ಮಡಿಕೇರಿ, ನ. ೩: ರಾಜಸ್ಥಾನದ ಪ್ರತಿಷ್ಠಿತ ರಾಜಪುತಾನ ಅರಮನೆಯಲ್ಲಿ ಅ. ೩೦ ರಂದು ಆಯೋಜನೆಗೊಂಡಿದ್ದ "ಹಾಟ್ ಮೊಂಡ್ ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ - ೨೦೨೬", ಅಂತರರಾಷ್ಟಿçÃಯ ಪ್ರತಿಭಾ ಸಾಮರ್ಥ್ಯ ಪ್ರದರ್ಶನದಲ್ಲಿ, ಕೊಡಗು ಮೂಲದ ಬೆಂಗಳೂರು ನಿವಾಸಿ, ದೀಪಿಕಾ ವಿಶ್ವನಾಥ್ ಎಡಿಕೇರಿ ಅವರು "ಹಾಟ್ ಮೊಂಡ್ ಮಿಸೆಸ್ ಇಂಡಿಯಾ ವಾಟರ್ ಎಲಿಮೆಂಟ್" ಮತ್ತು "ಹಾಟ್ ಮೊಂಡ್ ಮಿಸೆಸ್ ಐರನ್ ಲೇಡಿ" ಗಳೆಂಬ ಎರಡು ಬಿರುದುಗಳನ್ನು ಗಳಿಸಿ, ಕಿರೀಟಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪ್ರತಿಭಾ ಪ್ರದರ್ಶನದಲ್ಲಿ ಭಾರತ ಸೇರಿದಂತೆ ಅಮೇರಿಕ, ಕೆನಡಾ, ಆಸ್ಟೆçÃಲಿಯಾ, ನ್ಯೂಜಿಲ್ಯಾಂಡ್, ಯುರೋಪ್, ದುಬೈ, ಒಮಾನ್, ಸಿಂಗಪುರ್, ಸೌದಿ ಅರೇಬಿಯಾ ಹಾಗೂ ದಕ್ಷಿಣ ಪೂರ್ವ ಏಷಿಯಾ ದೇಶಗಳಿಂದಲೂ ಮಹಿಳೆಯರು ಭಾಗವಹಿಸಿದ್ದರು.