ಮಡಿಕೇರಿ, ನ. ೩: ಮಂಗಳಾದೇವಿನಗರ ಆದಿಪರಾಶಕ್ತಿ ಯುವಕ ಸಂಘದ ವತಿಯಿಂದ ತಾ. ೧೦ರಂದು ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಕೇರಂ ಪಂದ್ಯಾಟ ಹಾಗೂ ಮಕ್ಕಳ ಮಂಟಪ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆದಿಪರಾಶಕ್ತಿ ದೇವಾಲಯದ ಬಳಿ ಇರುವ ಸಮುದಾಯ ಭವನದ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಕೇರಂ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವವರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ಮಂಟಪ ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ಕೇರಂ ಸ್ಪರ್ಧೆ ಬೆಳಿಗ್ಗೆ ೯ ಗಂಟೆಯಿAದ ಆರಂಭವಾಗಲಿದ್ದು, ಸಂಜೆ ೬ ಗಂಟೆಯಿAದ ಮಂಟಪ ಸ್ಪರ್ಧೆ ಆರಂಭವಾಗಲಿದೆ ಹೆಚ್ಚಿನ ಮಾಹಿತಿಗೆ ೬೩೬೩೬೫೧೭೭೫, ೯೧೧೦೨೨೮೫೪೦ ದೂರವಾಣಿಯನ್ನು ಸಂಪರ್ಕಿಸಬಹುದಾಗಿದ್ದು ಹೆಸರು ನೋಂದಣಿಗೆ ತಾ. ೮ ಕೊನೆಯ ದಿನವಾಗಿದೆ ಎಂದು ಸಂಘದ ಅಧ್ಯಕ್ಷ ರಾಜೇಶ್ ತಿಳಿಸಿದ್ದಾರೆ.