೀಯ ಸ್ಥಾನ, ಬೆಳ್ಳಿಯಪ್ಪ, ೬೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಚಂದನ ದ್ವಿತೀಯ ಸ್ಥಾನ, ಪ್ರಗ್ಯ ಭಾರದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.