ನಾಪೋಕ್ಲು, ನ. ೪: ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಮಡಿಕೇರಿಯ ಮ್ಯಾನ್ಸ್ ಕಂಪೌAಡ್ ಆಟದ ಮೈದಾನದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರತಿಭೆ ಮೆರೆದು, ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವುದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪೂಜಿತ್ : ೩೦೦೦ ಮೀ. ಓಟ (ಪ್ರಥಮ), ಮನ್ವಿತ್ : ೫ ಕಿ.ಮೀ. ವೇಗದ ನಡಿಗೆ (ಪ್ರಥಮ), ಮುತ್ತಮ್ಮ : ೩ ಕಿ.ಮೀ. ವೇಗದ ನಡಿಗೆ (ಪ್ರಥಮ), ಚಿರಾಗ್ : ೮೦ ಮೀ. ಹರ್ಡಲ್ಸ್ (ಪ್ರಥಮ), ಜೋಶ್ವಾ : ಟ್ರಿಪಲ್ ಜಂಪ್ (ದ್ವಿತೀಯ) ಹಾಗೂ ಲಾಂಗ್ ಜಂಪ್ (ತೃತೀಯ), ರಚಿತ : ೮೦೦ ಮೀ. ಓಟ (ತೃತೀಯ), ಮಂಜುನಾಥ : ೧೫೦೦ ಮೀ. ಓಟ (ತೃತೀಯ) ಬಾಲಕಿಯರ ರಿಲೇ : ಬಾಲಕಿಯರ ೪*೧೦೦ ಮತ್ತು ೪ * ೪೦೦ ಮೀ. ರಿಲೇ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳು

ಕ್ರೀಡಾಕೂಟದಲ್ಲಿ ಸಾಧನೆಗೈದ ಪೂಜಿತ್, ಮನ್ವಿತ್, ಚಿರಾಗ್, ಮುತ್ತಮ್ಮ, ಜೋಶ್ವಾ, ಸುಪ್ರೀತ, ರಚಿತ, ವೀಕ್ಷಿತ ಹಾಗೂ ಯುಕ್ತಿ ಒಟ್ಟು ಒಂಬತ್ತು ವಿದ್ಯಾರ್ಥಿಗಳು ಮುಂಬರಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ಯಾಮಿಲಿ, ಪ್ರಾಂಶುಪಾಲೆ ನೀತಾ ಕೆ.ಡಿ. ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮಾರ್ಗದರ್ಶನ ನೀಡಿದ್ದರು.